Dinga Dinga virus: ಕೊರೊನಾ ವೈರಸ್ ಅಂದ್ರೆ ಸಾಕು ಜನರು ಈಗಲೂ ಸಹ ಬೆಚ್ಚಿ ಬೀಳ್ತಾರೆ. ನಿದ್ದೆಯಿಂದ ಒಂದು ಕ್ಷಣ ಎದ್ದು ಕೂತ್ಕೊಂಡು ಬಿಡುತ್ತಾರೆ. ಇಂತಹ ದಿನಗಳು ಮತ್ತೆ ಬರೋದು ಬೇಡಪ್ಪ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಕೊರೊನಾ ಸಾಂಕ್ರಾಮಿಕದಿಂದ ದೇಶದ ಜನರು ನರಕವನ್ನೇ ಅನುಭವಿಸಿದ್ದಾರೆ. ದೇಶದಲ್ಲಿ ವೈರಲ್‌ ತಾಂಡವವಾಡುತ್ತಿದ್ದ ಸಮಯದಲ್ಲಿ ದೇಶದಲ್ಲಿ ತುತ್ತು ಅನ್ನಕ್ಕೂ ಗತಿ ಇರಲಿಲ್ಲ. ಬಡವರು-ಶ್ರೀಮಂತರೂ ಪ್ರತಿಯೊಬ್ಬರೂ ಕೊರೊನಾದಿಂದ ಬಹುದೊಡ್ಡ ಸಂಕಷ್ಟ ಎದುರಿಸಿದ್ದರು. ಈ ಮಾರಕ ವೈರಸ್‌ಗೆ ಲಕ್ಷಾಂತರ ಜನರು ಬಲಿಯಾದರು. ಅಂದಿನ ಆ ಭೀಕರ ದಿನಗಳು ಮತ್ತೆ ಬಾರದಿರಲಿ ಅಂತಾ ಇಂದಿಗೂ ಜನರು ಪ್ರಾರ್ಥಿಸುತ್ತಿದ್ದಾರೆ.   


COMMERCIAL BREAK
SCROLL TO CONTINUE READING

ಇಡೀ ದೇಶವೇ 2024ಕ್ಕೆ ಗುಡ್‌ ಬೈ ಹೇಳಿ 2025ಕ್ಕೆ ವೆಲ್‌ಕಮ್‌ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿರುವ ಜನರಿಗೆ ಇದೀಗ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಂದಿದೆ. ಕೊರೊನಾಗಿಂತಲೂ ಡೇಂಜರ್ ಆಗಿರುವ ವೈರಸ್‌ವೊಂದು ಪತ್ತೆಯಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿರುವ ಜನರಲ್ಲಿ ಈ ವೈರಸ್‌ ದೊಡ್ಡ ಆತಂಕವನ್ನು ಮೂಡಿಸಿದೆ. ಹೌದು, ಆಫ್ರಿಕನ್ ದೇಶವಾದ ಉಗಾಂಡಾದಲ್ಲಿ ‘ಡಿಂಗಾ ಡಿಂಗಾ’ ಎಂಬ ವೈರಸ್ ಪತ್ತೆಯಾಗಿದೆ ಬಂಡಿಬುಗ್ಯೋ ಜಿಲ್ಲೆಯಲ್ಲಿ ಪತ್ತೆಯಾಗಿರುವ ಈ ವೈರಸ್‌ನಿಂದ ಭಾರೀ ಸಂಚಲನ ಸೃಷ್ಟಿಯಾಗಿದೆ. ಏಕೆಂದರೆ ಈ ಜಿಲ್ಲೆಯ ಸುಮಾರು 300 ಮಂದಿಗೆ ವಿಚಿತ್ರ ಕಾಯಿಲೆ ಬಂದಿತ್ತು.


ಇದನ್ನೂ ಓದಿ: ಈ ವಿಶ್ವದ ಅತ್ಯಂತ ದುಬಾರಿ ಉಂಗುರದಲ್ಲಿರುವ "ಹಲ್ಲು" ಯಾರದ್ದು ಗೊತ್ತೆ..!? ಶಾಕ್‌ ಆಗ್ತೀರಾ..


ಸ್ಥಳೀಯವಾಗಿ ಈ ಕಾಯಿಲೆಗೆ ‘ಡಿಂಗಾ ಡಿಂಗಾ‘ ಎಂದು ಹೆಸರಿಸಲಾಗಿದೆ. ಈ ಹೆಸರು ಕೇಳಲು ತಮಾಷೆಯಾಗಿದ್ದರೂ ತುಂಬಾ ಡೇಂಜರ್‌ ಅಂತೆ. ಹೆಚ್ಚಾಗಿ ಮಹಿಳೆಯರಲ್ಲಿ, ಹದಿಹರೆಯದ ಹುಡುಗಿಯರಲ್ಲಿ ಈ ಮಾರಕ ವೈರಸ್‌ ಕಂಡುಬರುತ್ತಿದೆಯಂತೆ. ಈ ಸೋಂಕಿನ ಬಗ್ಗೆ ವಿಶ್ವಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ. ಈ ವೈರಸ್‌ ಬಗ್ಗೆ ಇಡೀ ಜಗತ್ತಿಗೆ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಜ್ಜಾಗಿ ಅಂತಾ ಕರೆ ಕೊಟ್ಟಿದೆಯಂತೆ.


ಈ ಸಾಂಕ್ರಾಮಿಕ ರೋಗ ಮನುಷ್ಯರಿಂದ ಬಂತಾ ಅಥವಾ ಪ್ರಾಣಿ-ಪಕ್ಷಿಗಳಿಂದ ಬಂತಾ ಅಂತಾ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಈ ರೋಗಕ್ಕೆ ಔಷಧಿ ಕಂಡುಹಿಡಿಯುವ ಪ್ರಯತ್ನ ಸಹ ನಡೆಯುತ್ತಿದೆಯಂತೆ. ಉಗಾಂಡಾದಲ್ಲಿ ಕೊರೊನಾ ರೀತಿಯೇ ಈ ವೈರಸ್‌ ಸಾಂಕ್ರಾಮಿಕವಾಗಿ ಹರಡುತ್ತಿದೆ. ವಿಜ್ಞಾನಿಗಳು ಈ ರೋಗಕ್ಕೆ Disease X ಅಂತಾ ಕರೆಯುತ್ತಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಆಂಟಿ-ಬಯೋಟಿಕ್‌ಗಳನ್ನ ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೋಗದ ತೀವ್ರತೆ ಜಾಸ್ತಿ ಆಗಬಹುದು. ಹೀಗಾಗಿ ಪ್ರತಿಯೊಬ್ಬರೂ ಸಹ ಎಚ್ಚರಿಕೆಯಿಂದ ಇರಬೇಕು ಅಂತಾ ವಿಶ್ವಸಂಸ್ಥೆ ಸಲಹೆ ನೀಡಿದೆ. 


ಇದನ್ನೂ ಓದಿ: ಮಾರಣಾಂತಿಕ ಅಲರ್ಜಿಯನ್ನುಂಟು ಮಾಡುವ ಭೀತಿ... ಇನ್ಮುಂದೆ ʼLAYSʼ ಮಾರಾಟ ನಿಷೇಧ!?


ಈ ರೋಗದ ಲಕ್ಷಣಗಳು ಏನು?


ಈ ವೈರಸ್‌ಗೆ ತುತ್ತಾದವರಿಗೆ ಜ್ವರ ಇರುತ್ತದೆ. ಇಡೀ ದೇಹ ನಡುಗುತ್ತಿರುತ್ತದೆ. ಇದರ ಸೋಂಕಿಗೆ ತುತ್ತಾಗಿರುವ ಉಗಾಂಡದ ಮಹಿಳೆಯರು ಒಂದು ರೀತಿ ಡ್ಯಾನ್ಸ್‌ ಮಾಡುವ ರೀತಿ ವರ್ತಿಸುತ್ತಾರಂತೆ.  ಈ ವೈರಸ್‌ ತುಂಬಾ ಡೇಂಜರ್‌ ಆಗಿದ್ದು, ದಿನೇ ದಿನೇ ವೀಕ್ ಆಗುತ್ತಾರಂತೆ. ಕೊರೊನಾ ರೀತಿಯೇ ಉಸಿರಾಟದ ತೊಂದರೆ ಅನುಭವಿಸುತ್ತಾರಂತೆ. ಈ ರೋಗ ಲಕ್ಷಣಗಳು ಕಂಡುಬಂದಲ್ಲ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಇದರ ಬಗ್ಗೆ ಪ್ರತಿಯೊಬ್ಬರೂ ಸಹ ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ. 


ಕಾಂಗೋದಲ್ಲಿ ಮತ್ತೊಂದು ರೋಗ ಪತ್ತೆ!


ಉಗಾಂಡಾದಲ್ಲಿ ʼಡಿಂಗಾ ಡಿಂಗಾʼ ವೈರಲ್‌ ಹಾವಳಿ ಶುರುವಾಗಿದ್ದರೆ ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಮತ್ತೊಂದು ರೀತಿಯ ರೋಗ ಪತ್ತೆಯಾಗಿ ಸಂಚಲನ ಸೃಷ್ಟಿಸಿದೆ. ಇದು ಯಾರಿಗೂ ಅರ್ಥವಾಗದ ವೈರಸ್ ಆಗಿದೆ. ಈಗಾಗಲೇ 400 ಜನರಿಗೆ ಈ ಸೋಂಕು ತಗುಲಿದ್ದು, 30 ಜನರು ಸಾವನ್ನಪ್ಪಿದ್ದಾರೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ  ಹೇಳಿದೆ. ಈ ಕಾಯಿಲೆಗೆ ತುತ್ತಾದ ಜನರಿಗೆ ಜ್ವರ, ತಲೆನೋವು, ಕೆಮ್ಮು, ಮೂಗು ಸೋರುವಿಕೆ ಮತ್ತು ಗಂಟಲು ನೋವು ಇರುತ್ತದೆ ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.