Viral video: ದೇವರಿಗೂ ತಾಳಲಾಗದ ದುಖಃ..ಕಣ್ಣೀರಿಟ್ಟ ತಿರುಪತಿ ತಿಮ್ಮಪ್ಪನ ವಿಗ್ರಹ! ದೃಶ್ಯ ನೋಡಿ

tirupati balaji crying viral video: ತಿರುಪತಿ ತಿಮ್ಮಪ್ಪ ಎಂದರೆ ಎಲ್ಲರಿಗೂ ಕೂಡ ಅಪಾರವಾದ ಭಕ್ತಿ. ಬಾಲಾಜಿಯನ್ನು ಕಣ್ತುಂಬಿಕೊಳ್ಳಲು ಜನ ಮುಡಿ ಕಟ್ಟಿ ಬೆಟ್ಟ ಹತ್ತಿ ದೇವರ ದರ್ಶನ ಪಡೆಯಲೆಂದು ಹೋಗುತ್ತಾರೆ. ಆದರೆ ತಿರುಪತಿ ತಿಮ್ಮಪ್ಪ ಕಣ್ಣೀರುಡುತ್ತಿದ್ದಾನೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

Written by - Zee Kannada News Desk | Last Updated : Sep 11, 2024, 11:50 AM IST
  • ತಿರುಪತಿ ತಿಮ್ಮಪ್ಪ ಎಂದರೆ ಎಲ್ಲರಿಗೂ ಕೂಡ ಅಪಾರವಾದ ಭಕ್ತಿ.
  • ತಿರುಪತಿ ತಿಮ್ಮಪ್ಪ ಕಣ್ಣೀರುಡುತ್ತಿದ್ದಾನೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದೆ.
  • ವಿಡಿಯೋ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
Viral video: ದೇವರಿಗೂ ತಾಳಲಾಗದ ದುಖಃ..ಕಣ್ಣೀರಿಟ್ಟ ತಿರುಪತಿ ತಿಮ್ಮಪ್ಪನ ವಿಗ್ರಹ! ದೃಶ್ಯ ನೋಡಿ  title=

tirupati balaji crying viral video: ತಿರುಪತಿ ತಿಮ್ಮಪ್ಪ ಎಂದರೆ ಎಲ್ಲರಿಗೂ ಕೂಡ ಅಪಾರವಾದ ಭಕ್ತಿ. ಬಾಲಾಜಿಯನ್ನು ಕಣ್ತುಂಬಿಕೊಳ್ಳಲು ಜನ ಮುಡಿ ಕಟ್ಟಿ ಬೆಟ್ಟ ಹತ್ತಿ ದೇವರ ದರ್ಶನ ಪಡೆಯಲೆಂದು ಹೋಗುತ್ತಾರೆ. ಆದರೆ ತಿರುಪತಿ ತಿಮ್ಮಪ್ಪ ಕಣ್ಣೀರುಡುತ್ತಿದ್ದಾನೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: Viral video: ಅಬ್ಬಬ್ಬಾ ಏನಿದು ಪ್ರಕೃತಿಯ ವಿಸ್ಮಯ! ಬಾಯ್ತೆರೆದು ಜೋರಾಗಿ ಉಸಿರಾಡುತ್ತಿದೆ ಮರ..ಈ ಅದ್ಭುತ ದೃಶ್ಯ ನೀವೊಮ್ಮೆ ಕಣ್ತುಂಬಿಕೊಳ್ಳಿ

ತಿರುಪತಿ ತಿಮ್ಮಪ್ಪನ ಒಂದಲ್ಲ ಒಂದು ಪವಾಡದ ಕುರಿತು ನಾವು ಹಲವಾರು ಕಥೆಗಳನ್ನು ಕೇಳಿರುತ್ತೇವೆ. ಬಾಲಾಜಿಯ ಪವಾಡಗಳು ಒಂದೊಮ್ಮೆ ಅಚ್ಚರಿ ಎನಿಸಿದರೂ ಸತ್ಯ. ತಿರುಪತಿ ತಿರುಮಲ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಪೂಜ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ತಿಳಿದಿರುವ ವಿಷಯಗಳಿಗಿಂತ ತಿಮ್ಮಪ್ಪನ ದೇವಾಲಯ ಹಲವಾರು ನಿಗೂಡತೆಗಳನ್ನು ಹೊಂದಿದೆ. ತಿರುಪತಿ ತಿಮ್ಮಪ್ಪ ವಿಗ್ರಹ ನಿಜವಾದ ಕೂದಲನ್ನು ಹೊಂದಿದೆ ಎಂಬುದು ನಿಮಗೆ ಗೊತ್ತಿರಬಹುದು. ಆದರೆ ಅದಕ್ಕಿಂತ ಅಚ್ಚರಿಯ ವಿಷಯವೇನೆಂದರೆ ತಿಮ್ಮನ ವಿಗ್ರಹದಿಂದ ಕಣ್ಣೀರು ಹೊರಬರುತ್ತಿದೆ.

ಇದನ್ನೂ ಓದಿ: viral video: ಮೈಕ್ರೋಸ್ಕೋಪ್‌ನಲ್ಲಿ ನವಿಲುಗರಿ ಹೇಗೆ ಕಾಣುತ್ತೆ ಗೊತ್ತಾ? ರೈನ್‌ಬೋ ಕಲರ್ಸ್‌ನ ಫೆದರ್‌ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ

ಸಾಮಾನ್ಯವಾಗಿ ಭಕ್ತರು ತಿರುಪತಿಗೆ ಹೋದಾಗ ತಮ್ಮ ಮುಡಿಯನ್ನು ತಿಮ್ಮಪ್ಪನಿಗೆ ಅರ್ಪಿಸುತ್ತಾರೆ. ಇದರ ಹಿಂದೆ ಒಂದು ಕಥೆಯಿದೆ. ತಿರುಪತಿ ತಿಮ್ಮಪ್ಪ 
ಭೂಮಿಯ ಮೇಲಿನ ತನ್ನ ಆಡಳಿತದ ಸಮಯದಲ್ಲಿ, ಅನಿರೀಕ್ಷಿತ ಅಪಘಾತದಲ್ಲಿ ತನ್ನ ಕೂದಲನ್ನು ಕಳೆದುಕೊಳ್ಳುತ್ತಾನೆ, ಇದನ್ನು ಗಮನಿಸುವ ರಾಜಕುಮಾರಿ ನೀಲಾ ದೇವಿಯೂ ತನ್ನ ತಲೆ ಕೂದಲಿನ ಭಾಗವನ್ನು ಕತ್ತರಿಸಿ ತಿಮ್ಮಪ್ಪನಿಗೆ ಅರ್ಪಿಸುತ್ತಾಳೆ. ರಾಜಕುಮಾರಿಯ ಭಕ್ತಿಗೆ ಮೆಚ್ಚಿದ ಬಾಲಾಜಿ ಆಕೆ ನೀಡಿದ ತಲೆಕೂದಲನ್ನು ತನ್ನ ಪದಗಳಿಗೆ ಅರ್ಪಿಸುತ್ತಾನೆ, ಅಂದಿನಿಂದ, ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸುವ ಮೊದಲು ಅಥವಾ ನಂತರ ದೇವಾಲಯದಲ್ಲಿ ತಲೆ ಬೋಳಿಸಿಕೊಳ್ಳುವ ಸಂಪ್ರದಾಯವಿದೆ.

ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು

ಇನ್ನೂ ತಿರುಪತಿ ತಿಮ್ಮಪ್ಪ ಕಣ್ಣೀರಿಡುತ್ತಿದ್ದಾನೆ ಎಂದು ಹೇಳಲಾಗುವ ಈ ವಿಡಿಯೋದಲ್ಲಿ, ತಿಮ್ಮಪ್ಪನ ಶಿಲೆಯಿಂದ ನೀರು ಹೊರಬರುತ್ತಿರುವುದನ್ನು ಕಾಣಬಹುದು. ಬಾಲಾಜಿಯ ವಿಗ್ರಹವನ್ನು ಕಲ್ಲಿನಿಂದ ಕೆತ್ತಲ್ಪಟ್ಟಿರಬಹುದು, ಆದರೆ ಇದು ಸಂಪೂರ್ಣವಾಗಿ ಜೀವದಿಂದ ತುಂಬಿದೆ. 3000 ಅಡಿ ಕಡಿದಾದ ಸ್ಥಳದಿಂದಾಗಿ ಸುತ್ತಮುತ್ತಲಿನ ವಾತಾವರಣವು ತಂಪಾಗಿದ್ದರೂ ಸಹ, ಪವಿತ್ರ ದೇವತೆಯ ವಿಗ್ರಹವು 110 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನವನ್ನು ಹೊಂದಿದೆ. ಪ್ರತಿದಿನ ಬೆಳಿಗ್ಗೆ, ಅಭಿಷೇಕ ಎಂದು ಕರೆಯಲ್ಪಡುವ ಪವಿತ್ರ ಸ್ನಾನದ ನಂತರ, ಬಾಲಾಜಿಯ ವಿಗ್ರಹದ ಮೇಲೆ ಬೆವರಿನ ಹನಿಗಳು ಕಾಣಿಸಿಕೊಳ್ಳುತ್ತವೆ, ಅದನ್ನು ಪುರೋಹಿತರು ರೇಷ್ಮೆ ಬಟ್ಟೆಯಿಂದ ಹೊರೆಸುತ್ತಾರೆ. 

ಇದನ್ನೂ ಓದಿ: Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ

ಈ ವಿಷಯ ನಿಮಗೆ ಅಚ್ಚರಿ ಎನಿಸಿದರು ಸತ್ಯ. ಈ ವೈರಲ್‌ ವಿಡಿಯೋದಲ್ಲಿ ಸಹ ನೀವು ತಿಮ್ಮಪ್ಪನ ವಿಗ್ರಹದಿಂದ ಹನಿಗಳು ಹೊರಬರುತ್ತಿರುವುದನ್ನು ಕಾಣಬಹುದು. ಕೆಲವರು ಇದನ್ನು ತಿರುಪತಿ ತಿಮ್ಮಪ್ಪನ ಕಣ್ಣೀರು ಎಂದರೆ ಇನ್ನೂ ಕೆಲವರು ಇಸು ಕಣ್ಣೀರಲ್ಲ ತಿರುಪತಿ ತಿಮ್ಮಪ್ಪ ಬೆವರುತ್ತಿರುವ ದೃಶ್ಯ ಎನ್ನುತ್ತಾರೆ. ಎಷ್ಟೇ ವಾದ ವಿವಾದಗಳು ನಡೆದರು ಸಹ. ಬಾಲಾಜಿ ವಿಗ್ರಹದ ಹಿಂದಿನ ಆ ಹನಿ ಹನಿ ನೀರಿನ ಹಿಂದಿನ ನಿಗೂಡತೆಯನ್ನು ಯಾರಿಂದಲ ಪತ್ತೆ ಹಚ್ಚಲು ಸಾದ್ಯವಾಗಲಿಲ್ಲ.
 

ಇದನ್ನೂ ಓದಿ: Viral video: ಅಬ್ಬಬ್ಬಾ..! ಮರದೆತ್ತರೆಕ್ಕೆ ರಸ್ತೆ ಮಧ್ಯೆ ತಲೆ ಎತ್ತಿ ನಿಂತ ಸರ್ಪ..ಗುಂಡಿಗೆ ಗಟ್ಟಿ ಇದರೆ ಮಾತ್ರ ಈ ವಿಡಿಯೋ ನೋಡಿ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News