Cat Rat figt Video : ಇಲಿ ಮತ್ತು ಬೆಕ್ಕು ಬದ್ದ ವೈರಿಗಳು. ಅಲ್ಲದೆ ಬೆಕ್ಕಿನ ಆಗಮನದ  ವಾಸನೆ ಸಿಕ್ಕಿದರೂ ಸಾಕು ಇಲಿ ಆ ಜಾಗದಲ್ಲಿ ನಿಲ್ಲುವುದಿಲ್ಲ. ಅಲ್ಲದೆ ಕಣ್ಣ ಮುಂದೆ ಇಲಿ ಇದ್ದರೆ ಬೆಕ್ಕು ಹೇಗಾದರೂ ಮಾಡಿ ಆ ಇಲಿಯನ್ನು ಗುಳುಂ ಮಾಡಿ ಬಿಡುತ್ತದೆ. ಇಲಿ ಕೂಡಾ ಅಪ್ಪಿ ತಪ್ಪಿ ಬೆಕ್ಕಿಗೆ ಎದುರು ಬದುರಾದರೆ ಬೀಸೋ ಡೋನ್ ತಪ್ಪಿದರೆ ನೂರು ವರ್ಷ ಆಯಸ್ಸು ಎನ್ನುವ ಹಾಗೆ ಎದ್ದು ಬಿದ್ದು ಓಡುತ್ತದೆ. ಕಂಡ ಬಿಲದಲ್ಲಿ ಅವಿತುಕೊಳ್ಳುತ್ತದೆ. ಆದರೆ ಇಲ್ಲೊಂದು ಇಲಿ ಬಹಳ ಧೈರ್ಯವಂತ. ಬೆಕ್ಕಿನ ಮುಂದೆ ತೊಡೆ ತಟ್ಟಿದೆ.   


COMMERCIAL BREAK
SCROLL TO CONTINUE READING

ಹೌದು ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಲಿ ಮತ್ತು ಬೆಕ್ಕಿನ ಕಾಳಗವನ್ನು ನೋಡಬಹುದು. ಇಲಿಯ ಎದುರು ದಷ್ಟ ಪುಷ್ಟವಾದ ಬೆಕ್ಕು ಬಂದು ನಿಂತಿದ್ದರೂ ಈ ಇಲಿ ಕ್ಯಾರೇ ಅನ್ನುವುದಿಲ್ಲ.ಇಲಿರಾಯನನ್ನು ನೋಡಿ ಬೆ ಕ್ಕಿಗೋ ಬಹಳ ಆನಂದ. ಹಿಡಿದು ಗಬ್ಬಕ್ಕನೆ ನುಂಗಿ ಬಿಟ್ಟರೆ ಆಹಾ ಎಂಥ ಭೋಜನ ಎನ್ನುವ ಲೆಕ್ಕಾಚಾರ ಆ ಬೆಕ್ಕಿನದ್ದು. ಇದೇ ಯೋಚನೆಯಲ್ಲಿ ಇಲಿಗೆ ಒಂದು ಬಾರಿಸಿ ಬಿಡುತ್ತದೆ. ಆದರೆ ಇಲಿ ಸುಮ್ಮನಿರಬೇಕಲ್ಲ, ಏಟಿಗೆ ತಿರುಗೇಟು ಎನ್ನುವ ಹಾಗೆ ಎಗರಿಕೊಂಡು ಬೆಕ್ಕಿಗೂ ಒಂದು ಪಂಚ್ ನೀಡುತ್ತದೆ.  ಒಂದು ಕ್ಷಣಕ್ಕೆ ಈ ವಿಡಿಯೋ ನೋಡುವಾಗ ಟಾಮ್ ಅಂಡ್ ಜೆರಿ ನೆನಪಿಗೆ ಬರುತ್ತದೆ. 


ಇದನ್ನೂ ಓದಿ : Funny Video : ಸಿಂಹದ ಮೇಲೆ ಕೋತಿಯ ಸವಾರಿ, ಮಂಗನ ಕಿತಾಪತಿಗೆ ಎದ್ದುಬಿದ್ದು ನಗ್ತೀರಾ!


 



ಇದನ್ನೂ ಓದಿ : Trending Video : ದೈತ್ಯ ಹೆಬ್ಬಾವಿನೊಂದಿಗೆ ಈಜುಕೊಳದಲ್ಲಿ ಬಾಲಕ.. ವಿಡಿಯೋ ವೈರಲ್


ಈ ವೀಡಿಯೊದಲ್ಲಿ ಕಂಡುಬರುವ ರೀತಿಯ ದೃಶ್ಯವನ್ನು ನೀವು ಕಾರ್ಟೂನ್‌ಗಳಲ್ಲಿ ಮಾತ್ರ ನೋಡಿರಬೇಕು. ಈ ವೀಡಿಯೊವನ್ನು ranthambore.vibes ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಸಾವಿರಾರು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.