Viral Video: ಸರ್ಕಾರಿ ಆಸ್ಪತ್ರೆಯಲ್ಲಿ ಕತ್ತೆ ಪ್ರತ್ಯಕ್ಷ, ಬಿದ್ದು ಬಿದ್ದು ನಕ್ಕ ರೋಗಿಗಳು..!
ಇಲ್ಲಿನ ಸರ್ಕಾರಿ ಆಸ್ಪತ್ರೆಯ ನಿರ್ವಹಣೆ ಸರಿ ಇಲ್ಲದ ಕಾರಣ ಹಂದಿ, ನಾಯಿ ಆಸ್ಪತ್ರೆಗೆ ಬರುವುದು ಸಾಮಾನ್ಯವಾಗಿತ್ತು. ಆದ್ರೆ ಈ ಬಾರಿ ಕತ್ತೆ ರಾಜಾರೋಷವಾಗಿ ಆಸ್ಪತ್ರೆಯೊಳಗೆ ಬಂದಿದೆ.
ರಾಯಚೂರು: ಸರ್ಕಾರಿ ಆಸ್ಪತ್ರೆಯಲ್ಲಿ ಕತ್ತೆ ಪ್ರತ್ಯಕ್ಷವಾಗಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿರುವ ಘಟನೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಆಸ್ಪತ್ರೆಗೆ ಕತ್ತೆ ಪ್ರವೇಶ ಮಾಡಿದೆ. ಸಾರ್ವಜನಿಕರು ಆಸ್ಪತ್ರೆಗೆ ಬರುವ ರೀತಿಯಲ್ಲಿಯೇ ಕತ್ತೆ ಕೂಡ ಎಂಟ್ರಿ ಕೊಟ್ಟಿದ್ದು, ಅಲ್ಲಿದ್ದ ಸಾರ್ವಜನಿಕರು ಮತ್ತು ರೋಗಿಗಳು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ.
ಇದನ್ನೂ ಓದಿ: ಶಿಂಷಾ ಮಾರಮ್ಮನಿಗೆ ಇಂಗ್ಲೀಷ್ ನಲ್ಲಿ ಪತ್ರ: ಬಗೆ ಬಗೆಯ ಬೇಡಿಕೆಗಳು, ಹರಕೆಗಳು!!
ಇಲ್ಲಿನ ಸರ್ಕಾರಿ ಆಸ್ಪತ್ರೆಯ ನಿರ್ವಹಣೆ ಸರಿ ಇಲ್ಲದ ಕಾರಣ ಹಂದಿ, ನಾಯಿ ಆಸ್ಪತ್ರೆಗೆ ಬರುವುದು ಸಾಮಾನ್ಯವಾಗಿತ್ತು. ಆದ್ರೆ ಈ ಬಾರಿ ಕತ್ತೆ ರಾಜಾರೋಷವಾಗಿ ಆಸ್ಪತ್ರೆಯೊಳಗೆ ಬಂದಿದೆ. ಜನರು ಮತ್ತು ರೋಗಿಗಳು ಇದ್ದರೂ ಯಾವುದೇ ರೀತಿ ಭಯಪಡದ ಕತ್ತೆ ಆಸ್ಪತ್ರೆಯ ಆವರಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರೌಂಡ್ಸ್ ಹಾಕಿದೆ.
ಕತ್ತೆ ನುಗ್ಗಿದ್ದರೂ ಅದನ್ನು ಹೊರಗೆ ಓಡಿಸಲು ಸಿಬ್ಬಂದಿಯೇ ಇಲ್ಲದಿರುವುದು ಸರ್ಕಾರಿ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಎಲ್ಲರಲ್ಲೂ ಪ್ರಶ್ನೆ ಮೂಡುವಂತೆ ಮಾಡಿದೆ. ಈ ತಾಲೂಕು ಆಸ್ಪತ್ರೆಗೆ ದಿನಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಈ ಹಿಂದಿನಿಂದಲೂ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಆದರೂ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ: Baby Olekar : ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ PSI ಬೇಬಿ : ACB ಬಲೆಗೆ ಬಿದ್ದು ವಿಲ ವಿಲ!
ಸರ್ಕಾರಿ ಆಸ್ಪತ್ರೆಯಲ್ಲಿ ಕತ್ತೆ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ. ಆಸ್ಪತ್ರೆಗೆ ಬಂದು ಕತ್ತೆ ರೌಂಡ್ಸ್ ಹಾಕಿದೆ. ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ರೋಗಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ