Viral Video : ಸ್ಕಿಡ್ ಆಗಿ ಸೈಕಲ್‌ ಮೇಲಿಂದ ರಸ್ತೆಯಲ್ಲಿ ಬಿದ್ದಿದ್ದ ವಯೋವೃದ್ಧ ಸೈಕಲ್‌ ಅನ್ನು ವೇಗವಾಗಿ ಏತ್ತಿಕೊಳ್ಳಲಿಲ್ಲ ಎಂಬ ಸಣ್ಣ ಕಾರಣಕ್ಕೆ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳು ಲಾಠಿಯಿಂದ ಥಳಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.


COMMERCIAL BREAK
SCROLL TO CONTINUE READING

ಸುಮಾರು 70 ವರ್ಷದ ನವಲ್ ಕಿಶೋರ್ ಪಾಂಡೆ ಎಂಬುವವರು 40 ವರ್ಷಗಳಿಂದ ಶಿಕ್ಷಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಕೆಲವು ಮಕ್ಕಳಿಗೆ ಪಾಠ ಹೇಳಿಕೊಟ್ಟು ಮನೆಗೆ ಹೋಗುತ್ತಿದ್ದರು. ರಾಜ್ಯ ರಾಜಧಾನಿ ಪಾಟ್ನಾದಿಂದ 200 ಕಿಮೀ ದೂರದಲ್ಲಿರುವ ಭಭುವಾ ಎಂಬಲ್ಲಿ ಜನನಿಬಿಡ ಪ್ರದೇಶದಲ್ಲಿ ಸೈಕಲ್ ಸ್ಕಿಡ್ ಕೆಳಗೆ ಬಿದ್ದಿದ್ದರು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೇ ಇಬ್ಬರು ಕಾನ್ಸ್‌ಟೇಬಲ್‌ಗಳು ಸ್ಥಳಕ್ಕೆ ಬಂದು ಸೈಕಲ್ ತೆಗೆಯುವಂತೆ ಹೇಳಿದರು. ವಯಸ್ಸಾಗಿದ್ದ ಪಾಂಡೆ ಅವರು ಸೈಕಲ್ ಎತ್ತಲು ಹರಸಾಹಸ ಪಡಬೇಕಾಯಿತು.


Shraddha Walker Murder : 100ಕ್ಕೂ ಹೆಚ್ಚು ಸಾಕ್ಷ್ಯ, 3000 ಪುಟಗಳ ಆರೋಪಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರು


ಇನ್ನು ವೈರಲ್‌ ಆಗಿರುವ ಘಟನೆಯ ವೀಡಿಯೋದಲ್ಲಿ ಇಬ್ಬರು ಕಾನ್ಸ್‌ಟೇಬಲ್‌ಗಳ ಲಾಠಿ ಹೊಡೆತದಿಂದ ವೃದ್ಧ ಶಿಕ್ಷಕ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಯಸ್ಸಾದವರು, ಶಿಕ್ಷಕರು ಅನ್ನೋ ಪರಿಜ್ಞಾನವೂ‌ ಇಲ್ಲದ ಮಹಿಳಾ ಕಾನ್ಸ್‌ಟೇಬಲ್‌ ಆತನಿಗೆ ಹೊಡೆಯುವುದನ್ನು ನೋಡಬಹುದು. ವೃದ್ಧನ ಕೈಗಳ ಮೇಲೆ ಹಲವಾರು ಹೊಡೆತಗಳು ಬೀಳುತ್ತವೆ. ಎಷ್ಟೇ ಮನವಿ ಮಾಡಿರು ಸಹ ಇಬ್ಬರು ಹೊಡೆಯುತ್ತಾ ಅವಾಜ್‌ ಹಾಕುತ್ತಿದ್ದಾರೆ.


ಸ್ಥಳೀಯ ವರದಿಗಳ ಪ್ರಕಾರ ಶ್ರೀ ಪಾಂಡೆ ಅವರು ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಪ್ರತಿದಿನ ಈ ಪ್ರದೇಶದಲ್ಲಿ ಸೈಕಲ್ ಸವಾರಿ ಮಾಡುತ್ತಾರೆ. ಸಧ್ಯ ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಂದು ಬಿಹಾರ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.