Viral video : ಇಂಟರ್ನೆಟ್‌ನಲ್ಲಿ ಅನೇಕ ಆಕರ್ಷಕ ಮತ್ತು ಮನರಂಜನೆಯ ವೀಡಿಯೊಗಳನ್ನು ಆಗಾಗ ವೈರಲ್‌ ಆಗುತ್ತಿರುತ್ತವೆ. ಅಸಾಮಾನ್ಯ ವಿಷಯಗಳು, ಕಾಮಿಡಿ ವಿಡಿಯೋಗಳು, ಪ್ರಾಣಿ ಪಕ್ಷಿಗಳ ಆಟ, ಪುಟ್ಟ ಆನೆ ಮರಿಯ ತುಂಟಾಟ, ಹೀಗೆ ಸಾಕಷ್ಟು ವಿಡಿಯೋಗಳು ಬೇಸರವಾದಾಗ ಫೋನ್‌ ಹಿಡಿದು ಕುಳಿತ ಎಂಥಹವರಿಗೂ ನಗು ತರಿಸುತ್ತವೆ. ಇದರಂತೆ ಇದೀಗ ಸಣ್ಣ ಕ್ಲಿಪ್ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತದೆ.


COMMERCIAL BREAK
SCROLL TO CONTINUE READING

ಈ ವೈರಲ್‌ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆರಂಭದಲ್ಲಿ ಏಡಿಯೊಂದಿಗೆ ಆಟವಾಡಲು ಪ್ರಯತ್ನಿಸುತ್ತಿರುತ್ತಾನೆ. ತಾತನ ಆಟಕ್ಕೆ ಏಡಿ ಮೊದಲು ಬೆಚ್ಚಿಬಿದ್ದಿತು. ಮನುಷ್ಯ ಅಲ್ಲಿಗೆ ನಿಲ್ಲಲಿಲ್ಲ, ಏಡಿಯೊಂದಿಗೆ ಆಟವಾಡುವುದನ್ನು ಮುಂದುವರೆಸಿದನು. ಏಡಿಯು ಈ ಮನುಷ್ಯನ ವರ್ತನೆಗಳನ್ನು ಸಾಕಷ್ಟು ತಡೆದುಕೊಂಡಿತ್ತು ಅನಿಸುತ್ತೆ. ಒಮ್ಮೇಲೆ ತನ್ನ ಶಕ್ತಿಯುತ ಉಗುರುಗಳಿಂದ ಅವನ ಮೂಗುವನ್ನು ಹಿಡಿಕೊಂಡಿದೆ. ಇದರಿಂದ ಬೆಚ್ಚಿಬಿದ್ದ ವ್ಯಕ್ತಿ ಭಯಭೀತನಾಗುತ್ತಾನೆ.


Transgender salon: ದೇಶದಲ್ಲಿ ಆರಂಭವಾಯ್ತು ಮಂಗಳ ಮುಖಿಯರ ಮೊದಲ ಹೇರ್ ಸಲೂನ್!


ಇದರ ಹೊರತಾಗಿಯೂ, ಅವನು ತನ್ನ ಮೂಗನ್ನು ಏಡಿಯ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ, ಆದರೆ ಅವನು ತನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಧಾನ ಚಲನೆಯಲ್ಲಿ, ಏಡಿ ತನ್ನ ಎಲ್ಲಾ ಶಕ್ತಿಯಿಂದ ಮನುಷ್ಯನ ಮೂಗನ್ನು ಹಿಡಿಯುತ್ತದೆ. ಈ ಕ್ಲಿಪ್ ನೋಡಿದ ಜನರು ಆಘಾತಕ್ಕೊಳಗಾಗಿದ್ದಾರೆ ಅಲ್ಲದೆ, ನಿಂಗಿದೂ ಬೇಕಿತ್ತಾ ತಾತ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.


ಈ ಕ್ಲಿಪ್‌ನ್ನು 174,000 ವೀಕ್ಷಣೆ ಪಡೆದಿದೆ. ಲೆಕ್ಕವಿಲ್ಲದಷ್ಟು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ವೀಡಿಯೊವನ್ನು ನೋಡಿದ ಬಿದ್ದು ಬಿದ್ದು ನಗುತ್ತಿದ್ದಾರೆ. ಇನ್ನು ಕೆಲವರು ದಯವಿಟ್ಟು ಈ ರೀತಿ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ. ಇನ್ನು ಕೆಲವರು, ಈ ಮನುಷ್ಯ ಹುಚ್ಚನೇ ಇರಬೇಕು ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾನೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.