Viral Video: ಹಿಂದೊಂದು, ಮುಂದೊಂದು ಹುಡುಗಿರನ್ನ ಕೂರಿಸಿ ಡೇಂಜರಸ್ ಬೈಕ್ ವೀಲಿಂಗ್ ಮಾಡಿದ ಯುವಕ!

Dangerous Bike Stunt Viral Video: ವೀಡಿಯೊದಲ್ಲಿ ಕಾಣಿಸುತ್ತಿರುವಂತೆ ಈ ಮೂವರು ಕೂಡ ಹೆಲ್ಮೆಟ್ ಧರಿಸಿಲ್ಲ. ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಪೊಥೋಲ್ ಫೌಂಡೇಶನ್, "ಮುಂದೊಂದು ಹಿಂದೊಂದು.. ಹೆಲ್ಮೆಟ್ ಇಲ್ಲ ಮತ್ತು ವಿಲಕ್ಷಣವಾಗಿ ಮಾಡುತ್ತಿರುವ ಅಪಾಯಕಾರಿ ಸಾಹಸ" ಎಂದು ಬರೆದಿದ್ದಾರೆ.

Written by - Bhavishya Shetty | Last Updated : Apr 1, 2023, 10:58 PM IST
    • ಓರ್ವ ಯುವಕ ಬೈಕ್’ನಲ್ಲಿ ಇಬ್ಬರು ಹುಡುಗಿಯರನ್ನು ಹಿಂದೆ ಮುಂದೆ ಕೂರಿಸಿಕೊಂಡು ಬೈಕ್ ವೀಲಿಂಗ್ ಮಾಡುತ್ತಿದ್ದಾನೆ
    • ವಿಡಿಯೋ ವೈರಲ್ ಆದ ನಂತರ ಮುಂಬೈ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
    • ಟ್ವಿಟರ್‌ನಲ್ಲಿ ಮುಂಬೈ ಟ್ರಾಫಿಕ್ ಪೊಲೀಸರು ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
Viral Video: ಹಿಂದೊಂದು, ಮುಂದೊಂದು ಹುಡುಗಿರನ್ನ ಕೂರಿಸಿ ಡೇಂಜರಸ್ ಬೈಕ್ ವೀಲಿಂಗ್ ಮಾಡಿದ ಯುವಕ!  title=
Dangerous Bike Stunt

Dangerous Bike Stunt Viral Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡಿದರೆ, ಇನ್ನೂ ಕೆಲವು ಭಯವನ್ನುಂಟು ಮಾಡುತ್ತದೆ. ಇಂದು ನಾವು ಹೇಳಹೊರಟಿರುವ ವಿಡಿಯೋ ಕೂಡ ಅಂತಹದ್ದೇ. ಈ ವಿಡಿಯೋದಲ್ಲಿ ಕಾಣುತ್ತಿರುವಂತೆ ಓರ್ವ ಯುವಕ ಬೈಕ್’ನಲ್ಲಿ ಇಬ್ಬರು ಹುಡುಗಿಯರನ್ನು ಹಿಂದೆ ಮುಂದೆ ಕೂರಿಸಿಕೊಂಡು ಡೇಂಜರಸ್ ಬೈಕ್ ವೀಲಿಂಗ್ ಮಾಡುತ್ತಿದ್ದಾನೆ.

ಇದನ್ನೂ ಓದಿ: Viral Video: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ

ವೀಡಿಯೊದಲ್ಲಿ ಕಾಣಿಸುತ್ತಿರುವಂತೆ ಈ ಮೂವರು ಕೂಡ ಹೆಲ್ಮೆಟ್ ಧರಿಸಿಲ್ಲ. ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಪೊಥೋಲ್ ಫೌಂಡೇಶನ್, "ಮುಂದೊಂದು ಹಿಂದೊಂದು.. ಹೆಲ್ಮೆಟ್ ಇಲ್ಲ ಮತ್ತು ವಿಲಕ್ಷಣವಾಗಿ ಮಾಡುತ್ತಿರುವ ಅಪಾಯಕಾರಿ ಸಾಹಸ" ಎಂದು ಬರೆದಿದ್ದಾರೆ.

ಮೂವರ ವಿರುದ್ಧ ಪ್ರಕರಣ:

ವಿಡಿಯೋ ವೈರಲ್ ಆದ ನಂತರ ಮುಂಬೈ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279 (ಅಪವೇಗದ ಚಾಲನೆ) ಮತ್ತು 336 (ಜೀವಕ್ಕೆ ಅಪಾಯ) ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಟ್ವಿಟರ್‌ನಲ್ಲಿ ಮುಂಬೈ ಟ್ರಾಫಿಕ್ ಪೊಲೀಸರು ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದು, "ಬಿಕೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಗುರುತಿಸುವ ತನಿಖೆ ನಡೆಯುತ್ತಿದೆ. ಈ ವೀಡಿಯೊದಲ್ಲಿರುವ ವ್ಯಕ್ತಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ನೀವು ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು" ಎಂದು ಹೇಳಿದ್ದಾರೆ.

 

ಅಪಾಯಕಾರಿ ಸಾಹಸ ಪ್ರದರ್ಶಿಸಿದವರನ್ನು ಇನ್ನೂ ಅಧಿಕೃತವಾಗಿ ಗುರುತಿಸಲಾಗಿಲ್ಲ, ಪೋಟೋಲ್ ವಾರಿಯರ್ಸ್ ಫೌಂಡೇಶನ್ ಬೈಕ್ ಚಲಾಯಿಸುತ್ತಿರುವ ವ್ಯಕ್ತಿ ಕಾಸಿಂ ಸ್ಟಂಟ್ ರೈಡರ್ ಎಂದು ಹೇಳಿದೆ. ದ್ವಿಚಕ್ರ ವಾಹನದಲ್ಲಿ ಅವನ ಹಿಂದೆ ಮತ್ತು ಮುಂದೆ ಯುವತಿಯರಿಬ್ಬರು ಕುಳಿತುಕೊಂಡ ವೀಡಿಯೊವನ್ನು ಶೇರ್ ಮಾಡಲಾಗಿದೆ.

ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!

ಕಾಸಿಂ ಸ್ಟಂಟ್ ರೈಡರ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಾಹಸ ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡಿಕೊಂಡಿರುತ್ತಿದ್ದ ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News