OMG: 2100 ರೂ. ಎಣಿಸಲು ಸಾಧ್ಯವಾಗದ ವರ, ಕೋಪಗೊಂಡು ಮದುವೆ ಬೇಡವೆಂದ ವಧು!

ವರನಿಗೆ ಅನಕ್ಷರಸ್ಥ ಎಂದು ಯಾರೋ ವೇದಿಕೆಯ ಮೇಲೆ ಹೇಳಿದಾಗ ಈ ದುರದೃಷ್ಟಕರ ಪ್ರಕರಣ ಮುನ್ನೆಲೆಗೆ ಬಂದಿದೆ. ಇದನ್ನು ಪರಿಶೀಲಿಸಲು ವಧುವಿನ ಕಡೆಯಿಂದ ವರನಿಗೆ 2100 ರೂ. ನೀಡಿ ಎಣಿಸಲು ಕೇಳಲಾಯಿತು. ಆ ನಂತರ ನಡೆದ ಘಟನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಿ.

Written by - Puttaraj K Alur | Last Updated : Jan 22, 2023, 04:32 PM IST
  • ಮದುವೆ ಮನೆಯಲ್ಲಿ 2100 ರೂ. ಎಣಿಸಲು ಸಾಧ್ಯವಾಗದ ವರ
  • ಅನಕ್ಷರಸ್ಥ-ಹೆಬ್ಬೆಟ್ಟಿನ ವ್ಯಕ್ತಿಯನ್ನು ಮದುವೆಯಾಗಲ್ಲವೆಂದ ವಧು
  • ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದ ದುರದೃಷ್ಟಕರ ಘಟನೆ
OMG: 2100 ರೂ. ಎಣಿಸಲು ಸಾಧ್ಯವಾಗದ ವರ, ಕೋಪಗೊಂಡು ಮದುವೆ ಬೇಡವೆಂದ ವಧು! title=
ಮದುವೆಯ ದುರದೃಷ್ಟಕರ ಘಟನೆ

ನವದೆಹಲಿ: ವಿವಾಹದ ವೈರಲ್ ಘಟನೆಗಳಿಗೆ ಸಂಬಂಧಿಸಿದಂತೆ ಇದು ಬಹುಶಃ ಅತ್ಯಂತ ದುರದೃಷ್ಟಕರ ಘಟನೆ. ವರ ಮಾಡಿದ ತಪ್ಪಿಗೆ ಕೋಪಗೊಂಡ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಇದಲ್ಲದೆ ವರನ ಸಮೇತ ಮದುವೆ ಮೆರವಣಿಗೆಯನ್ನೇ ವಾಪಸ್ ಕಳುಹಿಸಿದ್ದಾಳೆ. ತಾನು ಅನಕ್ಷರಸ್ಥ ಮತ್ತು ಹೆಬ್ಬೆಟ್ ವ್ಯಕ್ತಿಯನ್ನು ಮದುವೆಯಾಗುವುದಿಲ್ಲವೆಂದು ವಧು ಸ್ಪಷ್ಟವಾಗಿ ಹೇಳಿದ್ದಾಳೆ. ವಧುವಿನ ಕಡೆಯವರು ವರನಿಗೆ ಎಣಿಸಲು 2,100 ರೂ. ಕೊಟ್ಟಾಗ ಈ ಘಟನೆ ನಡೆದಿದೆ.

ಅನಕ್ಷರಸ್ಥ ವರನನ್ನು ಒಲ್ಲೆ ಎಂದ ವಧು!

ಈ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ ಇದೇ ಪ್ರದೇಶದ ನಿವಾಸಿ ವಧು ಮೈನ್‌ಪುರಿಯ ಯುವಕನೊಂದಿಗೆ ವಿವಾಹವಾಗಲಿದ್ದರು. ಮದುವೆಗೆ ಸಕಲ ಸಿದ್ಧತೆಯೂ ಆಗಿತ್ತು. ಆದರೆ ವರ ಅನಕ್ಷರಸ್ಥ ಎಂದು ವಧುವಿನ ಕುಟುಂಬಕ್ಕೆ ಗೊತ್ತಿರಲಿಲ್ಲ. ಸುಳ್ಳು ಹೇಳಿ ವರನ ಕಡೆಯವರು ಮದುವೆಯನ್ನು ನಿಶ್ಚಿಯಿಸಿದ್ದರು. ಆದರೆ ಇದೇ ಸುಳ್ಳು ನಂತರ ದುಬಾರಿಯಾಗಿದೆ.

ಇದನ್ನೂ ಓದಿ: Weather Update: ಇಂದಿನಿಂದ ಮತ್ತೆ ಏರಲಿದೆ ಚಳಿ ಪ್ರಮಾಣ: ಈ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದ IMD

ಹಣ ಎಣಿಸಲು ಸಾಧ್ಯವಾಗದ ವರ!

ಸಂಜೆ ಮೆರವಣಿಗೆ ಬಂದು ಮದುವೆಯ ವಿಧಿವಿಧಾನಗಳು ಪ್ರಾರಂಭವಾಗಿದ್ದವು. ರಾತ್ರಿ 1 ಗಂಟೆಗೆ ದ್ವಾರಾಚಾರರ ಸಮಾರಾಧನೆಯೂ ಶುರುವಾಯಿತು. ಅಷ್ಟರಲ್ಲಿ ಯಾರೋ ವಧುವಿನ ಅಣ್ಣನ ಬಳಿ ಹೋಗಿ ವರ ಅವಿದ್ಯಾವಂತ, ಅನಕ್ಷರಸ್ಥ ಎಂದು ಹೇಳಿದ್ದಾನೆ. ಈ ವೇಳೆ ವರನಿಗೆ 2,100 ರೂ. ನೀಡಿ ಎಣಿಸುವಂತೆ ವಧುವಿನ ಸಹೋರ ಹೇಳಿದ್ದಾನೆ. ಆದರೆ ಆತನಿಗೆ ಆ ಹಣ ಎಣಿಸಲು ಸಾಧ್ಯವಾಗಿಲ್ಲ.   

ಗಲಾಟೆ ಬಳಿಕ ಮುರಿದುಬಿದ್ದ ಮದುವೆ

ಮೊದಮೊದಲು ಇದು ವರನಿಗೆ ವಿಚಿತ್ರ ಅನಿಸಿತು. ಆದರೆ ವರನಿಗೆ 2100 ರೂ. ಎಣಿಸಲು ಸಾಧ್ಯವಾಗದಿದ್ದಾಗ 10 ರೂ. ನೋಟುಗಳನ್ನು ನೀಡಿ ಎಣಿಸಲು ಹೇಳಲಾಗಿತ್ತು. ಆದರೆ ಅವುಗಳನ್ನು ಎಣಿಸಲೂ ಆತನಿಗೆ ಸಾಧ್ಯವಾಗಲಿಲ್ಲ. ಆ ನಂತರ ಮತ್ತೆ ಕೋಲಾಹಲ ಉಂಟಾಯಿತು. ಈ ವಿಷಯವನ್ನು ವಧುವಿನ ಸಹೋದರ ತಿಳಿಸಿದಾಗ ಆಕೆ ಕೋಪಗೊಂಡಳು. ಅವಳು ಮದುವೆಯಾಗಲು ನಿರಾಕರಿಸಿದಳು. ಹೆಬ್ಬೆಟ್ಟಿನ ವ್ಯಕ್ತಿಯನ್ನು ನಾನು ಮದುವೆಯಾಗುವುದಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದಳು.

ಇದನ್ನೂ ಓದಿ: Gang-Rape: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, 12 ಗಂಟೆ ಪೊಲೀಸ್ ವ್ಯಾನ್‍ನಲ್ಲೇ ಇದ್ದ ಸಂತ್ರಸ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News