Viral Story: ನಮ್ಮ ಹಿರಿಯರು ಹಿಂದೆಲ್ಲಾ ತಮ್ಮ ಅಮೂಲ್ಯವಾದ ಬೆಲೆ ಬಾಳುವ ಸಂಪತ್ತುಗಳನ್ನು ಹಳ್ಳ ತೋಡಿ ಬಚ್ಚಿಡುಟ್ಟಿದ್ದರು. ಎಷ್ಟೋ ಬಾರಿ ಪುರಾತನ ಮನೆಗಳಲ್ಲಿ, ಇಲ್ಲವೇ ಜಮೀನಿನಲ್ಲಿ ನಿಧಿ ಸಿಕ್ಕಿರುವ ಬಗ್ಗೆ ನೀವು ಕೇಳಿರಬಹುದು, ಕೆಲವರು ಸ್ವತಃ ನೋಡಿರಲೂಬಹುದು. ಅಂತಹದ್ದೇ ಒಂದು ಘಟನೆ ಚಿಲಿ ಎಂಬ ರಾಷ್ಟ್ರದಲ್ಲೂ ಮುನ್ನಲೆಗೆ ಬಂದಿದೆ. ಇಲ್ಲೊಬ್ಬ ಎಕ್ಸಿಕ್ವಿಯೆಲ್ ಹಿನೊಜೋಸಾ ಎಂಬಾತನಿಗೆ ಇಂತಹದ್ದೇ ಒಂದು ನಿಧಿ ಸಿಕ್ಕಿದೆ. ಆದರಿದು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯವಲ್ಲ ಬದಲಿಗೆ ಇದು ಮ್ಯಾಜಿಕ್ ಕೀಲಿಯನ್ನು ಹೊಂದಿದ್ದ ಅವರ ತಂದೆಯ ನಿಗರ್ವಿ. ಅದುವೇ ಸುಮಾರು ಆರು ದಶಕಗಳ ಹಿಂದಿನ ಬ್ಯಾಂಕ್ ಪಾಸ್‌ಬುಕ್. ಏನಿದು ನಿಧಿ, ಬ್ಯಾಂಕ್ ಪಾಸ್‌ಬುಕ್ ಅಂತ ಕನ್ಫ್ಯೂಸ್ ಆಗ್ಬೇಡಿ! ಇಲ್ಲಿದೆ ಅದರ ರೋಚಕ ಕಥೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಚಿಲಿ ದೇಶದ ಎಕ್ಸಿಕ್ವಿಯೆಲ್ ಹಿನೊಜೋಸಾ ಎಂಬಾತ ಒಮ್ಮೆ ಮನೆಯನ್ನು ಶುಚಿಗೊಳಿಸುತ್ತಿದ್ದನು. ಈ ಸಂದರ್ಭದಲ್ಲಿ ಮನೆಯ ಹಳೆಯ ಸಾಮಾನುಗಳಿದ್ದ ಕೋಣೆಯನ್ನೂ ಶುಚಿಗೊಳಿಸಲು ಮುಂದಾಗಿದ್ದನು. ಅಲ್ಲಿ ಆತನಿಗೆ ಅತ್ಯಲ್ಪ ಶಿಲಾಖಂಡರಾಶಿ ಎಂದು ಕಡೆಗಣಿಸಿದ್ದ  ಕಸದ ರಾಶಿಯಲ್ಲಿ ಒಂದು ನಿಗರ್ವಿ ವಸ್ತು ಕಂಡು ಬಂದಿತು. ಅದನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಹಳೆಯ ಕವಾಡಿಯಲ್ಲ, ಬದಲಿಗೆ ಬಹಳ ದೀರ್ಘ ಸಮಯದ ಹಿಂದೆಯೇ ಕಳೆದುಹೋಗಿದ್ದ ತನ್ನ ತಂದೆಯ ಬ್ಯಾಂಕ್ ಪಾಸ್ ಎಂದು ಗೊತ್ತಾಗಿದೆ. 


ವಾಸ್ತವವಾಗಿ, ಸುಮಾರು, 1960-70ರ ದಶಕದಲ್ಲಿ, ಎಕ್ಸಿಕ್ವಿಯೆಲ್‌ನ ತಂದೆ ಭವಿಷ್ಯದಲ್ಲಿ ಮನೆ ಖರೀದಿಗಾಗಿ 1.40 ಲಕ್ಷ ಚಿಲಿಯ ಪೆಸೊಗಳನ್ನು ಈ ಬ್ಯಾಂಕಿನಲ್ಲಿ  ಠೇವಣಿ ಇರಿಸಿದ್ದರು. ಆ ಮೊತ್ತವು ಇಂದಿನ ಡಾಲರ್‌ಗಳಲ್ಲಿ ಸರಿಸುಮಾರು $163 ಅಥವಾ 13,480 ಭಾರತೀಯ ರೂಪಾಯಿಗಳಿಗೆ ಸಮವಾಗಿದೆ. ಆದಾಗ್ಯೂ, 60-70ರ ದಶಕದಲ್ಲಿ ಇದರ ಮೌಲ್ಯ ತುಂಬಾ ಹೆಚ್ಚಿತ್ತು.  ಎಕ್ಸಿಕ್ವಿಯೆಲ್ ಹಿನೊಜೋಸಾ ಹೇಳುವಂತೆ ಈ ಬ್ಯಾಂಕ್ ಪಾಸ್‌ಬುಕ್ ಬಹಳ ಹಿಂದೆಯೇ ಕಳೆದು ಹೋಗಿತ್ತು. ಇದಕ್ಕಾಗಿ ಹುಡುಕಿ ಹುಡುಕಿ ತಂದೆಯೂ ಬೇಸತ್ತಿದ್ದರು. ಒಂದು ದಶಕದ ಹಿಂದೆ ಅವರ ತಂದೆ ಮೃತ ಹೊಂದಿದ್ದು, ಅವರೊಂದಿಗೆ ಈ ಪಾಸ್‌ಬುಕ್ ನೆನಪೂ ಸಹ ಮಾಸಿ ಹೋಗಿತ್ತು. ಇದೀಗ ದಶಕಗಳ ಬಳಿಕ ತಂದೆಯ ಪಾಸ್‌ಬುಕ್ ಕಂಡ ಎಕ್ಸಿಕ್ವಿಯೆಲ್‌ಗೆ ಬಂಗಾರದ ನಿಧಿಯೇ ಸಿಕ್ಕಿದಂತಾಗಿತ್ತು. 


ಇದನ್ನೂ ಓದಿ- Public Charging Scam: ನೀವೂ ನಿಮ್ಮ ಫೋನ್ ಅನ್ನು ಎಲ್ಲೆಂದರಲ್ಲಿ ಚಾರ್ಜಿಂಗ್ ಹಾಕ್ತೀರಾ? ಹುಷಾರ್


ಆದಾಗ್ಯೂ,  ಈ ಪಾಸ್‌ಬುಕ್‌ಗೆ ಸಂಬಂಧಿಸಿದ ಬ್ಯಾಂಕ್ ದೀರ್ಘ ಸಮಯದ ಹಿಂದೆಯೇ ಬಂದ್ ಆಗಿದೆ ಎಂದು ತಿಳಿದಾಗ ಎಕ್ಸಿಕ್ವಿಯೆಲ್‌ನ ಮುಖದಲ್ಲಿನ ನಗುವೇ ಮಾಯವಾಗಿತ್ತು. ಆದರೂ, ಸಾವಿರ ದಾರಿ ಮುಚ್ಚಿದರೂ ಒಂದಲ್ಲಾ ಒಂದು ದಾರಿ ತೆರೆದಿರುತ್ತದೆ ಎಂಬಂತೆ ಪಾಸ್‌ಬುಕ್‌ನಲ್ಲಿ ಕೆತ್ತಲಾದ ನಿರ್ಣಾಯಕ ವಿವರದಿಂದ ಭರವಸೆಯ ದಾರಿದೀಪ ಹೊರಹೊಮ್ಮಿತು. ಅದುವೇ ಅದರಲ್ಲಿದ್ದ "ರಾಜ್ಯ ಖಾತರಿ" ಎಂಬ ಪದಗುಚ್ಛ. ಇದರನ್ವಯ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವ ಹಣ ಹಿಂದಿರುಗಿಸುವಲ್ಲಿ ಬ್ಯಾಂಕ್ ವಿಫಲವಾದಲ್ಲಿ ಅದನ್ನು ಸರ್ಕಾರ ಮರುಪಾವತಿಸುತ್ತದೆ ಎಂಬ ಭರವಸೆ. 


ಆದಾಗ್ಯೂ, ಪ್ರಸ್ತುತ ಸರ್ಕಾರ "ರಾಜ್ಯ ಖಾತರಿ"ಗೆ ಬದ್ಧವಾಗಿರಲು ಹಿಂದೇಟು ಹಾಕಿತ್ತು. ಇದರಿಂದಾಗಿ ಎಕ್ಸಿಕ್ವಿಯೆಲ್ ತನ್ನ ತಂದೆಯ ಹೂಡಿಕೆಯ ಹಣವನ್ನು ಪಡೆಯಲು ಕಾನೂನು ಹೋರಾಟವನ್ನೇ ಆರಂಭಿಸಬೇಕಾಯಿತು. ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ವಾದ ಮಂಡಿಸಿದ ಎಕ್ಸಿಕ್ವಿಯೆಲ್, "ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವ ನಿಧಿಯೂ ಆ ಕಾಲದಲ್ಲಿ ನನ್ನ ತಂದೆ ಬಹಳ ಕಷ್ಟದಿಂದ ದುಡಿದು ಮಾಡಿದ್ದ ಉಳಿತಾಯದ ಹಣ ಎಂದು ತುಂಬಾ ಭಾವೋದ್ರೇಕರಾಗಿ ವಾದಿಸಿದ್ದರು". ಎಕ್ಸಿಕ್ವಿಯೆಲ್ ಅವರ ವಾದ ಸರ್ಕಾರದ ಬದ್ಧತೆಯಿಂದ ಬಲಪಡಿಸಲ್ಪಟ್ಟಿತು. ಕೂಲಂಕುಷವಾಗಿ ಪರಿಗಣಿಸಿದ ನಂತರ, ನ್ಯಾಯಾಲಯವು ಎಕ್ಸಿಕ್ವಿಯೆಲ್ ಪರವಾಗಿ ತೀರ್ಪು ನೀಡಿತು. 


ಇದನ್ನೂ ಓದಿ- ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುತ್ತಾ? ಇದು ಎಷ್ಟು ಅಪಾಯಕಾರಿ ಗೊತ್ತಾ?


ನ್ಯಾಯಾಲಯದ ತೀರ್ಪು ಈ ಕೆಳಕಂಡಂತಿದೆ. 
ಎಕ್ಸಿಕ್ವಿಯೆಲ್ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು 1.2 ಮಿಲಿಯನ್ ಡಾಲರ್‌ಗಳಿಗೆ (ಅಂದಾಜು 10 ಕೋಟಿ ಭಾರತೀಯ ರೂಪಾಯಿಗಳು) 1 ಬಿಲಿಯನ್ ಚಿಲಿಯ ಪೆಸೊಗಳನ್ನು, ಇದರೊಂದಿಗೆ ಈ ಹಣಕ್ಕೆ ತಗುಲುವ ಸಂಚಿತ ಬಡ್ಡಿ ಮತ್ತು ಭತ್ಯೆಗಳನ್ನು  ಎಕ್ಸಿಕ್ವಿಯೆಲ್ ಅವರಿಗೆ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ. 


ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಹಾಗಾಗಿ, ಇನ್ನೂ ಕೂಡ ಈ ಪ್ರಕರಣದಲ್ಲಿ ಫಲಿತಾಂಶ ಎನಾಗುತ್ತದೋ ಎಂಬ ಅನಿಶ್ಚಿತತೆ ಮುಂದುವರೆದಿದೆ.  ಆದರೆ, ಎಂತಹದ್ದೇ ಸಂದರ್ಭದಲ್ಲಿ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಸುಮ್ಮನೆ ಕೂರುವುದಕ್ಕಿಂತ ನಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕು. ಆಗಷ್ಟೇ ಅದೃಷ್ಟವೂ ನಮ್ಮ ಕೈ ಹಿಡಿಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ