Tommy Groom With Jelly Bride: ಮನುಷ್ಯರ ಮದುವೆಯನ್ನು ಬಹಳ ವಿಜೃಂಭಣೆಯಿಂದ ಮಾಡುವುದನ್ನು ನೀವು ನೋಡಿರಬೇಕು, ಆದರೆ ಈಗ ಜನರು ಪ್ರಾಣಿಗಳ ಮದುವೆಯನ್ನು ಸಹ ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ಶನಿವಾರದಂದು ಅಲಿಗಢದಲ್ಲಿ ಇಂತಹ ವಿಶಿಷ್ಟ ವಿವಾಹ ನಡೆದಿದ್ದು, ಇದರಲ್ಲಿ ಟಾಮಿ ವರ ಮತ್ತು ಜೆಲ್ಲಿ ವಧು. ಇಬ್ಬರೂ ಏಳು ಸುತ್ತು ಹಾಕಿ ಒಬ್ಬರನ್ನೊಬ್ಬರು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ಭೂರಿ ಭೋಜನದ ಔತಣವನ್ನು ಸವಿದರು. ಈ ವಿಶಿಷ್ಟ ಮದುವೆ ಈಗ ಚರ್ಚೆಗೆ ಗ್ರಾಸವಾಗಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಈ ವಿಶಿಷ್ಟ ಮದುವೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ಸುಖವಲಿ ಗ್ರಾಮದ ಮಾಜಿ ಮುಖ್ಯಸ್ಥ ದಿನೇಶ್ ಚೌಧರಿ ಅವರ ಎಂಟು ತಿಂಗಳ ಮುದ್ದಿನ ನಾಯಿ ಟಾಮಿ ವಿವಾಹ ವೈಭವ ಇದಾಗಿದೆ. ಅಟ್ರೌಲಿಯ ಟಿಕ್ರಿ ರಾಯ್‌ಪುರ ನಿವಾಸಿ ಡಾ. ರಾಮ್‌ಪ್ರಕಾಶ್ ಸಿಂಗ್ ಅವರ ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿಯೊಂದಿಗೆ ಟಾಮಿ ಮದುವೆ ನೆರವೇರಿದೆ.  


ಇದನ್ನೂ ಓದಿ : Vastu Tips : ತುಳಸಿಯ ಬಳಿ ಈ ವಸ್ತುಗಳನ್ನು ಇಟ್ಟರೆ ದುರಾದೃಷ್ಟ ಮನೆ ಮಾಡುವುದು.!


ಮಕರ ಸಂಕ್ರಾಂತಿಯ ದಿನವಾದ ಜನವರಿ 14 ರಂದು ಟಾಮಿ ಮತ್ತು ಜೆಲ್ಲಿಯ ವಿವಾಹವನ್ನು ನಿಗದಿಪಡಿಸಲಾಯಿತು. ಇದಾದ ನಂತರ, ಟಿಕ್ರಿ ರಾಯ್‌ಪುರದ ವಧುವಿನ ಕಡೆಯವರು ಶನಿವಾರ ಸುಖ್ರಾವಲಿ ತಲುಪಿದರು. ಜೆಲ್ಲಿ ಕಡೆಯಿಂದ ಬಂದವರು ಟಾಮಿಗೆ ತಿಲಕವನ್ನು ಹಚ್ಚಿದರು. ಅದರ ನಂತರ ಟಾಮಿ ಮತ್ತು ಜೆಲ್ಲಿಯ ವಿವಾಹದ ಸಿದ್ಧತೆಗಳು ಪ್ರಾರಂಭವಾದವು.


ಮಧ್ಯಾಹ್ನ ಟಾಮಿಗೆ ಹೂವಿನ ಹಾರ ಹಾಕಿ ಮದುಮಗನನ್ನಾಗಿ ಮಾಡಲಾಯಿತು. ಡೊಳ್ಳು ಬಾರಿಸುವುದರ ನಡುವೆ ಟಾಮಿಯ ಮೆರವಣಿಗೆ ಸಾಗಿತು. ಮದುಮಗ ಟಾಮಿ ಮುಂದೆ ನಡೆಯುತ್ತಿದ್ದರೆ, ಹಿಂದೆ ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ನೃತ್ಯ ಮಾಡಿದರು. ಮೆರವಣಿಗೆಯು ಮದುವೆಯ ಸ್ಥಳವನ್ನು ತಲುಪಿತು. ನಂತರ ಟಾಮಿ ಮತ್ತು ಜೆಲ್ಲಿ ಅವರ ಕೊರಳಿಗೆ ಹಾರ ಬದಲಿಸಿದರು.


ಇದನ್ನೂ ಓದಿ : Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!


ಇದಾದ ನಂತರ ಇಬ್ಬರಿಗೂ ದೇಸಿ ತುಪ್ಪದಿಂದ ಮಾಡಿದ ಖಾದ್ಯಗಳನ್ನು ಬಡಿಸಿದರು, ಇಬ್ಬರೂ ಸವಿದರು. ವಧು-ವರರಾದ ಎರಡೂ ನಾಯಿಗಳು ಏಳು ಸುತ್ತು ಹಾಕಿ ಸಪ್ತಪದಿ ತುಳಿದರು. ಮಹಿಳೆಯರು ಹಾಡು ಹಾಡಿದರು. ಬಳಿಕ ಬೀಳ್ಕೊಡುಗೆ ಸಮಾರಂಭ ನೆರವೇರಿತು. ಎರಡೂ ಕಡೆಯ ಜನರು ಈ ಮದುವೆಯಲ್ಲಿ ಬಹಳ ಸಂತೋಷದಿಂದ ಕಾಣುತ್ತಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.