Snake And Hen Fight: ತಾಯಿ ಮನುಷ್ಯರ ತಾಯಿಯಾಗಿರಲಿ ಅಥವಾ ಪಶು ಪಕ್ಷಿಗಳ ತಾಯಿಯೇ ಆಗಿರಲಿ, ತನ್ನ ಮಕ್ಕಳನ್ನು ತಾಯಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಒಂದು ಮಕ್ಕಳ ಪ್ರಾಣಕ್ಕೆ ಕುತ್ತು ಬಂದರೆ, ತಾಯಿ ತನ್ನ ಪ್ರಾಣವನ್ನೇ ಪಣಕ್ಕಿಡಲು ಒಂದು ಕ್ಷಣ ಕೂಡ ಹಿಂದೆ ಮುಂದೆ ನೋಡುವುದಿಲ್ಲ. ತನ್ನ ಮಕ್ಕಳಿಗೆ ಯಾವುದೇ ಧಕ್ಕೆಯಾಗದಂತೆ ತಾಯಿ ನೋಡಿಕೊಳ್ಳುತ್ತಾಳೆ. ಇತ್ತೀಚಿನ ದಿನಗಳಲ್ಲಿ ಒಂದು ತಾಯಿಯ ವಿಡಿಯೋ ಇಂಟರ್ನೆಟ್ ನಲ್ಲಿ ಬಳಕೆದಾರರ ಹೃದಯ ಗೆಲ್ಲುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು, ಭಯಾನಕ ವಿಡಿಯೋ ವೈರಲ್

ಈ ವಿಡಿಯೋದಲ್ಲಿ ತಾಯಿಯೋರ್ವಳು ತನ್ನ ಮಕ್ಕಳ ರಕ್ಷಣೆಗೆ ಪ್ರಾಣವನ್ನೇ ಪನಕ್ಕಿಟ್ಟಿರುವುದನ್ನು ನೀವು ಗಮನಿಸಬಹುದು. ಈ ತಾಯಿ ಒಂದು ಕೋಳಿಯಾಗಿದೆ ಮತ್ತು ತನ್ನ ಮರಿಗಳನ್ನು ಒಂದು ಅಪಾಯಕಾರಿ ಹಾವಿನಿಂದ ರಕ್ಷಿಸಲು ತನ್ನ ಪ್ರಾಣದ ಜೊತೆಗೆ ಆಟವಾಡುತ್ತಿದೆ. ಇದಾದ ಬಳಿಕ ತಾಯಿ ಕೋಳಿ ಹಾವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂಬಂತೆ ತೋರುತ್ತಿದೆ. ತಾಯಿ ಕೋಳಿ ತನ್ನ ಮರಿಗಳ ಜೊತೆಗೆ ಕುಳಿತಿರುವುದನ್ನು ನೀವು ನೋಡಬಹುದು. ಆಗಲೇ ಅದಕ್ಕೆ ಒಂದು ಅಪಾಯದ ಸಂಕೇತ ಸಿಗುತ್ತದೆ ಮತ್ತು ಕೋಳಿ ಎಚ್ಚೆತ್ತುಕೊಳ್ಳುತ್ತದೆ.  ವಿಡಿಯೋ ನೋಡಿ...
Viral Video: ಮನೆಯ ಮಾಳಿಗೆ ಮೇಲೆ ಅಜ್ಜಿಯ ವರ್ಕೌಟ್‌, ವಿಡಿಯೋ ಸಖತ್‌ ವೈರಲ್‌

ಹಾವು ಮರಿಗಳತ್ತ ತಲುಪುತ್ತಲೇ ತಾಯಿ ಕೋಳಿ ಹಾವಿನ ಮೇಲೆ ದಾಳಿ ಇಡುತ್ತದೆ. ಇನ್ನೇನು ಹಾವು ಒಂದಾದರು ಮರಿ ಕೋಳಿಯ ಬೇಟೆ ಮಾಡಲಿದೆ ಎನ್ನುವಷ್ಟರಲ್ಲಿ ತಾಯಿ ಕೋಳಿ ಒಂದರ ಮೇಲೊಂದರಂತೆ ಹಲವು ಬಾರಿ ತನ್ನ ಚೂಪಾದ ಕೊಕ್ಕಿನಿಂದ ಕುಕ್ಕುತ್ತದೆ ಮತ್ತು ಮರಿಗಳನ್ನು ಅಲ್ಲಿಂದ ರಕ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಈ ವಿಡಿಯೋವನ್ನು WILD COBRA ಹೆಸರಿನ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯವನ್ನು ಗೆಲ್ಲುವಲ್ಲಿ ಭಾರಿ ಯಶಸ್ವಿಯಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.