ಬೆಂಗಳೂರು : ವಿಶ್ರಾಂತಿಯ ಸಮಯದಲ್ಲಿ ಮೊಬೈಲ್ ಕೈಗೆತ್ತಿಕೊಂಡರೆ ಸಾಮಾಜಿಕ ಮಾಧ್ಯಮದಲ್ಲಿ ನಾನಾ ರೀತಿಯ ವಿಡಿಯೋಗಳು ಕಾಣ ಸಿಗುತ್ತವೆ. ಈ ವಿಡಿಯೋಗಳನ್ನು ನೋಡುತ್ತಾ ಹೋದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಈ ಪೈಕಿ ಕೆಲ ವಿಡಿಯೋಗಳನ್ನು ನೋಡಿದರೆ ಹೀಗೂ ನಡೆಯವುದು ಸಾಧ್ಯನಾ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ಕಣ್ಣನ್ನು ನಂಬುವುದು ನಮಗೇ ಸಾಧ್ಯವಾಗುವುದಿಲ್ಲ.
ಆಕಾಶದಲ್ಲಿ ಕಾರ್ಮೋಡ ತುಂಬಿ ಇನ್ನೇನು ಮಳೆ ಬರುವ ಅನುಭವವಾಗುತ್ತದೆ ಎಂದಾಗ ನವಿಲು ಗರಿ ಬಿಚ್ಚಿ ಕುಣಿದಾಡುತ್ತದೆ. ಹೀಗೆ ನವಿಲು ಗರಿ ಬಿಚ್ಚಿ ಕುಣಿಯುವಾಗ ಅದನ್ನು ನೋಡಲು ಕಣ್ಣುಗಳೆರಡು ಸಾಲದು. ಅದೊಂದು ಈ ಪ್ರಕೃತಿಯ ವೈಶಿಷ್ಟ್ಯ. ಹೌದು ನೀವು ನವಿಲು ಕುಣಿ ದಾಡುವುದನ್ನು ನೋಡಿರಬಹುದು, ತುಸು ಎತ್ತರಕ್ಕೆ ಜಿಗಿಯುವುದನ್ನು ಕೂಡಾ ಗಮನಿಸಿರಬಹುದು. ಆದರೆ ಇತರ ಪಕ್ಷಿಗಳಂತೆ ಆಕಾಶದೆತ್ತರಕ್ಕೆ ಹಾರುವುದನ್ನು ಯಾವತ್ತಾದರೂ ಕಂಡಿರಾ?
ಇದನ್ನೂ ಓದಿ: Viral Video: ಬಾಡಿಗೆ ಕಾರು ಪಡೆದು ಗೋವಾ ಬೀಚ್‌ನಲ್ಲಿ ಮುಳುಗಿಸಿದ ಭೂಪ..!
ಹೌದು, ನವಿಲು ಇತರ ಪಕ್ಷಿಗಳಿಗಿಂತ ಭಾರವಾಗಿರುತ್ತದೆ. ಆದ ಕಾರಣ ಬೇರೆ ಹಕ್ಕಿಗಳಂತೆ ಹಾರುವುದು ನಮ್ಮ ರಾಷ್ಟ್ರ ಪಕ್ಷಿಗೆ ಸಾಧ್ಯವಿಲ್ಲ ಎನ್ನುವುದನ್ನು ನಾವು ಪಾಠಗಳಲ್ಲಿಯೂ ಕಲಿತಿರುವುದು. ಮೊದಲೇ ಹೇಳಿದಂತೆ ಈ ಪ್ರಕೃತಿಯಲ್ಲಿ ಒಮ್ಮೊಮ್ಮೆ ನಾವು ನಂಬಲು ಅಸಾಧ್ಯವಾದ ಘಟನೆಗಳು ನಡೆದು ಹೋಗುತ್ತವೆ. ಈ ವಿಡಿಯೋ ನೋಡಿದಾಗ ನಾವು ತಿಳಿದುಕೊಂಡಿರುವುದು, ಅಂದುಕೊಂಡಿರುವುದು ಸುಳ್ಳಾಗಲೂ ಸಾಧ್ಯ ಎನ್ನುವುದು ಅರಿವಾಗುತ್ತದೆ.
Ever seen a flying peacock? pic.twitter.com/3W3Mafw0DH
— Buitengebieden (@buitengebieden) June 20, 2022
ನವಿಲೊಂದು ಬಲು ದೂರ ಹಾರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವೀಡಿಯೊವನ್ನು Buitengebieden ಎಂಬ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಕೇವಲ 14 ಸೆಕೆಂಡ್‌ಗಳ ವೀಡಿಯೋ ವನ್ನು ಇದುವರೆಗೆ 3.9M ಬಾರಿ ವೀಕ್ಷಿಸಲಾಗಿದೆ.
ಇದನ್ನೂ ಓದಿ : Cat Snake Fight: ಹಾವು-ಬೆಕ್ಕಿನ ಕಾದಾಟ- ಶಾಕಿಂಗ್ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.