couple shocking airel dating video : ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ರೊಮ್ಯಾಂಟಿಕ್ ಡೇಟ್ ಗೆ ಹೋಗಬೇಕು ಅಂದುಕೊಳ್ಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯೊಂದಿಗೆ ಸುಂದರವಾದ ಕ್ಷಣವನ್ನು ಅನುಭವಿಸಲು ಬಯತ್ತಾನೆ. ಆದರೆ ಹಲವಾರು ಈ ಕ್ಷಣಗಳನ್ನು ಸ್ಮರಣೀಯವಾಗಿಸಲು, ತಮ್ಮ ಹಾಗೂ ತಮ್ಮ ಸಂಗಾತಿಯ ಜೀವವನ್ನೇ ಅಪಾಯಕ್ಕೆ ತಳ್ಳುತ್ತಾರೆ. ಅಂತಹದ್ದೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಗಾಳಿಯಲ್ಲಿ ನೇತಾಡುವ ಮೂಲಕ ದಂಪತಿಗಳು ಹೇಗೆ ತಮ್ಮ ಡಿನ್ನರ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದನ್ನು ನೀವು ನೋಡಬಹುದು. ಆದರೆ ವಿಡಿಯೋ ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ.


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿರುವ ವೀಡಿಯೊದಲ್ಲಿ (Weird dating video funny), ಹೀಲ್ ಸ್ಟೇಷನ್‌ನಲ್ಲಿ ದಂಪತಿ ಜೋಡಿಯೊಂದು ಹೇಗೆ ಡಿನ್ನರ್ ಡೇಟ್ ಆಚರಿಸಿಕೊಳ್ಳುತ್ತಿದೆ ಎಂಬುದನ್ನು ನೀವು ನೋಡಬಹುದು.  ಇಲ್ಲಿ ಅವರು ಮಾಡುತ್ತಿರುವ ಸ್ಟಂಟ್ ವೀಕ್ಷಿಸುವವರನ್ನೆ ನಿಬ್ಬೆರಗಾಗಿಸುವಂತಿದೆ. ವೀಡಿಯೊದಲ್ಲಿ, ದಂಪತಿಗಳು ಚಲಿಸುವ ಊಟದ ಮೇಜಿನ ಮೇಲೆ ಹಗ್ಗದ ಸಹಾಯದಿಂದ ಗಾಳಿಯಲ್ಲಿ ನೇತಾಡುತ್ತಿದ್ದಾರೆ ಮತ್ತು ಅವರ ಕೆಳಗೆ ಅಪಾಯಕಾರಿ ಪ್ರಪಾತ ಇರುವುದನ್ನು ನೀವು ಗಮನಿಸಬಹುದು.  ಆದರೆ ಅದರ ಭಯ ಉಭಯರಿಗೂ ಇಲ್ಲ ಎಂಬಂತೆ ತೋರುತ್ತಿದ್ದು, ದಂಪತಿಗಳು ಸಂಪೂರ್ಣವಾಗಿ ನೆಮ್ಮದಿಯಿಂದ ಕುಳಿತ್ತಿದ್ದಾರೆ ಮತ್ತು ಅಲ್ಲಿ ನಿಂತಿರುವ ಜನರು ತಮ್ಮ ವೀಡಿಯೊವನ್ನು (dating video online) ತಯಾರಿಸುತ್ತಿದ್ದಾರೆ. ಎಲ್ಲಾದರೋ ಸ್ವಲ್ಪ ಬ್ಯಾಲೆನ್ಸ್ ಬಿಗಡಾಯಿಸಿದರೆ ದಂಪತಿ ಜೋಡಿ ನೇರವಾಗಿ ಪ್ರಪಾತಕ್ಕೆ ಬೀಳಬಹುದಿತ್ತು. ಇಂತಹ ಅಪಾಯಕಾರಿ ಡೇಟ್ ಅವರ ಪಾಲಿಗೆ ಮಾರಕ ಸಾಬೀತಾಗಬಹುದು. 


ತಮಾಷೆಯ ಪ್ರತಿಕ್ರಿಯೆ ನೀಡುತ್ತಿರುವ ನೆಟ್ಟಿಗರು
avioneta_divertida ಹೆಸರಿನ Instagram ಖಾತೆಯ ಮೂಲಕ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಇದುವರೆಗೆ 61.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಈ ವೀಡಿಯೋಗೆ 1.5 ಮಿಲಿಯನ್ ಗೂ ಹೆಚ್ಚು ಲೈಕ್ ಬಂದಿವೆ. ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು, ವಿಡಿಯೋದಲ್ಲಿ ಯಾರು ಹುಚ್ಚರಂತೆ ಕೂಗುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಎಂಥಾ ಹುಚ್ಚು ಜನರು, ಏನು ಬೇಕಾದರೂ ಮಾಡ್ತಾರೆ ಎಂದಿದ್ದಾರೆ. ಮೂರನೇ ಬಳಕೆದಾರರು ಬಹುಶಃ ಇದು ಅವರ ಕೊನೆಯ ಡಿನ್ನರ್ ಆಗಿರಬಹುದು ಎಂದಿದಾರೆ.


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ