Interesting Facts Related to Beer: ಬಿಯರ್ ಇತಿಹಾಸ ತುಂಬಾ ಹಳೆಯದಾಗಿದೆ. ಪ್ರಾಚೀನ ಮೆಸೊಪಟ್ಯಾಮಿಯಾದ ಸುಮೇರಿಯನ್ ನಾಗರಿಕತೆಯ ಕಾಲದಿಂದಲೂ ಮನುಷ್ಯರು ಬಿಯರ್ ಸೇವಿಸುತ್ತಿದ್ದಾರೆ. ಇನ್ನೊಂದೆಡೆ, 18 ನೇ ಶತಮಾನದ ಹೊತ್ತಿಗೆ, ಅದರ ವ್ಯವಹಾರವು ವಿಶ್ವಾದ್ಯಂತ ವ್ಯಾಪಕವಾಗಿ ಹರಡಿದೆ. ಸಾವಿರಾರು ವರ್ಷಗಳ ಹಿಂದೆ ಬಿಯರ್ ತಯಾರಿಸಿದ ಮೊದಲ ಕಂಪನಿ ಪ್ರಾಚೀನ ಈಜಿಪ್ಟ್‌ನಲ್ಲಿತ್ತು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ, ಬಿಯರ್ ಅನ್ನು ನೀಡಲು ಕಂದು ಬಣ್ಣದ ಬಾಟಲಿಗಳನ್ನು ಸಹ ಬಳಸಲಾಗುತ್ತಿತ್ತು, ಈ ಕಂಡು ಬಣ್ಣದ ಬಾಟಲಿಗಳಿಂದ ಬಿಯರ್ ಮೇಲೆ ಸೂರ್ಯನ ಕಿರಣ ಬಿದ್ದರೂ ಕೂಡ ಅದು ಹಾಳಾಗುವುದಿಲ್ಲ. ಪ್ರಸ್ತುತ ಜಗತ್ತಿನಲ್ಲಿ ಬಿಯರ್ ಜನರಲ್ಲಿ ಎಷ್ಟು ಜನಪ್ರೀಯತೆ ಹೊಂದಿದೆ ಎಂದರೆ ಪಾಸಿಮಾತ್ಯ ದೇಶಗಳಲ್ಲಿ ಜನರು ದಿನವಿಡೀ ನೀರಿಗಿಂತ ಹೆಚ್ಚು ಬಿಯರ್ ಹೆಚ್ಚಾಗಿ ಕುಡಿಯುತ್ತಾರೆ. ಹಾಗಾದರೆ ಬನ್ನಿ ಇಂದು ನಾವು ಬಿಯರ್‌ಗೆ ಸಂಬಂಧಿಸಿದ ಕೆಲ ಅತ್ಯಂತ ವಿರಳ ಹಾಗೂ ಸ್ವಾರಸ್ಯಕರ ಸಂಗತಿಗಳ ಕುರಿತು ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

1. ಹಿಂದಿ ಭಾಷೆಯಲ್ಲಿ ಬಿಯರ್ ಅನ್ನು 'ಯವಸುರ' ಎಂದು ಕರೆಯುತ್ತಾರೆ. ಏಕೆಂದರೆ ಬಾರ್ಲಿಯನ್ನು ಸಂಸ್ಕೃತದಲ್ಲಿ "ಯವ" ಎಂದು ಕರೆಯಲಾಗುತ್ತದೆ ಮತ್ತು ಬಿಯರ್ ಅನ್ನು ಬಾರ್ಲಿಯಿಂದ ತಯಾರಿಸಲಾಗುತ್ತದೆ. ಆದರೂ ಕೂಡ ಬಿಯರ್ ಇನ್ನೂ ಅನೇಕ ಇತರ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದಲ್ಲದೆ, ಇದನ್ನು ಭಾರತೀಯ ಉಪಖಂಡದಲ್ಲಿ "ಆಬ್-ಜಾವ್" ಎಂದೂ ಕರೆಯುತ್ತಾರೆ.

2. ವಿಶ್ವದ ಅತ್ಯಂತ ಸ್ಟ್ರಾಂಗ್ ಬಿಯರ್ ಯಾವುದು ಎಂಬುದು ನಿಮಗೆ ತಿಳಿದಿದೆಯಾ? ಇಲ್ಲ ಎಂದಾದರೆ ಕೇಳಿ, 'ಸ್ನೇಕ್ ವೆನೋಮ್' ವಿಶ್ವದ ಅತ್ಯಂತ ಸ್ಟ್ರಾಂಗ್ ಬಿಯರ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಶೇ.67.5 ರಷ್ಟು  ಆಲ್ಕೋಹಾಲ್ ಇರುತ್ತದೆ. ಇದು ಬ್ರಿಟಿಷ್ ಬಿಯರ್‌ನ ಒಂದು ವಿಧವಾಗಿದೆ.

3. ವಿಶ್ವದ ಅತ್ಯಂತ ದುಬಾರಿ ಬಿಯರ್ ಯಾವುದು ಎಂಬುದನ್ನು ಹೇಳಬಲ್ಲಿರಾ? ಇಲ್ಲ ಎಂದಾದರೆ ಕೇಳಿ 'ಆಲ್ಸೊಪ್ಸ್ ಆರ್ಕ್ಟಿಕ್ ಅಲೆ' ವಿಶ್ವದ ಅತ್ಯಂತ ದುಬಾರಿ ಬಿಯರ್ , ಇದರ ಒಂದು ಬಾಟಲಿಯ ಬೆಲೆ US$504,200 ಆಗಿದೆ.

4. ಬಿಯರ್ ನ ಗುಣಮಟ್ಟವನ್ನು ತಿಳಿದುಕೊಳ್ಳಲು ಅದರ ಮೇಲೆ ಸಂಗ್ರಹವಾಗುವ ಫೋಮ್ ಅನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದರಿಂದಲೇ ಬಿಯರ್ ಯಾವ ಗುಣಮಟ್ಟದ್ದಾಗಿದೆ ಎಂಬುದನ್ನು ತಿಳಿಯಬಹುದು. ಬಿಯರ್ ಮೇಲೆ ಸಂಗ್ರಹವಾಗುವ ಈ ಫೋಮ್ ಅನ್ನು 'ಬಾರ್ಮ್' ಎಂದು ಕರೆಯಲಾಗುತ್ತದೆ.

5. ಖಾಲಿ ಗ್ಲಾಸ್ ಬಿಯರ್ ಅನ್ನು ನೋಡುವ ಭಯವನ್ನು ಸೆನೋಸಿಲಿಕಾಫೋಬಿಯಾ ಎಂದು ಕರೆಯಲಾಗುತ್ತದೆ. ಇದು ಬಹುತೇಕರಿಗೆ ತಿಳಿಯದ ಒಂದು ಫೋಬಿಯಾ ಆಗಿದೆ. 

6. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಿಯರ್ ಬಾಟಲಿಗಳ ಸಹಾಯದಿಂದ ಥೈಲ್ಯಾಂಡ್‌ನಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

7. ನೆದರ್ಲ್ಯಾಂಡ್ಸ್ನಲ್ಲಿ, ಮದ್ಯಪಾನ ಮಾಡುವವರಿಗೆ ಬಿಯರ್ ನೀಡಿ ಬೀದಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ.

8. ಈ ಸಂಗತಿಯನ್ನು ಕೇಳಿ ನೀವೂ ಕೂಡ ಬೆಚ್ಚಿಬೀಳುವಿರಿ. ಹೌದು, 1992 ರಲ್ಲಿ, ವಿಜ್ಞಾನಿ ನೀಲ್ ಬೋರ್ ಅವರು ನೊಬೆಲ್ ಪ್ರಶಸ್ತಿಯನ್ನು ಗೆದ್ದಾಗ, ಅವರ ಗೌರವಾರ್ಥವಾಗಿ ಅವರ ಮನೆಗೆ ಪೈಪ್ ಮೂಲಕ ಬಿಯರ್ ಸರಬರಾಜು ಮಾಡಲಾಗಿತ್ತಂತೆ.


ಇದನ್ನೂ ಓದಿ-Good News! ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಹೋದ ಕೋವಿಡ್ - 19, ಡಬ್ಲ್ಯೂಎಚ್ಓ ಘೋಷಣೆ

9. ಫಿನ್ಲ್ಯಾಂಡ್ ನಲ್ಲಿ ಪತ್ನಿಯನ್ನು ಎತ್ತಿಕೊಂಡು ಓಡುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅವರ ಪತ್ನಿಯ ತೂಕದಷ್ಟೇ ತೂಗುವ ಬಿಯರ್ ಅನ್ನು ಪ್ರಶಸ್ತಿಯ ರೂಪದಲ್ಲಿ ನೀಡಲಾಗುತ್ತದೆ.


ಇದನ್ನೂ ಓದಿ-Urfi Javed ನಂತಹ ಬಟ್ಟೆ ತೊಟ್ಟು ಶಾಪಿಂಗ್ ಮಾಡ್ತೀಳು ಈಕೆ, ಕಣ್ಣಿಗೆ ಬೀಳುತ್ತಲೇ ಹೊಡೆದೋಡಿರುವ ಫರ್ಮಾನು ಹೊರಡಿಸಿದ ಸೂಪರ್ ಮಾರ್ಕೆಟ್!

10. 2013ರವರೆಗೆ ರಷ್ಯಾದಲ್ಲಿ ಬಿಯರ್ ಅನ್ನು ಒಂದು ಅಲ್ಕೋಹಾಲಿಕ್ ಪಾನೀಯ ಎಂದು ಭಾವಿಸಲಾಗುತ್ತಿರಲಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.