Viral Video : ಪ್ರೀತಿಸುವ ಜೋಡಿಗಳೆಂದರೆ ಪಾರ್ಕ್ , ಸಿನಿಮಾ ಎಂದು ಸುತ್ತುವುದು ಸಾಮಾನ್ಯ. ಕೆಲ ಕಾಲ ಪ್ರೀತಿಸುವ ಜೀವದ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಹೀಗಾಗಿ ಹೆಚ್ಚಾಗಿ ಪ್ರೇಮಿಗಳು ಆಯ್ಕೆ ಮಾಡುವ ಜಾಗ ಪಾರ್ಕ್. ತಾವು ಪ್ರೀತಿಸುವ ಹುಡುಗ ಅಥವಾ ಹುಡುಗಿಯನ್ನು ನೋಡಬೇಕು, ಮಾತನಾಡಬೇಕು ಎಂಬ ಹಂಬಲ ಆ ಜೋಡಿಗಳಿಗಿರುತ್ತವೆ. ಪಾರ್ಕ್ ನಲ್ಲಿ ಹಾಗೆ ಸುಮ್ಮನೆ ಒಮ್ಮ್ಮೆ ನಮ್ಮ ಸುತ್ತ ಮುತ್ತ ಕಣ್ಣಾಡಿಸಿದರೂ ಅಲ್ಲಿ ಒಂದು ಜೋಡಿಯಾದರೂ ಕಣ್ಣಿಗೆ ಬೀಳುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಇಂಥಹ ಜೋಡಿಯೊಂದರ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಇದೀಗ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.
ನದಿ ದಡದಲ್ಲಿ ಜೋಡಿಯೊಂದು ಕುಳಿತಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತದೆ. ಹುಡುಗಿ ನದಿ ತೀರದ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾಳೆ. ಆದರೆ ಪ್ರಿಯಕರ ಮಾತ್ರ ತನ್ನ ಹುಡುಗಿಯ ತಲೆಯಲ್ಲಿ ಹೇನು ಹುಡುಕುತ್ತಿರುವುದನ್ನು ಕಾಣಬಹುದು. ಹೇನು ಹುಡುಕಿ ಅದನ್ನು ಹೆಕ್ಕಿ ತೋರಿಸುತ್ತಿದ್ದಾನೆ. ಕೆಲವೇ ಸೆಕೆಂಡುಗಳ ಈ ವಿಡಿಯೋವನ್ನು ನೋಡಿ ಎಂಥವರಿಗೂ ನಗು ಬಾರದೇ ಇರದು.
ಇದನ್ನೂ ಓದಿ : Viral Video: ಇಡೀ ಮನೆಮಂದಿಯ ಊಟವನ್ನು ಒಬ್ಬನೇ ತಿಂದ ಬಾಲಕ, ನಿಬ್ಬೆರಗಾದ ಜನ
ಡೇಟಿಂಗ್ ಗೆ ಬಂದ ಪ್ರೇಮಿಗಳು ಈ ರೀತಿ ನದಿ ದಡದಲ್ಲಿ ಕುಳಿತು ಹೇನು ಹುಡುಕುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಪೋಸ್ಟ್ ಆಗುತಿದ್ದಂತೆಯೇ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ :
ಸಾಮಾಜಿಕ ಮಾಧ್ಯಮದ ವಬೇರೆ ಬೇರೆ ಪ್ಲಾಟ್ ಫಾರಂ ಗಳಲ್ಲಿ ಈ ರೀತಿಯ ತಮಾಷೆಯ ವೀಡಿಯೊಗಳು ಕಂಡುಬರುತ್ತಿವೆ. ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಘಂಟಾ ಹೆಸರಿನ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ವೀಡಿಯೋ ನೆಟ್ಟಿಗರು ಕೂಡ ತುಂಬಾ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : Viral Video: ಲಂಬು ವರನ ಕೊರಳಿಗೆ ಹಾರ ಹಾಕಲು ಸಾಧ್ಯವಾಗದೆ ವಧು ಏನು ಮಾಡಿದ್ದಾಳೆ ನೋಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.