WATCH: ಟೀಮ್ ಇಂಡಿಯಾಗೆ ವಿಶಿಷ್ಟ ರೀತಿಯಲ್ಲಿ ವಿಶ್ ಮಾಡಿದ ರಾಹುಲ್ ಗಾಂಧಿ...!

T20 ವಿಶ್ವಕಪ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೆದ್ದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Nov 2, 2022, 08:53 PM IST
  • ಭಾರತ್ ಜೋಡೋ ಯಾತ್ರೆ, ಅವಕಾಶದ ಕಿಟಕಿಯನ್ನು ತೆರೆದಿದೆ ಎಂದು ನಾನು ಹೇಳುವುದಿಲ್ಲ,
  • ಅದು ಅವಕಾಶದ ಬಾಗಿಲನ್ನು ತೆರೆದಿದೆ.
  • ಕಾಂಗ್ರೆಸ್ ಮತ್ತು ಗಾಂಧಿ ಸುತ್ತಲಿನ ನಿರೂಪಣೆಯು ರೂಪಾಂತರಗೊಂಡಿದೆ, ಇದು ಇನ್ನು ಮುಂದೆ ಋಣಾತ್ಮಕ ದೂಷಣೆಯ ನಿರೂಪಣೆಯಲ್ಲ
 WATCH: ಟೀಮ್ ಇಂಡಿಯಾಗೆ ವಿಶಿಷ್ಟ ರೀತಿಯಲ್ಲಿ ವಿಶ್ ಮಾಡಿದ ರಾಹುಲ್ ಗಾಂಧಿ...!  title=

ನವದೆಹಲಿ: T20 ವಿಶ್ವಕಪ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೆದ್ದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವೀಡಿಯೊವು ಪ್ರಸ್ತುತ ತೆಲಂಗಾಣದಲ್ಲಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯದ್ದಾಗಿದೆ. ವೀಡಿಯೋದಲ್ಲಿ ಟೀಂ ಇಂಡಿಯಾದ ನೀಲಿ ಬಣ್ಣದ ಜೆರ್ಸಿ ಧರಿಸಿದ್ದ ಬಾಲಕನೊಬ್ಬನಿಗೆ ರಾಹುಲ್ ಗಾಂಧಿ ಬೌಲ್ ಎಸೆದಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.ಕೆಲವು ಬೌಲ್ ಎಸೆದ ನಂತರ ಆ ಹುಡುಗನಿಗೆ ರಾಹುಲ್ ಗಾಂಧಿ ಹಸ್ತಾಕ್ಷರ ನೀಡಿದ್ದಾರೆ.

ಇದನ್ನೂ ಓದಿ : TET Exam 2022 : ಇದೆ ತಿಂಗಳ 6 ರಂದು ಟಿಇಟಿ ಪರೀಕ್ಷೆ : ಅಭ್ಯರ್ಥಿಗಳಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ 

ಭಾರತ್ ಜೋಡೋ ಯಾತ್ರೆಯ ಪರಿಣಾಮ: 

ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯು ಹೊಸ, ಹೆಚ್ಚು ಸಕಾರಾತ್ಮಕ ರಾಜಕೀಯ ನಿರೂಪಣೆಯನ್ನು ರಚಿಸಲು ಹೇಗೆ ಸಹಾಯ ಮಾಡಿತು ಎಂಬುದರ ಕುರಿತು ಮಾತನಾಡಿದ್ದಾರೆ.ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಯ ಕುರಿತು ಮಾತನಾಡುತ್ತಾ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಅಥವಾ ತೆಲಂಗಾಣದಲ್ಲಿ ಕಾಂಗ್ರೆಸ್ ಸಂಘಟನೆಗೆ ಶಕ್ತಿ ತುಂಬಿರುವುದು ಗೋಚರವಾಗುವಂತೆ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ : Wildlife Service Award 2022: ನವೆಂಬರ್ 5 ರಂದು ಅರಣ್ಯ ವೀಕ್ಷಕ ಫೈರೋಜ್ ವಿವಿಎಎಸ್ ರಿಂದ ಸನ್ಮಾನ

"... ಭಾರತ್ ಜೋಡೋ ಯಾತ್ರೆ, ಅವಕಾಶದ ಕಿಟಕಿಯನ್ನು ತೆರೆದಿದೆ ಎಂದು ನಾನು ಹೇಳುವುದಿಲ್ಲ, ಅದು ಅವಕಾಶದ ಬಾಗಿಲನ್ನು ತೆರೆದಿದೆ.ಕಾಂಗ್ರೆಸ್ ಮತ್ತು ಗಾಂಧಿ ಸುತ್ತಲಿನ ನಿರೂಪಣೆಯು ರೂಪಾಂತರಗೊಂಡಿದೆ, ಇದು ಇನ್ನು ಮುಂದೆ ಋಣಾತ್ಮಕ ದೂಷಣೆಯ ನಿರೂಪಣೆಯಲ್ಲ ಬದಲಾಗಿ ಇದೊಂದು ಇದು ಸಾಮೂಹಿಕ ಸಂಪರ್ಕದಲ್ಲಿ ಸಾಧಿಸುವ ನಿಟ್ಟಿನಲ್ಲಿ ವಿಶಿಷ್ಟ ಪ್ರಯತ್ನ ಎಂದು ರಮೇಶ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News