Mohammed Shami : ಭಾರತದ ಎರಡು ಪ್ರಮುಖ ಪೊಲೀಸ್ ಪಡೆಗಳಾದ ದೆಹಲಿ ಪೊಲೀಸ್ ಮತ್ತು ಮುಂಬೈ ಪೊಲೀಸರು ಪರಸ್ಪರ ಟ್ವೀಟ್‌ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆ ಟ್ವೀಟ್ ನಲ್ಲಿರುವ ವಿಷಯ ಮಹಮ್ಮದ್ ಶಮಿ. ಶಮಿಯ ವಿರುದ್ದ ಯಾವುದೇ ಪ್ರಕರಣ ದಾಖಲಿಸದಂತೆ ಟ್ವೀಟ್ ನಲ್ಲಿ ದೆಹಲಿ ಪೊಲೀಸರು ಮುಂಬೈ ಪೊಲೀಸರನ್ನ ಕೋರಿದ್ದಾರೆ. ದೆಹಲಿ ಪೋಲೀಸ್ ಟ್ವೀಟ್ ಗೆ ಮುಂಬೈ ಪೊಲೀಸರೂ ಕೂಡಾ ಟ್ವೀಟ್ ನಲ್ಲೇ ಉತ್ತರಿಸಿದ್ದಾರೆ. ಇಷ್ಟಕ್ಕೂ ದೆಹಲಿ ಪೊಲೀಸರು ಇಲ್ಲಿ ಹೇಳಿರುವುದು ಯಾವ ಪ್ರಕರಣದ ಬಗ್ಗೆ ನೋಡೋಣ.
ದೆಹಲಿ ಪೊಲೀಸರ ಟ್ವೀಟ್ :
ರಾತ್ರಿಯ ದಾಳಿ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಶಮಿ ವಿರುದ್ದ ಯಾವುದೇ ಪ್ರಕರಣವನ್ನು ದಾಖಲಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ಟ್ವೀಟ್ ಮಾಡಿದ್ದಾರೆ. ನಿನ್ನೆಯ ಸೆಮಿ ಫೈನಲ್ ಪಂದ್ಯದಲ್ಲಿನ ಶಮಿಯ ಮಾರಕ ದಾಳಿಯನ್ನು ಉದೇಶಿಸಿ ಈ ಟ್ವೀಟ್ ಮಾಡಲಾಗಿತ್ತು. ಅಸಲಿಗೆ ತಮಾಷೆಯ ರೂಪದಲ್ಲೇ ಈ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಭಾರತದ ಈ ಹಳ್ಳಿಯಲ್ಲಿ ಇಂದಿಗೂ ಮಹಿಳೆಯರು ಬಟ್ಟೆ ಧರಿಸಲ್ಲ..! ಕಾರಣ ಏನ್ ಗೊತ್ತಾ..?
ದೆಹಲಿ-ಮುಂಬೈ ಪೊಲೀಸರ ತಮಾಷೆಯ ಟ್ವೀಟ್ :
ಇದಕ್ಕೆ ಪ್ರತಿಕ್ರಿಯೆಯಾಗಿ ಮುಂಬೈ ಪೊಲೀಸರು ಕೂಡಾ ಟ್ವೀಟ್ ಮಾಡಿದ್ದಾರೆ. ದೆಹಲಿ ಪೊಲೀಸರ ವಿರುದ್ಧ ಅಸಂಖ್ಯಾತ ಹೃದಯಗಳನ್ನು ಕದ್ದಿರುವ ಮತ್ತು ಕೆಲವು ಸಹ-ಆರೋಪಿಗಳ ಪಟ್ಟಿಯನ್ನು ಮಾಡುವ ಗಂಭೀರ ಆರೋಪಗಳನ್ನು ಮಾಡುವುದನ್ನು ತಪ್ಪಿಸಿದ್ದೀರಿ ಎಂದು ಬರೆದಿದ್ದಾರೆ. ಇದರೊಂದಿಗೆ ಮುಂಬೈ ಪೊಲೀಸರು ತಮ್ಮ ಟ್ವೀಟ್‌ನಲ್ಲಿ ಪಿಎಸ್ ಅನ್ನು ಕೂಡಾ ಸೇರಿಸಿದ್ದಾರೆ, "ಆತ್ಮೀಯ ನಾಗರಿಕರೇ, ಎರಡೂ ಇಲಾಖೆಗಳು ಐಪಿಸಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ. ಈ ಟ್ವೀಟ್ ಕೇವಲ ಹಾಸ್ಯಕ್ಕಾಗಿ ಎನ್ನುವುದನ್ನು ಮನದಟ್ಟು ಮಾಡಿದೆ.
You missed pressing charges of stealing innumerable hearts @DelhiPolice and listing a couple of co-accused too😂
P.S.: Dear citizens, both the departments know the IPC thoroughly and trust you for a great sense of humour 😊 https://t.co/TDnqHuvTZj
— मुंबई पोलीस - Mumbai Police (@MumbaiPolice) November 15, 2023
ಇಂಟರ್ನೆಟ್‌ನಲ್ಲಿ ವೈರಲ್ ಆಯಿತು ಟ್ವೀಟ್ :
ಎರಡು ಪೊಲೀಸ್ ಪಡೆಗಳ ನಡುವಿನ ಈ ತಮಾಷೆಯ ಟ್ವೀಟ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಜನರು ಕೂಡಾ ಅದನ್ನು ತುಂಬಾ ಆನಂದಿಸಿದ್ದಾರೆ. ಈ ಟ್ವೀಟ್‌ಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಎರಡು ಪೊಲೀಸ್ ಪಡೆಗಳ ನಡುವೆ ಉತ್ತಮ ಸಂಬಂಧವಿದೆ ಎಂಬುದನ್ನು ಈ ಟ್ವೀಟ್ ತೋರಿಸುತ್ತದೆ ಎಂದು ಕೆಲವರು ಬರೆದಿದ್ದರೆ, ಅನೇಕ ಮಂದಿ ಈ ಟ್ವೀಟ್ ನಂತರ, ಜನರು ಎರಡೂ ಪೊಲೀಸ್ ಪಡೆಗಳನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ವಿವಾಹದಲ್ಲಿ ಸ್ಟೈಲ್ ಹೊಡೆಯಲು ಹೋದ ವಧು, ನಂತರ ನಡೆದ ಹಠಾತ್ ಘಟನೆಯಲ್ಲಿ ..... ವಿಡಿಯೋ ನೋಡಿ!
ಈ ಎರಡೂ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ, ಮೊಹಮ್ಮದ್ ಶಮಿ 57 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಬಳಿಸಿ, ಭಾರತ 70 ರನ್‌ಗಳಿಂದ ಜಯಗಳಿಸುವಂತೆ ಮಾಡಿದರು. ಶಮಿ ಅವರ 7/57 ODI ಪಂದ್ಯದಲ್ಲಿ ಭಾರತೀಯ ಬೌಲರ್‌ನ ಅತ್ಯುತ್ತಮ ಬೌಲಿಂಗ್ ಅಂಕಿಅಂಶವಾಗಿದೆ.'
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ