ಪುಟ್ಟ ಜಿಂಕೆ ಮರಿಯನ್ನು ತನ್ನ ಮಗುವಿನಂತೆ ಮುದ್ದಿಸಿ, ರಕ್ಷಿಸಿದ ಚಿರತೆ..! ವಿಡಿಯೋ ವೈರಲ್
Viral video : ಚಿರತೆಯೊಂದು ಜಿಂಕೆ ಮರಿಯನ್ನು ಮುದ್ದಿಸಿ, ರಕ್ಷಿಸುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸದಾ ಸ್ವಾರ್ಥಪರವಾಗಿ ಯೋಚಿಸುವ ಮಾನವನಿಗಿಂತ ಕಾಡು ಪ್ರಾಣಿಗಳೆ ಎಷ್ಟೋ ಒಳ್ಳೆಯವು ಎನ್ನುವ ಸತ್ಯ ಈ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ.
Cheetah baby deer video : ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ಕರುಣೆ, ದಯೆ, ಮಮತೆ ಹೆಚ್ಚು. ಅದಕ್ಕೆ ಹಲವಾರು ಸಂಗತಿಗಳು ಉದಾರಹಣೆಯಾಗಿ ನೀಡಬಹುದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಸಖತ್ ವೈರಲ್ ಆಗಿದ್ದು, ಆ ವಿಡಿಯೋ ನೋಡಿದ್ರೆ ಕ್ರೂರ ಪ್ರಾಣಿಗಳು ಸಹ ಮಮತೆ ವಾತ್ಸಲ್ಯದ ಗುಣಗಳನ್ನು ಹೊಂದಿವೆ ಅನ್ನೋದು ಅರ್ಥವಾಗುತ್ತೆ.
ಹೌದು.. ಅದೇಷ್ಟೋ ಬಾರಿ ಕಾಡಿನಲ್ಲಿ ಮತ್ತು ನಾಡಿನಲ್ಲಿ ನಡೆಯುವ ಸಂಗತಿಗಳು ನಮ್ಮ ತಲೆಯಲ್ಲಿಯೇ ಉಳಿದುಕೊಳ್ಳುತ್ತವೆ. ನಾಯಿ ತಾಯಿ ಇಲ್ಲದ ಬೆಕ್ಕಿನ ಮರಿಗೆ ಹಾಲು ಉಣಿಸುವುದು, ಹಸು ನಾಯಿ ಮರಿಗೆ ಹಾಲು ಉಣಿಸಿವುದು ಹೀಗೆ ಹಲವಾರು ವಿಡಿಯೋಗಳನ್ನು ನೋಡಿದ್ದೇವೆ..
ಇದನ್ನೂ ಓದಿ: ತಿಂಗಳಿಗೆ 75 ಸಾವಿರ ರೂ. ಸಂಪಾದಿಸುವ ಈ ಭಿಕ್ಷುಕನ ಆಸ್ತಿ 7.5 ಕೋಟಿ! ಭಾರತದ ಈತನೇ ವಿಶ್ವದ ಅತಿ ಶ್ರೀಮಂತ ಬೆಗ್ಗರ್
ಅಲ್ಲದೆ, ಕಾಡಿನಲ್ಲಿಯೂ ಸಹ ಇಂತಹ ಅಪರೂಪದ ಘಟನೆಗಳು ಆಗಾಗ ನಡೆಯುತ್ತವೆ. ಅಚ್ಚರಿ ಅಂದ್ರೆ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕ್ರೂರ ಮೃಘಗಳು ಸಹ ಮಾನವೀಯತೆ ಅಂತ ಬಂದಾಗ ತಮ್ಮ ದೃಷ್ಟಿಯನ್ನು ಬದಲಾಯಿಸಿಕೊಳ್ಳುತ್ತವೆ. ಸಧ್ಯ ಈ ಕುರಿತು ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
“ಏಕೆಂದರೆ ನಾನು…”- 53 ವರ್ಷ ವಯಸ್ಸಾದ್ರೂ ಮದುವೆಯಾಗದಿರಲು ಇದೇ ಕಾರಣ ಎಂದ ರಾಹುಲ್ ಗಾಂಧಿ
ಇನ್ನು ಅಚ್ಚರಿಯ ವಿಷಯ ಏನಪ್ಪಾ ಅಂದ್ರೆ, ಆ ಪುಟ್ಟ ಜಿಂಕೆ ಮರಿಯ ಮೇಲೆ ಹೈನಾ ದಾಳಿ ಮಾಡಲು ಬರುತ್ತೆ ಎನ್ನುವ ಸೂಚನೆ ಅರಿತ ಚಿರತೆ ತಕ್ಷಣ ಜಿಂಕೆಮರಿಯನ್ನು ತನ್ನ ಬಾಯಲ್ಲಿ ಕಚ್ಚಿ ಮರದ ಮೇಲೆ ತೆಗೆದುಕೊಂಡು ಹೋಗಿ ರಕ್ಷಣೆ ಮಾಡುತ್ತದೆ. ಒಟ್ಟಾರೆಯಾಗಿ ಸದಾ ಸ್ವಾರ್ಥಪರವಾಗಿ ಯೋಚಿಸುವ ಮಾನವನಿಗಿಂತ ಪ್ರಾಣಿಗಳು ಎಷ್ಟೋ ಒಳ್ಳೆಯವು ಎನ್ನುವ ಸತ್ಯ ಈ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.