Viral Video: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕೆಲವರು ಹಾಸ್ಯಾಸ್ಪದವಾಗಿ, ಇನ್ನೂ ಕೆಲವರು ಡ್ಯಾನ್ಸ್‌, ಹಾಡು, ಚಿತ್ರಕಲೆ, ಸಾಮಾಜಿಕ ಸಂದೇಶಗಳನ್ನು ಸಾರುವ ವಿಡಿಯೋಗಳನ್ನು ಶೇರ್‌ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವತಿ ರೈಲ್ವೆ ಪ್ಲಾಟ್‌ಫಾರ್ಮ್‌ʼನಲ್ಲಿ ಅತಿರೇಕದ ಡ್ಯಾನ್ಸ್ ಮಾಡಿದ್ದು, ಇದನ್ನು ಕಂಡ ಪಕ್ಕದಲ್ಲೇ ಇದ್ದ ಮಹಿಳೆ ಕೋಪಗೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾತ್ರಿ ಮಲಗುವಾಗ ಮೊಬೈಲ್‌ ಎಷ್ಟು ದೂರ ಇಟ್ಟುಕೊಳ್ಳಬೇಕು? ದಿಂಬಿನ ಬಳಿ ಇಟ್ಟರೆ ಆಗುವ ಸಮಸ್ಯೆಗಳೇನು?


ಇನ್ನು ಸಿಟ್ಟಿಗೆದ್ದ ಮಹಿಳೆ, ಈಕೆಯ ವಿಚಿತ್ರ ವರ್ತನೆಯಿಂದ ಬೇಸತ್ತು ಆಕೆಯನ್ನು ಥಳಿಸಲು ಆರಂಭಿಸಿದ್ದಾಳೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿತ್ತು. ಆದರೆ ಇದೀಗ ಅದನ್ನು ಡಿಲೀಟ್‌ ಮಾಡಲಾಗಿದೆ.


ಕೆಲವು ಸೆಕೆಂಡುಗಳ ಈ ವೀಡಿಯೊವನ್ನು Instagram ನಲ್ಲಿ @seemakanojiya87 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಈ ಖಾತೆಯು ಅದೇ ಹುಡುಗಿಗೆ ಸೇರಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ನೃತ್ಯ ಮಾಡುವ ಮೂಲಕ ಅಂತರ್ಜಾಲದಲ್ಲಿ ಫೇಮಸ್ ಆಗಿದ್ದಳು ಎಂದು ತಿಳಿದುಬಂದಿದೆ.


ವೈರಲ್ ಆಗಿದ್ದ ವಿಡಿಯೋದಲ್ಲಿ ಸೀಮಾ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ವಿಚಿತ್ರವಾಗಿ ನೃತ್ಯ ಮಾಡುವುದನ್ನು ಕಾಣಬಹುದಾಗಿತ್ತು. ನೆಲದ ಮೇಲೆ ಉರುಳುತ್ತಾ, ಪ್ರಯಾಣಿಕರಿಗೆ ಡಿಕ್ಕಿ ಹೊಡೆಯುತ್ತಾ ವಿಡಿಯೋ ಚಿತ್ರೀಕರಣ ಮಾಡಿದ್ದಳು ಎನ್ನಲಾಗಿದೆ. ಇದನ್ನು ಕಂಡ ಮಹಿಳೆ ಸಿಟ್ಟಿಗೆದ್ದು ಆಕೆಗೆ ಥಳಿಸಿದ್ದಾಳೆ.


ಇದನ್ನೂ ಓದಿ: ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ವಿರಾಟ್‌ ಕೊಹ್ಲಿ!? ಪ್ರೊಟೆಸ್ಟ್‌ʼನಲ್ಲಿ ಭಾಗಿಯಾದ ವಿಡಿಯೋ


ಇನ್ನು ಈ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆಯೇ ಅಥವಾ ನಿಜವೇ ಎಂಬುದು ತಿಳಿದಿಲ್ಲ, ಆದರೆ ಜನರು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.