coconut merchant house wedding: ತೆಂಗಿನಕಾಯಿ ವ್ಯಾಪಾರಿಯು ಇಡೀ ಕಲ್ಯಾಣ ಮಂಟಪವೇ ತೆಂಗಿನಕಾಯಿಯ ಸಿಂಗಾರದಿಂದ ತುಂಬಿ ಕಂಗೊಳಿಸುತ್ತಿದೆಯೋ ಏನೋ ಅನ್ನೋ ರೀತಿಯಲ್ಲಿ ಪ್ರಕಾಶಿಸುವಂತೆ  ಮಾಡಿದ್ರೂ.


COMMERCIAL BREAK
SCROLL TO CONTINUE READING

ಇಂದು ಜಗತ್ತೇ ಸೋಷಿಯಲ್‌ ಮೀಡಿಯಾ ಯುಗವಾಗಿದೆ.ಒಂದಲ್ಲಾ ಒಂದು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಲೇ ಇರುತ್ತದೆ.ವಿಡಿಯೋಗಳ ಕಥೆಯಂತೂ ಕೇಳೊದೇ ಬೇಡ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ರೋಮಾಂಚನಕಾರಿಯಾಗಿ ಇರುತ್ತವೆ. ಸ್ವಲ್ಪ ಹಾಸ್ಯಭರಿತವಾಗಿ, ಭಾವನಾತ್ಮಕಾಗಿ ವಿಭಿನ್ನವಾಗಿ ಇದ್ದರಂತೂ ಆ ವಿಡಿಯೋ ವೈರಲ್‌ ಹಾಗೋದ್ರಲ್ಲಿ ಬೇರೆ ಮಾತೇ ಇಲ್ಲ. ಅಂತಹದೇ ಒಂದು ವಿಡಿಯೋ ಈಗ ತಮಿಳುನಾಡಿನ ಪೊಲ್ಲಚ್ಚಿಯ ತೆಂಗಿನಕಾಯಿ ವ್ಯಾಪಾರಿಯ ಮದುವೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.ಇಲ್ಲಿ ಮದುವೆಯ ಸಂಭ್ರಮಕ್ಕಿಂತ ಅಲ್ಲಿ ಸಿದ್ದಗೊಂಡ ತೆಂಗಿನಕಾಯಿ  ಊಟೋಪಚಾರದ ವ್ಯವಸ್ಥೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ.


ಮದುವೆ ವೇಳೆ ಬಂದ ಅತಿಥಿಗಳು ದೃಷ್ಟಿ ಹಾಯಿಸಿದಲ್ಲೆಲ್ಲಾ ತೆಂಗಿನಕಾಯಿಯೇ ಕಾಣುವಂತೆ ವ್ಯವಸ್ಥೆ ಮಾಡಿದ್ದಾರೆ.ಊಟಕ್ಕೆ ಕೂರುವ ಅತಿಥಿಗಳನ್ನು ಒಡೆದು ಹೊಳಾದ ತೆಂಗಿನಕಾಯಿ ಮಾದರಿಯ ಒಂದು ಗೂಡಿನಲ್ಲಿ ಕೂರಿಸಿ ತೆಂಗಿನಕಾಯಿ ಹೋಳಿನ ರೀತಿಯ ಟೇಬಲ್‌ ವ್ಯವಸ್ಥೆ ಮಾಡಿ ಅದರ ಮೇಲೆ ತಟ್ಟೆ ಇಟ್ಟು ಎಲ್ಲರಿಗೂ ಊಟ ಬಡಿಸಿ  ಊಟವನ್ನು ಸವೀಯುವಂತೆ ತಯಾರಿ ಮಾಡಿದ್ದಾರೆ. 


ತೆಂಗಿನಕಾಯಿ ವ್ಯಾಪಾರಿಯು ಇಡೀ ಕಲ್ಯಾಣ ಮಂಟಪವೇ ತೆಂಗಿನಕಾಯಿಯ ಸಿಂಗಾರದಿಂದ ತುಂಬಿ ಕಂಗೊಳಿಸುತ್ತಿದೆಯೋ ಏನೋ ಅನ್ನೋ ರೀತಿಯಲ್ಲಿ ಪ್ರಕಾಶಿಸುವಂತೆ  ಮಾಡಿದ್ರೂ.ಈ ವಿಭಿನ್ನ ಹಾಗೂ ವಿಶೇಷ ಪ್ರಯತ್ನದ ವ್ಯವಸ್ಥೆಯನ್ನು ನೋಡಿ ನೆಟ್ಟಿಗರು ಈ ವಿಡಿಯೋಗೆ ಮಾರು ಹೋಗಿದ್ದಾರೆ.


ಈ ವಿಡಿಯೋ ನೋಡಿದ ವೀಕ್ಷಕರು ಹಲವು ರೀತಿಯಾ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.ಇವರು ತೆಂಗಿನಕಾಯಿ ವ್ಯಾಪರಿಯಾಗಿದ್ದಕ್ಕೆ ಹೀಗೆ ಮಾಡಿದ್ದಾರೆ.ಒಂದು ವೇಳೆ ಬೇರೆ ವಸ್ತುಗಳ ವ್ಯಾಪಾರಿ ಆಗಿದ್ರೆ  ಮದುವೆಯ ತಯಾರಿ ಹೇಗಿರುತ್ತಿತ್ತು ಎಂಬ ಕುತೂಹಲ ಮೂಡ್ತಿದೆ ಎಂದು ಹಾಸ್ಯಭಾರಿತವಾದ ಕಮೆಂಟ್‌ಗಳನ್ನು ನೆಟ್ಟಿಗರು ಮಾಡ್ತಿದ್ದಾರೆ.ಇದೆಲ್ಲದರ ಆಚೆಗೂ ಕೂಡ ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು,  ಅನೇಕರು ಊಟದ ವ್ಯವಸ್ಥೆಯನ್ನು ನೋಡಿ ಹೀಗೂ ಮಾಡಬಹುದಾ ಎಂದೂ ಆಶ್ಚಯಾ೯ ಪಡುತ್ತಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.