Wedding funny video : ಮದುವೆಯಲ್ಲಿ ಮೋಜು-ಮಸ್ತಿ ಸಾಮಾನ್ಯ. ಮದುವೆ ಅಂದ ಮೇಲೆ ಅಲ್ಲಿ ನೂರಾರು ಶಾಸ್ತ್ರ, ಸಂಪ್ರದಾಯ ಇದ್ದೇ ಇರುತ್ತವೆ. ಪ್ರತಿಯೊಂದು ಶಾಸ್ತ್ರವನ್ನು ಅನುಸರಿಸಬೇಕಾಗುತ್ತದೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಶಾಸ್ತ್ರಗಳು ಕೂಡಾ ಬದಲಾಗುತ್ತವೆ. ಈ  ಪೈಕಿ ಕೆಲವು ಶಾಸ್ತ್ರಗಳು ಬಹಳ ಮಜವಾಗಿರುತ್ತವೆ. ಇನ್ನು ಕೆಲವು ಶಾಸ್ತ್ರಗಳನ್ನು ನೋಡಿದರೆ ಇಂಥ ಶಾಸ್ತ್ರಗಳೂ ಇವೆಯಾ ಎಂದು ಅನ್ನಿಸುತ್ತದೆ. ಇಲ್ಲಿ ನಾವು ಹೇಳುತ್ತಿರುವುದು ಅಂಥದ್ದೇ ಒಂದು ಶಾಸ್ತ್ರದ ಬಗ್ಗೆ. 


COMMERCIAL BREAK
SCROLL TO CONTINUE READING

ರಸಗುಲ್ಲಾ ತಿನ್ನಿಸುವ ಭರದಲ್ಲಿ ನಡೆಯಿತು ಅಚಾತುರ್ಯ : 
ಈ ಪ್ರದೇಶದಲ್ಲಿ ಮದುವೆ ವೇಳೆ ವರನಿಗೆ ನಾದಿನಿ ರಸಗುಲ್ಲಾ ತಿನ್ನಿಸುವುದು ಸಂಪ್ರದಾಯ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ವರನಿಗೆ ರಸಗುಲ್ಲಾ ತಿನ್ನಿಸುವ ವೇಳೆ , ವರ ಅದನ್ನು ತಿನ್ನದಂತೆ ನಾದಿನಿಯರು ತಡೆಯುತ್ತಾರೆ. ವರ ತಿನ್ನದಂತೆ ನಾದಿನಿಯರು ತಡೆದರೆ ಅವರು ಗೆದ್ದಂತೆ, ಇಲ್ಲವಾದರೆ ವರ ಆಟದ ವಿನ್ನರ್.  ಹೀಗೆ  ತಟ್ಟೆಯಲ್ಲಿ ರಸಗುಲ್ಲಾ ಹಿಡಿದುಕೊಂಡು ನಾದಿನಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೇನು ನಾದಿನಿ ವರನಿಗೆ ರಸಗುಲ್ಲಾ ತಿನ್ನಿಸಬೇಕು ಎನ್ನುವಷ್ಟರಲ್ಲಿ ವರ ನಾದಿನಿಯ ಕೈಯನ್ನು ಹಿಡಿದು ಎಳೆಯುತ್ತಾನೆ. ವರನಿಗೋ ಆಟ ಗೆಲ್ಲುವ ತವಕ. ನಾದಿನಿ ಕೂಡಾ ತಾನೇನು ಕಮ್ಮಿ ಎನ್ನುವಂತೆ ತಡೆಯಲು ಪ್ರಯತ್ನಿಸುತ್ತಾಳೆ. ಈ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ. 


ಇದನ್ನೂ ಓದಿ : Viral Video : ವಿಹಾರಕ್ಕೆಂದು ಬಂದವ ಪ್ರಿಯತಮೆಯ ತಲೆಯ ಹೇನು ಹುಡುಕುತ್ತಾ ಕುಳಿತ


ಇಬ್ಬರ ನಡುವಿನ ಜಗಳದಲ್ಲಿ ರಸಗುಲ್ಲಾ ಮಾತ್ರ ನೆಲದ ಮೇಲೆ ಬೀಳುತ್ತದೆ. ಅದರ ಮಧ್ಯೆ ಒಂದು ಅಚಾತುರ್ಯವೂ ನಡೆದು ಹೋಗುತ್ತದೆ. ಆದರೆ ಅಲ್ಲಿದ್ದವರೆಲ್ಲಾ ಇದನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಾರೆ. ಪಕ್ಕದಲ್ಲಿದ್ದ ವಧುವಿಗೆ ಮಾತ್ರ ಏನು ನಡೆಯುತ್ತಿದೆ ಎನ್ನುವುದು ಒಂದು ಕ್ಷಣಕ್ಕೆ ಅರ್ಥವಾದಂತೆ ಕಾಣುವುದಿಲ್ಲ. 


 


 

 

 

 



 

 

 

 

 

 

 

 

 

 

 

A post shared by Bhutni_ke (@bhutni_ke_memes)


ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆದ ವಿಡಿಯೋ  : 
ಸಾಮಾಜಿಕ ಜಾಲತಾಣಗಳಲ್ಲಿ ಹದರಿದಾದುತ್ತಿರುವ ಈ ವಿಡಿಯೋವನ್ನು ಅನೇಕ ಜನರು ತುಂಬಾ ಇಷ್ಟಪಡುತ್ತಿದ್ದಾರೆ. bhutni_ke_memes ಹೆಸರಿನ ಖಾತೆಯಿಂದ Instagram ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಅನೇಕ ಇತರ ಬಳಕೆದಾರರು ಈ ವೀಡಿಯೊ ಕುರಿತು ತಮ್ಮ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ. 


ಇದನ್ನೂ ಓದಿ : Viral Video: ಇಡೀ ಮನೆಮಂದಿಯ ಊಟವನ್ನು ಒಬ್ಬನೇ ತಿಂದ ಬಾಲಕ, ನಿಬ್ಬೆರಗಾದ ಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.