Dogs Heroic Video: ತನ್ನ ಮಾಲೀಕರನ್ನು ಹೊತ್ತುಕೊಂಡು ಹೋಗುತ್ತಿರುವ ಅಂಬ್ಯುಲೆನ್ಸ್‌ನ ಹಿಂದೆ ನಾಯಿ ಬೆಂಬಿಡದೆ ಓಡಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸದ್ಯ ಈ ವಿಡಯೋ ಇದೀಗ ವೈರಲ್‌ ಆಗುತ್ತಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral video: ಎಷ್ಟು ಕ್ಯೂಟ್‌ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರ


ಕೆಲ ದಿನಗಳ ಹಿಂದೆ 777 ಚಾರ್ಲಿ ಚಿತ್ರ ಪ್ರಾಣಿಪ್ರಿಯರ ಮನಗೆದ್ದಿತ್ತು.  ಈ ಸಿನಿಮಾದಲ್ಲಿ ಹೃದಯಸ್ಪರ್ಶಿ ದೃಶ್ಯವಿದೆ. ಇದರಲ್ಲಿ, ಮಾಲೀಕರು ಅನಾರೋಗ್ಯಕ್ಕೆ ಒಳಗಾದಾಗ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಈ ಸಮಯದಲ್ಲಿ ನಾಯಿ ಆಂಬ್ಯುಲೆನ್ಸ್ ಹಿಂದೆ ಓಡಿ ಆಸ್ಪತ್ರೆಯನ್ನು ತಲುಪುತ್ತದೆ. ಇದೇ ಘಟನೆಯನ್ನು ಹೋಲುವ ದೃಶ್ಯವೊಂದು ಇದೀಗ ನಿಜವಾಗಿಯೂ ನಡೆದಿದ್ದು, ವಿಡಿಯೋ ನೋಡಿ ನೆಟ್ಟಿಗರು "ವಿ ಡೋಂಟ್‌ ಡಿಸರ್ವ್‌ ಡಾಗ್ಸ್‌" ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.


ಇದನ್ನೂ ಓದಿ: Viral video: ಮನುಷ್ಯರಂತೆ ನಡೆದಾಡುತ್ತಿದೆ ಈ ಮರ! ವಿಡಿಯೋ ನೋಡಿ ನಿಮ್ಮ ಕಣ್ಣುಗಳನ್ನು ನೀವೆ ನಂಬಲ್ಲ


ನಾಯಿಗಳು ಪ್ರಾಣಿಗಳಲ್ಲಿ ಅತ್ಯಂತ ನಿಷ್ಠಾವಂತ ಎಂದು ಹೇಳಲಾಗುತ್ತದೆ. ಈ ನಿಷ್ಠೆಯ ಪುರಾವೆಯನ್ನು ಈ ವೈರಲ್ ವೀಡಿಯೊದಲ್ಲಿ ಕಾಣಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಆಂಬ್ಯುಲೆನ್ಸ್ ರೋಗಿಯನ್ನು ಹೊತ್ತೊಯ್ಯುತ್ತಿದೆ ಮತ್ತು ಈ ಆಂಬ್ಯುಲೆನ್ಸ್ ಹಿಂದೆ ನಾಯಿ ಕೂಡ ಓಡುತ್ತಿದೆ. ಹಿಂದಿನಿಂದ ಬಂದವರೊಬ್ಬರು ಇದನ್ನೆಲ್ಲ ವಿಡಿಯೋ ಮಾಡಿದ್ದಾರೆ. ನಾಯಿಯನ್ನು ನೋಡಿದ ಆಂಬ್ಯುಲೆನ್ಸ್ ಚಾಲಕ ನಿಲ್ಲಿಸುವುದನ್ನು ವೀಡಿಯೊ ತೋರಿಸುತ್ತದೆ.


ಇದನ್ನೂ ಓದಿ: Viral Video: ಅಭಿಷೇಕದ ವೇಳೆ ಭಕ್ತಿಗೆ ಮೆಚ್ಚಿ ಕಣ್ಣು ತೆಗೆದ ದೇವಿ ವಿಗ್ರಹ! ಮೈ ಜುಮ್ಮೆನಿಸುತ್ತೆ ಈ ಅದ್ಭುತ ದೃಶ್ಯ


ಇದರ ನಂತರ ಅವರು ಆಂಬ್ಯುಲೆನ್ಸ್ ಬಾಗಿಲು ತೆರೆಯುತ್ತಾರೆ. ನಾಯಿ ಒಳಗೆ ಹೋಗುತ್ತದೆ. ಸದ್ಯ ಈ ವಿಡಯೋ ಸಾಮಾಜಿಕ ಜಾಲತಾನದಲ್ಲಿ ಸಾವಿರಾರು ಮನಸ್ಸುಗಳನ್ನು ಗೆದ್ದಿದೆ, ನಾಯಿಯ ನಿಷ್ಟೆ ನೋಡಿದ ನೆಟ್ಟಿಗರು, ನಾವು ನಾಯಿಗಳನ್ನು ಸಾಕಲು ಅರ್ಹರಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಈ ನಾಯಿಯ ನಿಯತ್ತನ್ನು ನೋಡಿ ನೆಟ್ಟಿಗರು ನಾಯಿಗೊಂದು ಸಲಾಮ್‌ ಎನ್ನುತ್ತಿದ್ದಾರೆ.
 


ಇದನ್ನೂ ಓದಿ: Viral video: ದೇವರಿಗೂ ತಾಳಲಾಗದ ದುಖಃ..ಕಣ್ಣೀರಿಟ್ಟ ತಿರುಪತಿ ತಿಮ್ಮಪ್ಪನ ವಿಗ್ರಹ! ದೃಶ್ಯ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.