Transgender salon: ದೇಶದಲ್ಲಿ ಆರಂಭವಾಯ್ತು ಮಂಗಳ ಮುಖಿಯರ ಮೊದಲ ಹೇರ್ ಸಲೂನ್!

Transgender First Hair Salon : ಮಂಗಳ ಮುಖಿ  ಸಮುದಾಯವನ್ನು ಇಂದಿಗೂ ಕೆಲವೊಂದು ಸ್ಥಳಗಳಲ್ಲಿ ಅವರನ್ನೂ ಸಮಾಜದಿಂದ ದೂರ ಇಟ್ಟಿರುವುದನ್ನು ಕಾಣಬಹುದು.ಈ ಸಲುವಾಗಿಯೇ ಮುಂಬೈಯಲ್ಲಿ ತೃತೀಯಲಿಂಗಿಗಳಿಗಾಗಿಯೇ ಪ್ರತ್ಯೇಕ ಹೇರ್ ಸಲೂನ್ ಪ್ರಾರಂಭಿಸಲಾಗಿದೆ. ಇದು ದೇಶದಲ್ಲಿ ಮೊದಲ ಮಂಗಳ ಮುಖಿಯರ  ಹೇರ್ ಸಲೂನ್ ಎಂಬ ಹೆಗಳ್ಳಿಕೆಗೆ ಪಾತ್ರವಾಗಿದೆ. 

Written by - Zee Kannada News Desk | Last Updated : Mar 26, 2023, 03:59 PM IST
  • ದೇಶದಲ್ಲಿ ಮೊದಲ ಮಂಗಳ ಮುಖಿಯರ ಹೇರ್ ಸಲೂನ್
  • ಈ ಹೇರ್ ಸಲೂನ್ ತೃತೀಯಲಿಂಗಿಗಳಿಗೆ ತರಬೇತಿ ಹಾಗೂ ಉದ್ಯೋಗ ನೀಡಲು ಸಲೂನ್ ಮೀಸಲು
  • ಮುಂಬೈನಲ್ಲಿ ಮಂಗಳ ಮುಖಿ ಸಲೂನ್
Transgender salon: ದೇಶದಲ್ಲಿ ಆರಂಭವಾಯ್ತು ಮಂಗಳ ಮುಖಿಯರ ಮೊದಲ ಹೇರ್ ಸಲೂನ್! title=

ಮುಂಬೈ​ : ಮಂಗಳ ಮುಖಿ  ಸಮುದಾಯವನ್ನು ಇಂದಿಗೂ ಕೆಲವೊಂದು ಸ್ಥಳಗಳಲ್ಲಿ ಅವರನ್ನೂ ಸಮಾಜದಿಂದ ದೂರ ಇಟ್ಟಿರುವುದನ್ನು ಕಾಣಬಹುದು. ಈ ಸಲುವಾಗಿಯೇ ಮುಂಬೈಯಲ್ಲಿ ತೃತೀಯಲಿಂಗಿ ಗಳಿಗಾಗಿಯೇ ಪ್ರತ್ಯೇಕ ಹೇರ್ ಸಲೂನ್ ಸ್ಥಾಪಿಸಲಾಗಿದೆ. ಇದು ದೇಶದಲ್ಲಿ ಮೊದಲ ಮಂಗಳ ಮುಖಿಯರ  ಹೇರ್ ಸಲೂನ್ ಎಂಬ ಹೆಗಳ್ಳಿಕೆಗೆ ಪಾತ್ರವಾಗಿದೆ. 

ಈ ಸಲೂನ್ ಮಂಗಳ ಮುಖಿ ಜನರ ಒಡೆತನದಲ್ಲಿದ್ದೂ ತೃತೀಯಲಿಂಗಿ ಸಮುದಾಯದ ಜನರನ್ನು ಸಬಲರನ್ನಾಗಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮುಂಬೈನಲ್ಲಿ ಮಂಗಳ ಮುಖಿ ಸಲೂನ್ ಅನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: Viral Video: ಮಗುವಿನ ಮುತ್ತಿಗೆ ಮನ ಸೋತ  ಜಿಂಕೆಮರಿ !

ಈ ಸಲೂನ್ ಅನ್ನು 7 ಜನ ತೃತೀಯಲಿಂಗಿಗಳು ನಡೆಸುತ್ತಿದ್ದಾರೆ. ಈ ಬಗ್ಗೆ ಮಾತಾನಾಡಿರುವ ಸಲೂನ್ ಸ್ಥಾಪನೆಯಲ್ಲಿ ಒಬ್ಬರಾದ ಜೈನಾಬ್, ಮಂಗಳ ಮುಖಿ ಸಮುದಾಯದ ಜನರು ನಿಯಮಿತವಾಗಿ ಇಂದಿಗೂ ಸಾಕಷ್ಟು ತಾರತಮ್ಯವನ್ನು ಎದುರಿಸುತ್ತಾರೆ. ತಮ್ಮ ಅಸ್ತಿತ್ವ ಮತ್ತು ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದರೂ  ಅವರು ತಮ್ಮ ಗುರಿಯನ್ನು ಸಂಪೂರ್ಣವಾಗಿ ತಲುಪುತ್ತಿಲ್ಲ.ಆದರೆ ಕೆಲವೊಂದು ಸ್ಥಳಗಳಲ್ಲಿ  ಅವರನ್ನು ನೋಡುವ ಮನಸ್ಥಿತಿ ಬದಲಾಗಿದೆ.

ಇದನ್ನೂ ಓದಿ: ಲೋಕಸಭಾ ಸದಸ್ಯತ್ವದ ಅನರ್ಹತೆಯೊಂದಿಗೆ ರಾಹುಲ್ ಗಾಂಧಿ ಸರ್ಕಾರಿ ಬಂಗಲೆ ತೆರವುಗೊಳಿಸುವ ಸಾಧ್ಯತೆ 

ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಈ ಯೋಜನೆ ತರಲಾಗಿದೆ  ಸಮುದಾಯದ ಜನರನ್ನು ಸಬಲೀಕರಣಗೊಳಿಸುವುದು ಬಹಳ ಮುಖ್ಯವಾದ ಈ ಹೆಜ್ಜೆ ಆಗಿದೆ. ಹಾಗೂ ಈ ಹೇರ್ ಸಲೂನ್ ತೃತೀಯಲಿಂಗಿಗಳಿಗೆ ತರಬೇತಿ ಹಾಗೂ ಉದ್ಯೋಗ ನೀಡಲು ಸಲೂನ್ ಮೀಸಲಿಡಲಾಗಿದೆ ಎಂದು ಸಲೂನ್ ಒಬ್ಬರಾದ  ಜೈನಾಬ್ ಹೇಳಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News