Viral Video : ಮದುವೆ ಮಂಟಪದಲ್ಲಿ ವರ ಮಾಡಿದ ಕೆಲಸಕ್ಕೆ ನಾಚಿ ನೀರಾದ ವಧು

Wedding Viral Video : ಮದುವೆ  ಮಂಟಪದಲ್ಲಿ ವರನ ಮುಗ್ದತೆಯ ವಿಡಿಯೋ ಇದು. ತಾನು ಮಾಡಿರುವುದು ತಪ್ಪು ಎಂದು ತಿಳಿದಾಗ ನಗುವ ವರ. ವರನ ವರ್ತನೆಗೆ ನಾಚಿ ನೀರಾಗುವ ವಧು. ಒಟ್ಟಿನಲ್ಲಿ ಬಹಳ ಮುದ್ದಾಗಿದೆ ಈ ವಿಡಿಯೋ .

Written by - Ranjitha R K | Last Updated : Mar 28, 2023, 12:50 PM IST
  • ಮದುವೆ ಪ್ರತಿಯೊಬ್ಬನ ಜೀವನದ ಸುಂದರ ಕ್ಷಣ.
  • ಮದುವೆ ದಿನದ ಒಂದೊಂದು ಕ್ಷಣವೂ ಅಮೂಲ್ಯ.
  • ವೈರಲ್ ಆಯಿತು ಮದುವೆಯಾ ಸುಂದರ ವಿಡಿಯೋ
Viral Video : ಮದುವೆ ಮಂಟಪದಲ್ಲಿ ವರ ಮಾಡಿದ ಕೆಲಸಕ್ಕೆ ನಾಚಿ ನೀರಾದ ವಧು  title=

Wedding Viral Video : ಮದುವೆ ಪ್ರತಿಯೊಬ್ಬನ ಜೀವನದ ಸುಂದರ ಕ್ಷಣ. ಮದುವೆ ದಿನದ ಒಂದೊಂದು ಕ್ಷಣವೂ ಕೂಡಾ ಬಹಳ ಅಮೂಲ್ಯವಾದದ್ದು. ಈ ಸಂದರ ಕ್ಷಣಗಳನು ನಮ್ಮ ಜೀವನದ ಕೊನೆಯವರೆಗೂ ಮೆಲುಕು ಹಾಕುತ್ತಲೇ ಇರುತ್ತೇವೆ. ಒಮ್ಮೊಮ್ಮೆ ಮದುವೆ ದಿನವೇ ಕೆಲವೊಂದು ಹಾಸ್ಯ ಸನ್ನಿವೇಶಗಳು ಸೃಷ್ಟಿಯಾಗುತ್ತವೆ.  ಎಲ್ಲರೆದುರು ಇಂಥಹ ಘಟನೆಗಳು ನಡೆದಾಗ ಏನು ಮಾಡುವುದೋ ತೋಚುವುದಿಲ್ಲ. 

ಇಲ್ಲಿ ಒಂದು ಮದುವೆಯಲ್ಲಿ ಅಂಥಹ ಘಟನೆ ನಡೆದಿದೆ. ಇದನ್ನು ಅಲ್ಲೇ  ಇದ್ದವರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ನಿಜಕ್ಕೂ ಬಹಳ ತಮಾಷೆಯಾಗಿದೆ. ಮತ್ತೆ ಮತ್ತೆ ನೋಡಬೇಕು ಅನ್ನಿಸುವಷ್ಟು ಮುದ್ದಾಗಿದೆ. 

ಇದನ್ನೂ ಓದಿ : Video: ಫುಟ್ಬಾಲ್ ಆಡುತ್ತಿರುವ ಮುದ್ದಾದ ಆನೆ ಮರಿ, ಕ್ಯೂಟ್‌ ವಿಡಿಯೋ ವೈರಲ್‌

ಮದುವೆ ಅಂದ ಮೇಲೆ ಅಲ್ಲಿ ಶಾಸ್ತ್ರಗಳಿಗೆ ಕೊರತೆಯಿಲ್ಲ. ಮಂಟಪ ಏರುವುದಕ್ಕೂ ಮುನ್ನ ಶಾಸ್ತ್ರ. ಮಂಟಪ ಏರಿದ ಮೇಲೂ ಶಾಸ್ತ್ರ. ಕೆಲವೊಮ್ಮೆ ಈ ಶಾಸ್ತ್ರಗಳೇ ವಧು ವರರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಇಲ್ಲಿ ಆದದ್ದೂ ಇದೇ. ತಾಳಿ ಕಟ್ಟಿದ ಮೇಲೆ ವರ ತಾಳಿಗೆ ಅರಶಿನ ಕುಂಕುಮ ಹಚ್ಚುವುದು ಶಾಸ್ತ್ರ. ಇದಾದ ಮೇಲೆ ವಧುವಿನ ಹಣೆಗೂ ಕುಂಕುಮ ಇಡಬೇಕು. ಇಲ್ಲಿ  ಮಾಂಗಲ್ಯ ಧಾರಣೆ ಬಳಿಕ ವಧುವಿಗೆ ಕುಂಕುಮ ಹಚ್ಚಬೇಕಾದ ಸಂದರ್ಭದಲ್ಲಿ ನಡೆದ ಫನ್ನಿ ಸೀನ್ ಇಲ್ಲಿದೆ. 

 

ಇದನ್ನೂ ಓದಿ : Viral Video: ಅಜ್ಜನ ಬೈಕ್ ಸ್ಟಂಟ್‌ ಸೂಪರೋ ಸೂಪರ್‌.. ಹರೆಯದ ಹುಡುಗರನ್ನೂ ಮೀರಿಸಿದ ತಾತ!

ವರನ  ಈ ವರ್ತನೆ ನೋಡಿ ವಧು ನಾಚಿ ತಲೆ ಬಾಗುತ್ತಾಳೆ. ಈ ವಿಡಿಯೋವನ್ನು SwatKat ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ ಇಷ್ಟ ಪಟ್ಟಿದ್ದಾರೆ. 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News