Snake Dog Fight : ಸ್ನೇಹಿತನನ್ನು ಉಳಿಸಲು ಹಾವಿನೊಂದಿಗೆ ನಾಯಿಯ ಹೋರಾಟ!
Viral Video : ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವ ವಿಡಿಯೋವೊಂದು ಜನಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ನಾಯಿ ಮತ್ತು ಅಪಾಯಕಾರಿ ಹಾವಿನ ನಡುವೆ ಕಾದಾಟ ನಡೆದಿದೆ.
Snake Dog Fight: ಹಾವುಗಳು ಪ್ರಾಣಿಗಳ ಮೇಲೆ ದಾಳಿ ಮಾಡುವ ವಿಡಿಯೋಗಳನ್ನು ನೀವು ಆಗಾಗ್ಗೆ ನೋಡಿರಬೇಕು. ಆದರೆ ನಾಯಿಯೊಂದು ಹಾವಿನ ಮೇಲೆ ದಾಳಿ ಮಾಡುವ ವಿಡಿಯೋವನ್ನು ನೀವು ಅಪರೂಪಕ್ಕೆ ನೋಡಿದ್ದೀರಿ. ಈ ವಿಶಿಷ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದೆ. ಅಪಾಯಕಾರಿ ಹಾವೊಂದು ಪಕ್ಷಿ ಇರುವ ಪಂಜರವನ್ನು ಪ್ರವೇಶಿಸಲು ಮುಂದಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ : WATCH: ಟೀಮ್ ಇಂಡಿಯಾಗೆ ವಿಶಿಷ್ಟ ರೀತಿಯಲ್ಲಿ ವಿಶ್ ಮಾಡಿದ ರಾಹುಲ್ ಗಾಂಧಿ...!
ಆಗ ಮನೆಯಲ್ಲಿದ್ದ ನಾಯಿ ತನ್ನ ಸ್ನೇಹಿತನ ಜೀವ ಉಳಿಸಲು ಅಲ್ಲಿಗೆ ಬರುತ್ತದೆ ಮತ್ತು ನಂತರ ಏನಾಯಿತು ಎಂದು ನೋಡಿದರೆ ನೀವು ಸಹ ಶಾಕ್ ಆಗುತ್ತೀರಿ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.
ಗಿಳಿ ತನ್ನ ಹತ್ತಿರ ಬರುತ್ತಿರುವ ಹಾವನ್ನು ನೋಡಿ ಗಾಬರಿಯಾಗುತ್ತದೆ. ಹಾವು ಗಿಳಿಯ ಮೇಲೆ ದಾಳಿ ಮಾಡುವ ಮುನ್ನ ನಾಯಿ ಹಾವಿನೊಂದಿಗೆ ಘರ್ಷಣೆ ಮಾಡುತ್ತದೆ. ನಾಯಿ ತನ್ನ ಪ್ರಾಣದ ಬಗ್ಗೆ ಕಾಳಜಿ ವಹಿಸದೆ, ಹಾವಿನ ಬಾಲವನ್ನು ಹಿಡಿದು ಪಂಜರದಿಂದ ಹೊರಗೆ ಎಳೆಯುತ್ತದೆ. ನಾಯಿಯು ಹಾವನ್ನು ಅನೇಕ ಬಾರಿ ಕಚ್ಚುತ್ತದೆ. ಈ ವಿಡಿಯೋ ನೋಡಿದ ಎಷ್ಟೋ ಮಂದಿಗೆ ತಮ್ಮ ಕಣ್ಣನ್ನೇ ನಂಬಲಾಗುತ್ತಿಲ್ಲ.
ಇದನ್ನೂ ಓದಿ : Funny Video : ಮಾವುತನ ಪಕ್ಕ ಕುಳಿತು ಮೊಬೈಲ್ ನೋಡುವ ಆನೆ! ವಿಡಿಯೋ ಸಿಕ್ಕಾಪಟ್ಟೆ ವೈರಲ್
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 30 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಲಕ್ಷಾಂತರ ಮಂದಿ (ಸೋಶಿಯಲ್ ಮೀಡಿಯಾ ಬಳಕೆದಾರರು) ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಅನೇಕ ಜನರು ನಾಯಿಯನ್ನು ನಿಷ್ಠಾವಂತ ಮತ್ತು ಧೈರ್ಯಶಾಲಿ ಎಂದು ಕರೆಯುವುದು ಕಂಡುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.