Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!

Kranti New Song : ಕ್ರಾಂತಿಯ ಮೂರು ಹಾಡುಗಳನ್ನು ಬಿಡುಗಡೆ ಮಾಡಿರುವ ದರ್ಶನ್ ಈಗ ನಾಲ್ಕನೇ ಹಾಡನ್ನು ತುಮಕೂರಿನಲ್ಲಿ ಜನವರಿ 14 ರಂದು ಬಿಡುಗಡೆ ಮಾಡಿದ್ದಾರೆ. ಕ್ರಾಂತಿಯ ಈ ಹಾಡು ಫುಲ್‌ ಮಾಸ್‌ ಆಗಿದೆ. ತುಮಕೂರಿನ ಬಿಎಚ್‌ ರಸ್ತೆ, ಶಿವಕುಮಾರ ಸ್ವಾಮಿ ವೃತ್ತದಲ್ಲಿ ಡೋಂಟ್ ಮೆಸ್ ವಿತ್ ಹಿಮ್ ಹಾಡು ಬಿಡುಗಡೆ ಮಾಡಲಾಯಿತು.  

Written by - Chetana Devarmani | Last Updated : Jan 15, 2023, 04:59 PM IST
  • 'ಕ್ರಾಂತಿ'ಯ ನಾಲ್ಕನೇ ಹಾಡು ರಿಲೀಸ್‌
  • ಡೋಂಟ್ ಮೆಸ್ ವಿತ್ ಹಿಮ್.. ಸಾಂಗ್‌ ಬಿಡುಗಡೆ
  • 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!
Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ! title=

Kranti New Song : ಕ್ರಾಂತಿಯ ಮೂರು ಹಾಡುಗಳನ್ನು ಬಿಡುಗಡೆ ಮಾಡಿರುವ ದರ್ಶನ್ ಈಗ ನಾಲ್ಕನೇ ಹಾಡನ್ನು ತುಮಕೂರಿನಲ್ಲಿ ಜನವರಿ 14 ರಂದು ಬಿಡುಗಡೆ ಮಾಡಿದ್ದಾರೆ. ಕ್ರಾಂತಿಯ ಈ ಹಾಡು ಫುಲ್‌ ಮಾಸ್‌ ಆಗಿದೆ. ತುಮಕೂರಿನ ಬಿಎಚ್‌ ರಸ್ತೆ, ಶಿವಕುಮಾರ ಸ್ವಾಮಿ ವೃತ್ತದಲ್ಲಿ ಡೋಂಟ್ ಮೆಸ್ ವಿತ್ ಹಿಮ್ ಹಾಡು ಬಿಡುಗಡೆ ಮಾಡಲಾಯಿತು. ಜೊತೆಗೆ ಡೀ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಈ ಸಾಂಗ್‌ ರಿಲೀಸ್‌ ಆಗಿದ್ದು, ಸಖತ್‌ ಕ್ರೇಜ್‌ ಕ್ರಿಯೇಟ್‌ ಮಾಡಿದೆ. 

ಇದನ್ನೂ ಓದಿ : Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ

ಡೋಂಟ್ ಮೆಸ್ ವಿತ್ ಹಿಮ್ ಸಾಂಗ್‌ ಮಾಸ್ ಹಾಡಾಗಿದೆ. ಡಿಬಾಸ್‌ ಅಭಿಮಾನಿಗಳು ಈ ಹಾಡಿಗೆ ಫುಲ್‌ ಫಿದಾ ಆಗಿದ್ದಾರೆ. ಅದರಲ್ಲೂ ದರ್ಶನ್‌ ಅವರ ರಗಡ್ ಲುಕ್‌ಗೆ ಅಭಿಮಾಣಿಗಳ ದಿಲ್‌ ಖುಷ್‌ ಆಗಿದೆ. ಈ ಹಾಡನ್ನು ಚೇತನ್ ಕುಮಾರ್ ಬರೆದ್ದು, ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದದಾರೆ. ಟಿಪ್ಪು, ರಂಜಿತ್ ಹಾಗೂ ಅನಿರುದ್ಧ್ ಶಾಸ್ತ್ರಿ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. 

ಈಗಾಗಲೇ ಧರಣಿ, ಪುಷ್ಪವತಿ, ಬೊಂಬೆ ಹಾಡು ಬಿಡುಗಡೆಯಾಗಿ ಸದ್ದು ಮಾಡಿದ್ದು, ಇದೀಗ ಡೋಂಟ್ ಮೆಸ್ ವಿತ್ ಹಿಮ್ ಹಾಡು ಕೂಡ ಫ್ಯಾನ್ಸ್‌ಗಳ ಕ್ರೇಜ್‌ ಹೆಚ್ಚಿಸಿದೆ. ಶಿಕ್ಷಣ ವ್ಯವಸ್ಥೆಯ ಕುರಿತಾದ ಕತೆ ಹೇಳುವ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ರವಿಚಂದ್ರನ್ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ. 

ಇದನ್ನೂ ಓದಿ : Samantha : ಮನಸ್ಸಿನ ಎಲ್ಲಾ ಭಾವನೆಗಳಿಂದ ದೂರ.. ಸಮಂತಾ ಹೀಗೆ ಹೇಳಿದ್ದೇಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News