Viral Video : ಅತ್ತೆ ಮತ್ತು ಸೊಸೆಯ ನಡುವಿನ ವಿವಾದದ ಅನೇಕ ಕಥೆಗಳನ್ನು ನೀವು ಕೇಳಿರಬೇಕು. ಆದರೆ ಈ ವಿಡಿಯೋದಲ್ಲಿ ತೋರಿಸಿರುವಂತಹ ಬಾಂಧವ್ಯವನ್ನು ನೀವು ನೋಡಿಲ್ಲ. ಈ ವಿಡಿಯೋ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ನೀವೂ ಕೂಡ ಶಾಕ್‌ ಆಗುತ್ತೀರಿ. ನಿಮ್ಮ ಕಣ್ಣನ್ನೇ ನಂಬಲು ಸಾಧ್ಯವಾಗಲಿಕ್ಕಿಲ್ಲ. 


COMMERCIAL BREAK
SCROLL TO CONTINUE READING

ಅತ್ತೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮತ್ತೊಂದೆಡೆ, ಸೊಸೆ ಸೀರೆ ಉಟ್ಟು ಅಡುಗೆ ಮನೆಯ ಮುಂದೆ ನೃತ್ಯ ಮಾಡುತ್ತಿದ್ದಾಳೆ. ಸೊಸೆ ಹಿಂದಿಯ ಐಟಂ ಸಾಂಗ್‌ ಒಂದಕ್ಕೆ ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾಳೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.


 



 


ಇದನ್ನೂ ಓದಿ : Rahul Gandhi : ಪುಟ್ಟ ಬಾಲಕಿಯ ಜೊತೆ ರಾಹುಲ್ ಮಾತುಕತೆ, ವಿಡಿಯೋ ವೈರಲ್‌


ಸೊಸೆ ಅತ್ತೆಯ ಬಳಿ ಹೋಗಿ ಕುಣಿಯಲು ಆರಂಭಿಸುತ್ತಾಳೆ. ಅದೇ ಸಮಯದಲ್ಲಿ, ಅತ್ತೆ ಕೂಲ್‌ ಆಗಿದ್ದರು. ಸೊಸೆಯ ಡ್ಯಾನ್ಸ್ ನೋಡಿ ಅತ್ತೆ ಮುಗುಳ್ನಗುತ್ತಾರೆ. ಅತ್ತೆಯ ಪ್ರತಿಕ್ರಿಯೆಗಾಗಿ ಕಾಯಿರಿ ಎಂದು ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. 


ಅತ್ತೆ ಮತ್ತು ಸೊಸೆಯ ಈ ಜೋಡಿ ಜನರನ್ನು ಸಾಕಷ್ಟು ರಂಜಿಸುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾ ಬಳಕೆದಾರರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಜನರು ವಿಭಿನ್ನ ಮತ್ತು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ : ದೇವಾಲಯದ ಪೂಜೆ ಸಮಯಕ್ಕೆ ಬಂದು ಪ್ರಸಾದ ಸ್ವೀಕರಿಸೋ ಕೋತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.