Viral Video : ರೆಕ್ಕೆ ಇಲ್ಲದೆಯೇ ಬಾನೆತ್ತರಕ್ಕೆ ಹಾರುತ್ತಿದೆ ಈ ಜಿಂಕೆ! ಸೃಷ್ಟಿಯ ವೈಚಿತ್ರ್ಯ ಇದೇ ನೋಡಿ!
Flying Deer Viral Video : ಕಾಡು ಪ್ರಾಣಿಗಳನ್ನು ವಿಡಿಯೋಗಳ ಮೂಲಕ ನೋಡಿಯೇ ಕಣ್ತುಂಬಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದು ಜಿಂಕೆಯ ವಿಡಿಯೋ
Flying Deer Viral Video : ಪ್ರಾಣಿಗಳ ಲೋಕವೇ ಚಂದ. ಅದೊಂದು ಅದ್ಭುತ ಅನುಭವ. ಆ ಪ್ರಾಣಿಗಳ ಆಟ ತುಂಟಾಟ ಕಣ್ಣಿಗೆ ಹಬ್ಬ. ಒಮ್ಮೊಮ್ಮೆ ಪ್ರಾಣಿಗಳ ಬುದ್ದಿ ಮತ್ತೆ ನೋಡಿದರೆ ಆಶ್ಚರ್ಯವಾಗುತ್ತದೆ. ಸಾಕು ಪ್ರಾಣಿಗಳ ಜೊತೆ ನಿತ್ಯ ಆಡಬಹುದು. ಅವುಗಳ ಜೊತೆ ಕಾಲ ಕಳೆಯಬಹುದು. ಈ ಮೂಲಕ ಅವುಗಳನ್ನು ಹೆಚ್ಚು ಹೆಚ್ಚು ಅರಿತುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಕಾಡು ಪ್ರಾಣಿಗಳನ್ನು ವಿಡಿಯೋಗಳ ಮೂಲಕ ನೋಡಿಯೇ ಕಣ್ತುಂಬಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದು ಜಿಂಕೆಯ ವಿಡಿಯೋ. ಈ ವಿಡಿಯೋ ನೋಡಿದವರಿಗೆ ಆಶ್ಚರ್ಯವಲ್ಲ ಪರಮಾಶ್ಚರ್ಯವಾಗುವುದಂತೂ ಸತ್ಯ.
ಈ ವಿಡಿಯೋ ನೋಡಿದರೆ ಈ ಪ್ರಕೃತಿಯ ವೈಚಿತ್ರ್ಯ ಕಣ್ಣಿಗೆ ಕಟ್ಟುತ್ತದೆ. ಈ ಪ್ರಕೃತಿ ತನ್ನ ಗರ್ಭದೊಳಗೆ ಅದೆಷ್ಟು ವಿಚಿತ್ರಗಳನ್ನು ತುಂಬಿಟ್ಟುಕೊಂಡಿದೆಯೋ ಅನ್ನಿಸುತ್ತದೆ. ಕೆಲ ದಿನಗಳ ಮೊದಲೇ ನಾವು ಬಾನೆತ್ತರಕ್ಕೆ ಹಾರುವ ನವಿಲಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದೆವು. ಆದರೆ ಈಗ ಜಿಂಕೆಯೊಂದು ಸುಮಾರು 7 ಅಡಿ ಎತ್ತರಕ್ಕೆ ಜಿಗಿಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ವಿಕ್ಷಿಸಿದ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದೆ. ರಸ್ತೆ ದಾಟುವ ವೇಳೆ ಒಂದು ತುದಿಯಿಂದ ಇನ್ನೊಂದು ತುದಿಗೆ ಈ ಜಿಂಕೆ ಜಿಗಿದಿದೆ. ಇದು ಸ್ಲೋ ಮೋಶನ್ ನಲ್ಲಿ ಇರುವುದರಿಂದ ಜಿಂಕೆ ಗಾಳಿಯಲ್ಲಿ ಹಾರುತ್ತಿರುವಂತೆ ಕಾಣಿಸುತ್ತದೆ.
ಇದನ್ನೂ ಓದಿ : Viral Video : ಹೀಗೆ ತಯಾರಾಗುತ್ತಾ ನೂಡಲ್ಸ್? ಈ ವಿಡಿಯೋ ನೋಡಿದ್ರೆ ಜನ್ಮದಲ್ಲೇ ತಿನ್ನಲ್ಲ.!
ಇದ್ದಕ್ಕಿದ್ದಂತೆ ಈ ಜಿಂಕೆ ಅಷ್ಟು ಎತ್ತರಕ್ಕೆ ಜಿಗಿದು ಒಂದು ಸ್ವಲ್ಪವೂ ಬ್ಯಾಲೆನ್ಸ್ ತಪ್ಪದೇ ನೆಲದ ಮೇಲೆ ಬಂದು ನಿಲ್ಲುತ್ತದೆ. ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ.
ವಿಡಿಯೋ ವೈರಲ್ ಆಗಿದ್ದು, ಜಿಂಕೆಯ ಹೈ ಜಂಪ್ ನೋಡಿ ವೀಕ್ಷಕರು ಬೆರಗಾಗಿದ್ದಾರೆ. ಕಾಡಿನಲ್ಲಿ ಕ್ರೂರ ಪ್ರಾಣಿಗಳು ಸಾಮಾನ್ಯವಾಗಿ ಜಿಂಕೆಯನ್ನು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಈ ರೀತಿ ಬೇರೆ ಪ್ರಾಣಿಗಳು ಬೇಟೆಗೆ ಬಂದಾಗಲೂ ಜಿಂಕೆ ಇದೇ ರೀತಿ ತನ್ನ ಜಿಗಿತದ ಮೂಲಕ ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ.
ಇದನ್ನೂ ಓದಿ : ದೈತ್ಯ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ, ಬೈಕ್ ಸವಾರಿ! ಈ ವೈರಲ್ ವಿಡಿಯೋ ನೀವು ನೋಡಲೇಬೇಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.