Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ!

ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

Written by - Puttaraj K Alur | Last Updated : May 22, 2022, 09:27 AM IST
  • ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀಸಿದ್ದಕ್ಕೆ ಕುಣಿದ ಕುಪ್ಪಳಿಸಿದ ಮಗ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
  • ತಂದೆ-ಮಗನ ಖುಷಿ ಕಂಡು ಭಾವುಕರಾಗಿ ಕಾಮೆಂಟ್ ಮಾಡಿದ ನೆಟಿಜನ್‍ಗಳು
Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ! title=
ಸೈಕಲ್ ಖರೀಸಿದ್ದಕ್ಕೆ ಕುಣಿದ ಕುಪ್ಪಳಿಸಿದ ಮಗ

ನವದೆಹಲಿ: ಕೆಲವರು ಚಿಕ್ಕ-ಚಿಕ್ಕ ವಿಷಯಗಳಲ್ಲಿಯೂ ಸಂತೋಷ ಕಂಡುಕೊಳ್ಳುತ್ತಾರೆ. ಹಣ-ಅಂತಸ್ತು ಸೇರಿ ಎಲ್ಲವೂ ಇದ್ದರೂ ಕೆಲವರಿಗೆ ನೆಮ್ಮದಿಯೇ ಇರುವುದಿಲ್ಲ. ಶ್ರೀಮಂತರು ಎಲ್ಲವೂ ಇದ್ದರೂ ಜೀವನ ಕಷ್ಟ ಕಷ್ಟ ಎನ್ನುತ್ತಾರೆ. ಇದ್ದಿದ್ದರಲ್ಲಿಯೇ ತೃಪ್ತಿ ಪಟ್ಟುಕೊಂಡು ಬಡವರು ಖುಷಿ ಖುಷಿಯಿಂದ ಜೀವನ ನಡೆಸುತ್ತಾರೆ. ಕಷ್ಟಪಟ್ಟು ದುಡಿದ ಹಣದಿಂದ ನಾವು ಏನನ್ನಾದರೂ ಖರೀದಿಸಿದರೆ ಅದರಿಂದ ಸಿಗುವ ಖುಷಿಗೆ ಪಾರವೇ ಇರುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನವೇ ಈ ವಿಡಿಯೋ.  

ಇದನ್ನೂ ಓದಿ: ಅಮ್ಮನ ಫೋನ್ ನಿಂದ 31 ಬರ್ಗರ್ ಆರ್ಡರ್ ಮಾಡಿ, ಟಿಪ್ಸ್ ಕೂಡಾ ಕೊಟ್ಟ ಎರಡು ವರ್ಷದ ಪೋರ

ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀಸಿದ್ದಕ್ಕೆ ಕುಣಿದ ಕುಪ್ಪಳಿಸಿದ ಮಗ

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹಾಗಾದ್ರೆ ಈ ವಿಡಿಯೋದಲ್ಲಿ ಏನಿದೆ ವಿಶೇಷ ಅಂತೀರಾ..? ತಂದೆಯೊಬ್ಬ ಸೆಕೆಂಡ್ ಹ್ಯಾಂಡ್ ಬೈಸಿಕಲ್ ಖರೀದಿಸಿ ಮನೆಗೆ ತಂದಾಗ ಅದನ್ನು ಕಂಡ ಅವರ ಪುತ್ರ ಕುಣಿದು ಕುಪ್ಪಳಿಸಿದ್ದಾರೆ. ನಮ್ಮ ಮನೆಗೂ ಒಂದು ಸೈಕಲ್ ಬಂತಲ್ಲಾ ಎಂದುಕೊಂಡ ಪುಟ್ಟ ಬಾಲಕ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Viral Video: 15 ಸೆಕೆಂಡ್ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟ ಟಿಕ್‍ಟಾಕ್ ಸ್ಟಾರ್!

ಸೆಕೆಂಡ್ ಹ್ಯಾಂಡ್ ಸೈಕಲ್‍ಗೆ ಹಾರ ಹಾಕಿ ವ್ಯಕ್ತಿಯೊಬ್ಬರು ಪೂಜೆ ಮಾಡುತ್ತಿರಬೇಕಾದರೆ, ಪಕ್ಕದಲ್ಲಿಯೇ ಇದ್ದ ಅವರ ಪುತ್ರ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾನೆ. ಮನೆಗೆ ಬಂದ ಬೈಸಿಕಲ್ ನೋಡಿದ ಪುಟ್ಟ ಬಾಲಕ ಸಂತೋಷಕ್ಕೆ ಪಾರವೇ ಇರಲಿಲ್ಲ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಣ್ಣ ಸಣ್ಣದರಲ್ಲಿಯೇ ಖುಷಿ ಇದೆ ಎಂಬುದನ್ನು ತಂದೆ-ಮಗ ತೋರಿಸಿಕೊಟ್ಟಿದ್ದಾರೆ. ಇವರಿಬ್ಬರ ಖುಷಿ ಕಂಡು ನೆಟಿಜನ್‍ಗಳು ಭಾವುಕರಾಗಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News