Viral Video : ಸೂರ್ಯ ನಮಸ್ಕಾರ ಮಾಡುತ್ತಿರುವ ಚಿರತೆ ! ಪ್ರಾಣಿಯ ಆರೋಗ್ಯ ಕಾಳಜಿಗೆ ತಲೆಬಾಗದವರುಂಟೆ !
Viral Video :21 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ನಿದ್ದೆಯಿಂದ ಎದ್ದ ಚಿರತೆಯೊಂದು ಮಾರ್ನಿಂಗ್ ಸ್ಟ್ರೆಚ್ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಕಂಡು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Viral Video : ನಮ್ಮಲ್ಲಿ ಅನೇಕರು ನಿತ್ಯ ಸೂರ್ಯ ನಮಸ್ಕಾರ ಮಾಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸುವ ವಿಧಾನ ಇದಾಗಿದೆ. ಆದರೆ ಯಾವತ್ತಾದರೂ ಕಾಡುಪ್ರಾಣಿ ಸೂರ್ಯ ನಮಸ್ಕಾರ ಮಾಡಿರುವ ಬಗ್ಗೆ ನೋಡಿರಲಿಕ್ಕೂ ಇಲ್ಲ ಕೇಳಿರಲಿಕ್ಕೂ ಇಲ್ಲ. ಆದರೆ ಇದು ಸತ್ಯ. ಕಾಡಿನಲ್ಲಿರುವ ಚಿರತೆಯೊಂದು ಸೂರ್ಯ ನಮಸ್ಕಾರ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸಾಕೇತ್ ಬಡೋಲಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ರಿಶೇರ್ ಮಾಡಿದ್ದಾರೆ.
21 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ನಿದ್ದೆಯಿಂದ ಎದ್ದ ಚಿರತೆಯೊಂದು ಮಾರ್ನಿಂಗ್ ಸ್ಟ್ರೆಚ್ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಹಂಚಿಕೊಂಡಿರುವ ಸಾಕೇತ್ ಬಡೋಲಾ ಪ್ರಕಾರ, ಈ ವೀಡಿಯೊವನ್ನು ರಷ್ಯಾದ ಫಾರ್ ಈಸ್ಟ್ಸ್ ಲ್ಯಾಂಡ್ ಆಫ್ ದಿ ಲೆಪರ್ಡ್ ನ್ಯಾಶನಲ್ ಪಾರ್ಕ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ.
ಇದನ್ನೂ ಓದಿ : Viral Video : ಮದುವೆ ಮಂಟಪದಲ್ಲಿ ವರ ಮಾಡಿದ ಕೆಲಸಕ್ಕೆ ನಾಚಿ ನೀರಾದ ವಧು
ಇಲ್ಲಿಯವರೆಗೆ, ಈ ವೀಡಿಯೊ ಕ್ಲಿಪ್ ಅನ್ನು 19 ಸಾವಿರ ಮಂದಿ ವೀಕ್ಷಿಸಿದ್ದಾರೆ. ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಕಂಡು ಬೆರಗಾಗಿದ್ದಾರೆ. ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಮನದ ಭಾವವನ್ನು ಹಂಚಿಕೊಳ್ಳುತ್ತಿದ್ದಾರೆ.
Flying Snake : ಗಾಳಿಯಲ್ಲಿ ಹಾರಾಡುವ ಹಾವು! ಮೈನವಿರೇಳಿಸುವ ವಿಡಿಯೋ ವೈರಲ್
ಪ್ರಕೃತಿಯನ್ನು ಅನುಸರಿಸಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ಎಂದ ಒಬ್ಬರು ಬರೆದಿದ್ದರೆ, ಇನ್ನೊಬ್ಬರು ನೋಡುವುದಕ್ಕೆ "ಆಸಕ್ತಿದಾಯಕವಾಗಿದ್ದು ಸಾಕಷ್ಟು ನಿಖರವಾಗಿದೆ ಎಂದಿದ್ದಾರೆ. ಇನ್ನು ಯೋಗ ಸೇ ಹಿ ಹೋಗಾ, "ಎಂತಹ ಅದ್ಭುತ ವಿಡಿಯೋ!" ಹೀಗೆ ನಾನಾ ರೀತಿಯಲ್ಲಿ ಈ ವಿಡಿಯೋಗೆ ಕಾಮೆಂಟ್ ಗಳು ಹರಿದು ಬಂದಿವೆ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...