Trending Video : ನಾವು ಪ್ರತಿದಿನ ಅನೇಕ ವೈರಲ್ ವೀಡಿಯೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ನೋಡುತ್ತೇವೆ. ಅದರಲ್ಲಿ ಕೆಲವು ತಮಾಷೆಯಾಗಿದ್ದರೆ, ಇನ್ನು ಕೆಲವು ಆಘಾತಕಾರಿ ಅಂಸಗಳಿಂದ ಕೂಡಿರುತ್ತವೆ. ಈಗ ಅಂತಹ ಭಯಾನಕ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಎಲ್ಲರಿಗೂ ತಿಳಿದಂತೆ ಹಾವು ಅಪಯಕಾರಿ ಜೀವಿ. ಅದನ್ನು ಕಂಡರೆ ಮಾರುದ್ದ ಓಡುವವರಿದ್ದಾರೆ. ಇನ್ನೂ ಕೆಲವರಿಗೆ ಹಾವು ಎಂದರೆ ಪಂಚಪ್ರಾಣ ಇರಬೇಕೇನೋ. ಅದಕ್ಕಾಗಿಯೇ ಅವರು ಅನೇಕ ಅಪಾಯಕಾರಿ ಸಂಗತಿಗಳನ್ನುಅವುಗಳೊಟ್ಟಿಗೆ ಪ್ರಯತ್ನಿಸುತ್ತಾರೆ. ಅದರಲ್ಲೂ ಹೆಬ್ಬಾವು ಕಂಡರೆ ಜೀವವೇ ಹೋದಂತೆ ಅನಿಸುತ್ತದೆ. ಆದರೆ ಇಲ್ಲೊಬ್ಬ ಈ ಹೆಬ್ಬಾವುಗಳ ಜೊತೆ ಮಾಡಿದ  ಹುಚ್ಚಾಟ ನೋಡಿ ನೆಟ್ಟಿಗರು ದಂಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್! ಸೊಂಟದ ವಿಷ್ಯಾ ಬ್ಯಾಡ ಓ ಶಿಷ್ಯಾ ಎಂದ ನೆಟ್ಟಿಜನ್‌!


ತನ್ನ ಭುಜದ ಮೇಲೆ 2 ದೈತ್ಯ ಹೆಬ್ಬಾವುಗಳನ್ನು ಹೊತ್ತು ಈ ವ್ಯಕ್ತಿ ರೀಲ್ಸ್‌ ಮಾಡಿದ್ದಾನೆ. ಸಂಪೂರ್ಣವಾಗಿ ಮನುಷ್ಯರನ್ನು ನುಂಗಬಹುದಾದ ಈ ಹೆಬ್ಬಾವುಗಳ ಜೊತೆ ಈ ವ್ಯಕ್ತಿಯ ನೃತ್ಯ ನೋಡಿದರೆ ಒಮ್ಮೆ ತಲೆ ತಿರುಗುತ್ತೆ. ಹೆಬ್ಬಾವುಗಳು ಸಾಮಾನ್ಯವಾಗಿ 20 ಅಡಿಗೂ ಹೆಚ್ಚು ಬೆಳೆಯುತ್ತವೆ. ಇವುಗಳನ್ನು ಕಂಡರೆ ಭಯದಿಂದ ನಡುಗುವವರೇ ಹೆಚ್ಚು. ಅಂತಹದುರಲ್ಲಿ ಈ ವ್ಯಕ್ತಿ ತನ್ನ ಹೆಗಲ ಮೇಲೆ ಎರಡು ದೊಡ್ಡ ಹೆಬ್ಬಾವುಗಳನ್ನು ಹಾಕಿಕೊಂಡು ನೃತ್ಯ ಮಾಡಿದ್ದಾನೆ. ಈ ಆಘಾತಕಾರಿ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. 


 



 


ವ್ಯಕ್ತಿಯೊಬ್ಬ ತನ್ನ ಕೊರಳಿನಲ್ಲಿ ಎರಡು ಬೃಹತ್ ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ಹಾಕಿಕೊಂಡಿದ್ದಾನೆ. ಹಾವುಗಳ ತಲೆಯ ಭಾಗ ಅವನ ಬೆನ್ನಿನ ಬಳಿ ಇವೆ. ಬಾಲಗಳು ನೆಲದ ಮೇಲೆ ಚಾಚಿಕೊಂಡಿವೆ. ಈ ಎರಡೂ ದೈತ್ಯ ಹೆಬ್ಬಾವುಗಳನ್ನು ಹೊತ್ತುಕೊಂಡು ಡ್ಯಾನ್ಸ್‌ ಮಾಡಿದ್ದಾನೆ. ಇಷ್ಟು ಬೃಹದಾಕಾರದ ಹೆಬ್ಬಾವುಗಳನ್ನು ಹೊತ್ತುಕೊಂಡು ಕುಣಿಯುವುದು ಸಾಮಾನ್ಯ ಸಂಗತಿಯಲ್ಲ. ಈತನ ಸಾಹಸಕ್ಕೆ ನೆಟಿಜನ್‌ಗಳು ಬೆಚ್ಚಿ ಬಿದ್ದಿದ್ದಾರೆ. 


ಇದನ್ನೂ ಓದಿ : ಡಿ.5ರ ರಾತ್ರಿ 8 ಗಂಟೆಗೆ ನನ್ನ ತಾಯಿ ಸಾಯಲಿದ್ದಾರೆ, ಶಿಕ್ಷಕನ ಲೀವ್ ಲೆಟರ್ ವೈರಲ್!


ಈ ವಿಡಿಯೋಗೆ ಅನೇಕರು ತಮ್ಮದೇ ಶೈಲಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರ ಶೌರ್ಯವನ್ನು ಶ್ಲಾಘಿಸಿದರು. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದರೂ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. World_ of_snakes ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3.7 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದಾರೆ. 44 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.