Lion Crocodile Viral Video : ಸಿಂಹಗಳ ಗುಂಪೊಂದು ಮೊಸಳೆಯ ಮೇಲೆ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಹಲವರು ಅಚ್ಚರಿಗೊಂಡಿದ್ದಾರೆ. ಈ ಕ್ಲಿಪ್ ಅನ್ನು ಯೂಟ್ಯೂಬ್ ಚಾನೆಲ್ ಲೇಟೆಸ್ಟ್ ಸೈಟಿಂಗ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ದೃಶ್ಯವು ಜಾಂಬಿಯಾದ ಕಾಫ್ಯೂ ರಾಷ್ಟ್ರೀಯ ಉದ್ಯಾನವನದೊಳಗಿನ ಬುಸಂಗಾ ಬಯಲಿನದ್ದಾಗಿದೆ. ಅಲ್ಲಿ ಪ್ರವಾಸಿ ಗೈಡ್ ನ್ಯೂಟನ್ ಮುಲೆಂಗಾ ಕ್ಯಾಮೆರಾದಲ್ಲಿ ಈ ವಿಸ್ಮಯಕಾರಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಂದು  ಮೊಸಳೆಯನ್ನು ಕೊಲ್ಲಲು ಸುಮಾರು ಒಂದು ಡಜನ್ ಸಿಂಹಗಳು ಒಂದಾಗಿರುವುದನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಸಿಂಹಗಳ ಬಾಯಿಗೆ ಬಿದ್ದ ಮೊಸಳೆ :
ಇತ್ತೀಚಿನ ದೃಶ್ಯಗಳ ಪ್ರಕಾರ, "ಕಾಫ್ಯೂ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಬುಸಂಗಾ ಬಯಲು ಒಂದು ವಿಶಿಷ್ಟವಾದ ಪರಿಸರ ವ್ಯವಸ್ಥೆಯಾಗಿದೆ. ಮಳೆಗಾಲದಲ್ಲಿ ಪ್ರವಾಹಕ್ಕೆ ಒಳಗಾಗುವ ಈ ಪ್ರದೇಶವು ವನ್ಯಜೀವಿ ಚಟುವಟಿಕೆಯ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ನಾನಾ ರೀತಿಯ ಅಪರೂಪದ ವನ್ಯಜೀವಿಗಳು ಕಂಡು ಬರುತ್ತವೆ. ಪ್ರಕೃತಿ ಪ್ರಿಯರಿಗೆ ಇಲ್ಲಿ ಅಪರೂಪದ ತಳಿಯ ವಿವಿಧ ಮೃಗಗಳನ್ನು ನೋಡುವ ಅವಕಾಶ ಸಿಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಿಂಹಗಳ ಗುಂಪು ಮತ್ತು ಮೊಸಳೆ ಕಂಡುಬರುತ್ತದೆ. ಸಿಂಹಗಳ ಬಾಯಿಯಿಂದ ತಪ್ಪಿಸಲು ಮೊಸಳೆ ಪ್ರಯತ್ನಿಸುತ್ತದೆಯಾದರೂ ಕೊನೆಗೆ ತನ್ನ ಪ್ರಯತ್ನದಲ್ಲಿ ವಿಫಲವಾಗುತ್ತದೆ. 


ಇದನ್ನೂ ಓದಿ : ನೊಗ, ಉಳುಮೆ ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್...


ಇಲ್ಲಿದೆ ವಿಡಿಯೋ : 


ನ್ಯೂಯಾರ್ಕ್ ಟೈಮ್ಸ್ ಸ್ಕ್ವೇಯರ್ ನಲ್ಲಿ 'ಹರೇ ಕೃಷ್ಣ, ಹರೇ ರಾಮಾ' ನೃತ್ಯಕ್ಕೆ ಸ್ಪೈಡರ್ ಮ್ಯಾನ್ ಎಂಟ್ರಿ... ವಿಡಿಯೋ ನೋಡಿ


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ  : 
ಈ ಪೋಸ್ಟ್ ಅನ್ನು ಕೆಲವೇ ದಿನಗಳ ಹಿಂದೆ ಶೇರ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ ಇದನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಬಹಳಷ್ಟು ಮಂದಿ ಲೈಕ್‌ ಮಾಡಿದ್ದು, ಹಲವು ಕಾಮೆಂಟ್‌ಗಳು ಕೂಡಾ ಬಂದಿವೆ. "ಮೊಸಳೆಗಳನ್ನು  ದಾಳಿ ಮಾಡುವುದು ಬಹಳ ಅಪರೂಪ. ಅವು ಹಸಿವಿನಿಂದ ಸಾಯುತ್ತಿರಬೇಕು" ಎಂದು ಒಬ್ಬರು ಬರೆದಿದ್ದಾರೆ.  ಇದು ಎಷ್ಟು ಅಪರೂಪ ಎಂದು ಪದಗಳು ವಿವರಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. "ವಾವ್, ಅಪರೂಪದ ನಂಬಲಾಗದ ದೃಶ್ಯ ಎಂದು ಮತ್ತೊಬ್ಬರು ವಿವರಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ