China Yao women 7 feet hair: ಇತ್ತೀಚಿನ ದಿನಗಳಲ್ಲಿ ಸಣ್ಣ ಕೂದಲು ಹುಡುಗಿಯರಲ್ಲಿ ಫ್ಯಾಷನ್ ಟ್ರೆಂಡ್ ಆದರೆ ಉದ್ದ ಕೂದಲು ಹುಡುಗರಲ್ಲಿ ಫ್ಯಾಷನ್ ಟ್ರೆಂಡ್ ಆಗುತ್ತಿದೆ. ಹೀಗಿರುವಾಗ ಉದ್ದನೆಯ ಕೂದಲಿನ ಬಯಕೆ ಹುಡುಗ ಮತ್ತು ಹುಡುಗಿಯರಿಬ್ಬರಿಗೂ ಒಂದೇ ಆಗಿರುತ್ತದೆ. ಆದರೆ ಉದ್ದನೆಯ, ದಟ್ಟವಾದ ಕೂದಲು ಬೆಳೆಯುವುದು ಎಲ್ಲರಿಗೂ ಸಾಧ್ಯವಾಗುವ ಸಂಗತಿಯಲ್ಲ.ಅದಕ್ಕಾಗಿ ಹಲವು ಸಲಹೆಗಳನ್ನು ಪಾಲಿಸಬೇಕು. ಆದರೆ ಜಗತ್ತಿನಲ್ಲಿ ಒಂದು ಗ್ರಾಮವಿದೆ, ಅಲ್ಲಿ ಪ್ರತಿ ಮಹಿಳೆಯ ಕೂದಲು 6-7 ಅಡಿ ಉದ್ದವಿರುತ್ತದೆ. ಈ ಮಹಿಳೆಯರು ತಮ್ಮ ಜೀವನದಲ್ಲಿ ಕೇವಲ ಒಂದೆ ಒಂದು ಭಾರಿ ತಮ್ಮ ಕೂದಲನ್ನು ಕತ್ತರಿಸುತ್ತಾರೆ.


COMMERCIAL BREAK
SCROLL TO CONTINUE READING

ಚೀನಾದ ದಕ್ಷಿಣ ಭಾಗದಲ್ಲಿ ಗುಯಿಲಿನ್ ಎಂಬ ನಗರವಿದೆ. ಇಲ್ಲಿಂದ 2 ಗಂಟೆಗಳ ದೂರದಲ್ಲಿ ಹುವಾಂಗ್ಲು ಎಂಬ ಗ್ರಾಮವಿದೆ. ಈ ಪಟ್ಟಣವನ್ನು ಪ್ರವೇಶಿಸಿದಾಗ, ಇದು ಮೊದಲು ಸಾಮಾನ್ಯ ಹಳ್ಳಿಯಂತೆ ಕಾಣುತ್ತದೆ. ಆದರೆ ಇಲ್ಲಿನ ಹೆಂಗಸರನ್ನು ಕಂಡರೆ ನೀವು ಬೆಚ್ಚಿ ಬೀಳುತ್ತೀರಿ. ಏಕೆಂದರೆ ಇಲ್ಲಿನ ಮಹಿಳೆಯರ ಕೂದಲು ಅವರ ಎತ್ತರಕ್ಕಿಂತ ಉದ್ದವಾಗಿರುತ್ತದೆ. ಈ ಮಹಿಳೆಯರಿಗೆ 4 ಅಡಿಗೂ ಹೆಚ್ಚು ಉದ್ದ ಕೂದಲು ಇರುವುದು ಸಾಮಾನ್ಯ. ಹೆಚ್ಚಿನವರಿಗೆ 6-7 ಅಡಿ ಕೂದಲಿರುವುದು ಕಂಡು ಬರುತ್ತದೆ. 2004 ರಲ್ಲಿ, ಮಹಿಳೆಯ ಕೂದಲಿನ ಉದ್ದವನ್ನು 7 ಅಡಿಗಳವರೆಗೆ ಅಳೆಯಲಾಯಿತು.


ಈ ಹಳ್ಳಿಯ ಹೆಂಗಸರ ಕೂದಲು 1 ಕೆಜಿಯವರೆಗೂ ಇರುತ್ತದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ಯಾವೋ ಮಹಿಳೆಯರು ತಮ್ಮ ಕೂದಲನ್ನು ಉದ್ದವಾಗಿ ಇಟ್ಟುಕೊಳ್ಳುತ್ತಾರೆ, ಜೀವನದಲ್ಲಿ ಕೇವಲ ಒಂದೆ ಒಂದು ಭಾರಿ ಕೂದಲನ್ನು ಕತ್ತರಿಸುತ್ತಾರೆ. ಇಲ್ಲಿನ ಪ್ರಾಂತ್ಯದ ಮಹಿಳೆಯರಿಗೆ 17-18 ವರ್ಷ ವಯಸ್ಸಿನವರಾಗಿದ್ದಾಗ ಅವರ ಕೂದಲನ್ನು ಕತ್ತರಿಸಲಾಗುತ್ತದೆ, ಈ ಕೂದಲು ಕತ್ತರಿಸುವುದನ್ನು ಈ ಪ್ರಾಂತ್ಯದ ಜನ ಒಂದು ಆಚರಣೆಯಂತೆ ಪಾಲಿಸುತ್ತಾರೆ. ಇದಾದ ನಂತರ ಈ ಮಹಿಳೆಯರು ಮತ್ತೆಂದು ತಮ್ಮ ಕೂದಲಿಗೆ ಕತ್ತರಿ ಹಾಕುವುದಿಲ್ಲ. ಕೂದಲು ಉದ್ದ ಮತ್ತು ದಪ್ಪವಾಗಿರಲು ಸಾಕಷ್ಟು ಕಾಳಜಿ ವಹಿಸಬೇಕು. ಆದರೆ ಇಲ್ಲಿನ ಮಹಿಳೆಯರು ತಾವೇ ಸ್ಪೆಷಲ್ ಶಾಂಪೂ ತಯಾರಿಸುತ್ತಾರೆ. ಚಹಾ, ಕೂದಲು ಮತ್ತು ಇತರ ಅನೇಕ ಗಿಡಮೂಲಿಕೆಗಳನ್ನು ಸಹ ಇದರಲ್ಲಿ ಬಳಸಲಾಗುತ್ತದೆ.


ಇಲ್ಲಿನ ಮಹಿಳೆಯರು ತಮ್ಮ ಪೂರ್ವಜರ ಗೌರವಾರ್ಥವಾಗಿ ತಮ್ಮ ಕೂದಲನ್ನು ಬೆಳೆಸುತ್ತಾರೆ. ಕೂದಲು ಪೂರ್ವಜರೊಂದಿಗೆ ಸಂವಹನದ ಮಾಧ್ಯಮವಾಗಿದೆ ಎಂದು ಅವರು ನಂಬುತ್ತಾರೆ. ಅದಕ್ಕಾಗಿಯೇ ಅವರು ತನ್ನ ಪೂರ್ವಜರನ್ನು ಮೆಚ್ಚಿಸಲು ತನ್ನ ಕೂದಲನ್ನು ಕತ್ತರಿಸದೆ ಹಾಗೆಯೇ ಇಟ್ಟುಕೊಳ್ಳುತ್ತಾರೆ. ಅವಿವಾಹಿತ ಮಹಿಳೆಯರು ತಮ್ಮ ಕೂದಲನ್ನು ಸ್ಕಾರ್ಫ್‌ನಿಂದ ಕಟ್ಟುತ್ತಾರೆ, ವಿವಾಹಿತ ಮಹಿಳೆಯರು ತಮ್ಮ ಕೂದಲನ್ನು ಮುಂಭಾಗದಲ್ಲಿ ಬನ್‌ನಲ್ಲಿ ಕಟ್ಟುತ್ತಾರೆ. ಯಾವೋ ಮಹಿಳೆಯರ ನೃತ್ಯವು ಸಾಮಾನ್ಯವಾಗಿ ಚರ್ಚೆಯ ವಿಷಯವಾಗಿದೆ. ಅವರ ಸಂಸ್ಕೃತಿಯನ್ನು ನೋಡಲು ಅನೇಕ ಪ್ರವಾಸಿಗರು ತಮ್ಮ ಹಳ್ಳಿಗಳಿಗೆ ಭೇಟಿ ನೀಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್