ಶಿಂಷಾ ಮಾರಮ್ಮನಿಗೆ ಇಂಗ್ಲೀಷ್ ನಲ್ಲಿ ಪತ್ರ: ಬಗೆ ಬಗೆಯ ಬೇಡಿಕೆಗಳು, ಹರಕೆಗಳು!!

ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯಗಳಲ್ಲಿ  ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಈ ವೇಳೆ ಶಿಂಷಾ ಮಾರಮ್ಮನಿಗೆ ಭಕ್ತರು ಬಗೆಬಗೆಯ ಬೇಡಿಕೆ ಪತ್ರ ಬರೆದಿದ್ದಾರೆ.

Written by - Zee Kannada News Desk | Last Updated : Jul 7, 2022, 08:03 PM IST
  • ಇನ್ನೂ, ಕೆಲವು ಪತ್ರಗಳಲ್ಲಿ ಉದ್ದದ ಪಟ್ಟಿಯನ್ನೇ ಭಕ್ತರು ದೇವಿಗೆ ಅರ್ಪಿಸಿದ್ದಾರೆ.
  • ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು ಎಂದು ಹರಕೆ ಕಟ್ಟಿಕೊಂಡಿರುವುದನ್ನು ಕಂಡು ಸಿಬ್ಬಂದಿಯೇ ಹೌಹಾರಿದ್ದಾರೆ.
ಶಿಂಷಾ ಮಾರಮ್ಮನಿಗೆ ಇಂಗ್ಲೀಷ್ ನಲ್ಲಿ ಪತ್ರ: ಬಗೆ ಬಗೆಯ ಬೇಡಿಕೆಗಳು, ಹರಕೆಗಳು!! title=

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯಗಳಲ್ಲಿ  ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಈ ವೇಳೆ ಶಿಂಷಾ ಮಾರಮ್ಮನಿಗೆ ಭಕ್ತರು ಬಗೆಬಗೆಯ ಬೇಡಿಕೆ ಪತ್ರ ಬರೆದಿದ್ದಾರೆ.

ಹುಂಡಿ ಎಣಿಕೆ ವೇಳೆ ಮಹಿಳೆಯರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದು ಕೆಲವು, ಪತ್ರಗಳು ಓದಲು ಅರ್ಥವಾದರೆ ಕೆಲವು ಪತ್ರಗಳು ಅಸ್ಪಷ್ಟವಾಗಿದೆ.ಇನ್ನೂ, ಕೆಲವು ಪತ್ರಗಳಲ್ಲಿ ಉದ್ದದ ಪಟ್ಟಿಯನ್ನೇ ಭಕ್ತರು ದೇವಿಗೆ ಅರ್ಪಿಸಿದ್ದಾರೆ.

ಇದನ್ನೂ ಓದಿ : Railway Recruitment 2022 : SSLC ಪಾಸಾದವರಿಗೆ ಸಿಹಿ ಸುದ್ದಿ : ರೈಲ್ವೆಯಲ್ಲಿ 1600 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ!

ಭಕ್ತೆಯೊಬ್ಬರು ತಮ್ಮ ಪತ್ರದಲ್ಲಿ " ತಾಯಿ ನನ್ನವ್ವ ನನ್ನಿಂದ ಹಣ ಪಡೆದವರಿಂದ ಹಣ ಕೊಡಿಸು ಎಂದು ಸಾಲಗಾರರ ಹೆಸರು ಬರೆದು ತಿಂಗಳಲ್ಲಿ ಅವರು ನನಗೆ ಹಣ ಹಿಂತಿರುಗಿಸುವಂತೆ ಬುದ್ಧಿ ಕೊಡು ಎಂದು ಹರಕೆ ಕಟ್ಟಿಕೊಂಡಿದ್ದಾರೆ.ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು ಎಂದು ಹರಕೆ ಕಟ್ಟಿಕೊಂಡಿರುವುದನ್ನು ಕಂಡು ಸಿಬ್ಬಂದಿಯೇ ಹೌಹಾರಿದ್ದಾರೆ.ಇನ್ನು, ಮತ್ತೋರ್ವ ಮಹಿಳೆ ತನ್ನ ಗಂಡ ತನ್ನೊಟ್ಟಿಗೆ ಇರುವಂತೆ ಮಾಡು, ಆಶಾ ಜೊತೆ ಸಂಬಂಧ ಇಲ್ಲದಂತೆ ಮಾಡು, ನಾನು ನನ್ನ ಗಂಡ, ಮಕ್ಕಳು ಚೆನ್ನಾಗಿರಬೇಕು, ನಿನಗೆ ಮರಿಯೊಂದನ್ನು ಬಲಿ ಕೊಡುತ್ತೇನೆ ಎಂದು ಕೇಳಿಕೊಂಡಿದ್ದಾರೆ.No description available.

ಇದನ್ನೂ ಓದಿ : IB Recruitment 2022 : ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳಿಗೆ ಅರ್ಜಿ : ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ!

ಇನ್ನೊಬ್ಬರು ಭಕ್ತರು ತನಗೆ ಇನ್ನೂ 20 ವರ್ಷ ಹೆಚ್ಚಿನ ಆಯಸ್ಸು ಕೊಡು, ಅಂಗನವಾಡಿ ಕೆಲಸ ಖಾಯಂ ಮಾಡು ಎಂದು ಕೇಳಿಕೊಂಡಿದ್ದು ಮತ್ತೊಬ್ಬರು ಇಂಗ್ಲಿಷ್ ನಲ್ಲಿ ತಮ್ಮ ಮನೆಮಂದಿಯ ಎಲ್ಲರ ವಿವಿಧ ಆಕಾಂಕ್ಷೆಗಳನ್ನು ಪಟ್ಟಿ ಮಾಡಿ ಹುಂಡಿಗೆ ಹಾಕಿದ್ದಾರೆ.‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News