Viral Video : ಸೋಷಿಯಲ್ ಮೀಡಿಯಾ ಲೋಕದಲ್ಲಿ ಕೆಲವೊಮ್ಮೆ ನಗು ತಡೆಯುವುದು ಕಷ್ಟ ಎನ್ನುವಂತಹ ವಿಷಯಗಳು ಮುನ್ನೆಲೆಗೆ ಬರುತ್ತವೆ. ಅಂತಹ ವಿಡಿಯೋಗಳು ಅಪ್‌ಲೋಡ್ ಮಾಡಿದ ನಂತರ ಬಹಳ ಸಮಯದವರೆಗೆ ಜನಮನದಲ್ಲಿ ಉಳಿಯುತ್ತವೆ ಮತ್ತು ತಿಂಗಳುಗಟ್ಟಲೆ ನೆಟಿಜನ್‌ಗಳು ಇವುಗಳನ್ನು ವೀಕ್ಷಿಸುತ್ತಾರೆ. ಅಂತಹ ತಮಾಷೆಯ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. ಹುಡುಗಿಗೆ ಸ್ಕೂಟಿ ಕಲಿಸಲು ಹೋದ ಹುಡುಗನಿಗೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದೆ. ಹುಡುಗ-ಹುಡುಗಿಯ ಈ ವಿಡಿಯೋ ಇದುವರೆಗೂ ಸಾವಿರಾರು ಲೈಕ್ ಮತ್ತು ವೀಕ್ಷಣೆಗಳನ್ನು ಪಡೆದಿದೆ.


COMMERCIAL BREAK
SCROLL TO CONTINUE READING

ಕೆಲ ಸೆಕೆಂಡ್‌ಗಳ ವಿಡಿಯೋವನ್ನು ನೋಡಿದಾಗ ಯುವಕ ಕಾಲೇಜಿನಿಂದ ಮನೆಗೆ ತೆರಳಲು ಸ್ಕೂಟಿ ಸ್ಟಾರ್ಟ್ ಮಾಡಿರುವುದು ಗೊತ್ತಾಗುತ್ತದೆ. ಅವನ ಬಳಿಗೆ ಹುಡುಗಿ ಒಬ್ಬಳು ಬರುತ್ತಾಳೆ. ಸ್ಕೂಟಿ ಓಡಿಸುವುದನ್ನೂ ಹೇಳಿಕೊಡಬೇಕು ಎಂದು ಕೇಳುತ್ತಾಳೆ. ಹುಡುಗ ಕೂಡ ತಕ್ಷಣ ತಯಾರಾಗಿ ಇಬ್ಬರೂ ತೆರೆದ ಮೈದಾನವನ್ನು ತಲುಪುತ್ತಾರೆ. ಈಗ ಹುಡುಗಿಯನ್ನು ಮುಂದೆ ಕೂರಿಸಿಕೊಂಡು ಹುಡುಗ ತಾನೂ ಹಿಂದೆ ಕುಳಿತುಕೊಳ್ಳುತ್ತಾನೆ. ಸ್ಕೂಟರ್‌ ಬಗ್ಗೆ ಹುಡುಗಿಗೆ ವಿವರಿಸುತ್ತಾನೆ.


ಇದನ್ನೂ ಓದಿ : Viral Video : ಮೆಟ್ರೋದಲ್ಲಿ ವಿಚಿತ್ರ ಬಟ್ಟೆ ಧರಿಸಿ ಬಂದ ಹುಡುಗಿ, ಉರ್ಫಿಯನ್ನೂ ಮೀರಿಸಿದ ಡ್ರೆಸ್ಸಿಂಗ್ ಸೆನ್ಸ್!


ಇಲ್ಲಿ ಹುಡುಗಿ ಎಲ್ಲವನ್ನೂ ಅರ್ಥಮಾಡಿಕೊಂಡಂತೆ ಕಾಣುತ್ತಾಳೆ. ಆಗ ಹುಡುಗ ಕೂಡ ತಕ್ಷಣವೇ ಸ್ಕೂಟಿಯನ್ನು ನಿಧಾನವಾಗಿ ಚಲಿಸಲು ಪ್ರಾರಂಭಿಸಿದನು. ಹುಡುಗ ಈಗ ಸ್ಕೂಟಿಯ ನಿಯಂತ್ರಣವನ್ನು ಹುಡುಗಿಗೆ ನೀಡುತ್ತಾನೆ. ಆದರೆ ಇದು ಅವನ ದೊಡ್ಡ ತಪ್ಪು. ಹುಡುಗ ಹುಡುಗಿಗೆ ಸ್ಕೂಟಿಯ ನಿಯಂತ್ರಣವನ್ನು ನೀಡಿದ ತಕ್ಷಣ ಅದರ ಬ್ಯಾಲೆನ್ಸ್‌ ಮಿಸ್‌ ಆಗುವುದನ್ನು ಕಾಣಬಹುದು. ಕಂಟ್ರೋಲ್‌ ಕೂಡ ಎಷ್ಟರ ಮಟ್ಟಿಗೆ ಹದಗೆಟ್ಟಿತು ಎಂದರೆ ಆ ಹುಡುಗನಿಗೂ ಅದನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಇದಾದ ನಂತರ ಇಬ್ಬರೂ ಜೋರಾಗಿ ಸ್ಕಿಡ್‌ ಆಗಿ ಬೀಳುತ್ತಾರೆ. ನಿಜವಾಗಿ ಸ್ವಲ್ಪ ದೂರ ಹೋದ ಮೇಲೆ ಸ್ಕೂಟಿ ಬಿದ್ದಿತ್ತು. ಸ್ಕೂಟಿ ಜೊತೆಗೆ ಇಬ್ಬರೂ ತಾವೇ ಮೇಲೇಳಲಾರದಷ್ಟು ಜೋರಾಗಿ ಬಿದ್ದಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by SAKHT LOGG 🔥 (@sakhtlogg)


 


ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರಿಗೆ ನಗು ತಡೆಯಲಾಗುತ್ತಿಲ್ಲ. sakhtlogg ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನೇಕರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ : Viral Video: ಹಿಂದೊಂದು, ಮುಂದೊಂದು ಹುಡುಗಿರನ್ನ ಕೂರಿಸಿ ಡೇಂಜರಸ್ ಬೈಕ್ ವೀಲಿಂಗ್ ಮಾಡಿದ ಯುವಕ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.