ಬಿಹಾರ : ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಅತಿ ಮುಖ್ಯವಾದ ಘಟ್ಟ. ಈ ದಿನಕ್ಕಾಗಿ ವಧು ವರ ಕಾತುರದಿಂದ ಕಾಯುತ್ತಿರುತ್ತಾರೆ. ಅಲ್ಲದೆ ಮನೆ ಮಂದಿ ಕೂಡಾ ಮದುವೆ ದಿನ ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತಾರೆ. ಯಾಕೆಂದರೆ ಮದುವೆ ದಿನ ಆಗುವ ಒಂದು ಸಣ್ಣ ತಪ್ಪು ಕೂಡಾ ಆ ದಿನದ ಸಂಭ್ರಮವನ್ನೇ ಹಾಳು ಮಾಡಿ ಬಿಡಬಹುದು. ಆದರೂ ಕೆಲವೊಮ್ಮೆ ಇಂಥಹ ಘಟನೆಗಳು ನಡೆದೇ ಹೋಗುತ್ತದೆ. 


COMMERCIAL BREAK
SCROLL TO CONTINUE READING

ಕುಡಿದು ತೂರಾಡಿಕೊಂಡು ಬಂದ ವರ : 
ಈ ವರನಿಗೆ ನೇರ ನಿಂತುಕೊಳ್ಳುವುದಕ್ಕೂ ಆಗುತ್ತಿಲ್ಲ. ವೇದಿಕೆ ಮೇಲೆ ಹಾರ ಬದಲಾಯಿಸುವ ಸಲುವಾಗಿ ನಿಂತಿರುವ ವರನನ್ನು ಪಕ್ಕದಲ್ಲಿರುವ ವ್ಯಕ್ತಿ ಸಂಭಾಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವೇದಿಕೆ ಮೇಲೆ ನಿಂತಿರುವ ವರ ಈಗ ಬೀಳುತ್ತಾನೋ ಆಗ ಬೀಳುತ್ತಾನೋ ಎನ್ನುವ ಹಾಗೆ ಸ್ಥಿಮಿತವೇ ಇಲ್ಲದಂತೆ ಕಾಣುತ್ತಾನೆ.  ಅದರ ಮಧ್ಯೆಯೇ ಮದುವೆಯ ಶಾಸ್ತ್ರಗಳನ್ನು ನಡೆಸುವುದನ್ನು ಕಾಣಬಹುದು. 


ಇದನ್ನೂ ಓದಿ  : Video: ಆಕಾಶದೆತ್ತರಕ್ಕೆ ಹಾರಿ ಸೋಜಿಗ ಹುಟ್ಟಿಸಿದ ನವಿಲು


ಕುಡಿದು ನಿಲ್ಲುವುದಕ್ಕೂ ಆಗದ ವರನಿಗೆ ವಧುವೇನೋ ಹಾರ ಹಾಕುತ್ತಾಳೆ. ಆದರೆ ಸ್ಥಿಮಿತ ಕಳೆದುಕೊಂಡಿರುವ ಈ ವರ ಮಹಾಶಯನಿಗೆ ವಧು ಯಾರು? ನಾದಿನಿ ಯಾರು ಎನ್ನುವುದು ಕಾಣಿಸಬೇಕಲ್ಲ. ಆರತಿ ಬೆಳಗಲು ವೇದಿಕೆಗೆ ಬಂದಿರುವ ನಾದಿನಿಯ ಕೊರಳಿಗೆಯೇ ಹಾರ ಹಾಕಿ ಬಿಡುತ್ತಾನೆ. ಇಷ್ಟಾಗುತ್ತಿದ್ದಂತೆಯೇ ಕೆಂಡಾ ಮಂಡಲವಾದ ನಾದಿನಿ, ವರನಿಗೆ ಮನಸೋ ಇಚ್ಛೆ ಬಾರಿಸಿ ಬಿಡುತ್ತಾಳೆ. ಅಲ್ಲದೆ ಈ ಕೂಡಲೇ ಹಾರ ವಾಪಸ್ ತೆಗೆಯುವಂತೆ ಗದರುವುದನ್ನು ಕೂಡಾ  ವಿಡಿಯೋದಲ್ಲಿ ನೋಡಬಹುದು. 


Video : ಕಾರಿಗೆ ಡಿಕ್ಕಿಯಾದ ಚಿರತೆ ಸತ್ತು ಹೋಯಿತು ಎಂದು ಕೊಳ್ಳುವಷ್ಟರಲ್ಲಿ ನಡೆದದ್ದು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.