Elephant Viral Video : ದೈತ್ಯಕಾಯದ ಪ್ರಾಣಿ ಆನೆ. ಆನೆಯನ್ನು ದೇವಾಲಯಗಳಲ್ಲಿ ಸಾಕುತ್ತಾರೆ. ಪ್ರಾಣಿ ಸಂಗ್ರಹಾಲಯಗಳಲ್ಲಿಯೂ ಆನೆಯನ್ನು ಕಾಣಬಹುದು. ಆನೆಯನ್ನು ನಿಭಾಯಿಸುವುದು ಅದನ್ನು ಸಾಕುವ ಮಾವುತನಿಗೆ ಮಾತ್ರ ಸಾಧ್ಯವಾಗುತ್ತದೆ. ಆನೆ ಮದವೇರಿದಾಗ ಅನಾಹುತವೇ ನಡೆದು ಹೋಗುತ್ತದೆ.  ಎಷ್ಟೋ ಸಲ ಮದವೇರಿದ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಮಾವುತ ಕೂಡಾ ಸೋತು ಹೋಗುತ್ತಾನೆ. ಮಾತ್ರವಲ್ಲ ಆನೆಯ ಮದಕ್ಕೆ ಬಲಿಯಾದ ಅದೆಷ್ಟೋ ಮಾವುತರ ಕತೆಯನ್ನು ಕೂಡಾ ನಾವು ಕೇಳಿದ್ದೇವೆ.  ಆದರೂ ಕೂಡಾ ಆನೆಯ ಬಾಲಿ ಬಂದು ಕೆಲವರು ಚೇಷ್ಟೆ ಮಾಡುವುದನ್ನು ಬಿಡುವುದಿಲ್ಲ, ಪರಿಣಾಮ ಆನೆಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇಲ್ಲೊಬ್ಬ ಯುವತಿಯ ಜೊತೆ ಕೂಡಾ ಇಂಥದ್ದೇ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ತನ್ನ ಸೊಂಡಿಲಿನಿಂದ ಯುವತಿಯ ಮುಖಕ್ಕೆ ಹೊಡೆದ ಆನೆ :
ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.  ಆನೆ ಇರುವ ಆವರಣದ ಹೊರಗೆ ಏಳು ಜನರ ಗುಂಪು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದಲ್ಲಿ ಎಲ್ಲರೂ ಸಂತೋಷದಿಂದಲೇ ಇರುವುದನ್ನು ನೋಡಬಹುದು. ಇಬ್ಬರು ಹುಡುಗಿಯರು ಆನೆಯ ಸೊಂಡಿಲನ್ನು ಮುಟ್ಟಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.  ಈ ಗುಂಪಿನಲ್ಲಿದ್ದ ಯುವತಿಯೊಬ್ಬಳು ತನ್ನ ಸ್ಮಾರ್ಟ್‌ಫೋನ್ ತೆಗೆದುಕೊಂಡು ರಹಸ್ಯವಾಗಿ ಆನೆಯ ವೀಡಿಯೊ ಮಾಡಲು ಪ್ರಾರಂಭಿಸುತ್ತಾಳೆ. ಇದನ್ನೂ ಗಮನಿಸಿದ ಆನೆ ಯುವತಿ ಮೇಲೆ ದಾಳಿ ಮಾಡುತ್ತದೆ. ಆಣೆ ಹೀಗೆ ದಾಳಿ ಮಾಡಬಹುದು ಎಂದು ಯುವತಿ ಅಂದು ಕೊಳ್ಳಲೇ ಇಲ್ಲ. ಕ್ಷಣ ಮಾತ್ರದಲ್ಲಿ ಆನೆ ತನ್ನ ಸೊಂಡಿಲಿನಿಂದ ಯುವತಿ ಮೇಲೆ ದಾಳಿ ಮಾಡಿದೆ.


 ಇದನ್ನೂ ಓದಿ ಜಪಾನಿ ಹುಡುಗನ ಹಿಂದಿ ಕೌಶಲ್ಯಕ್ಕೆ ಬೆರಗಾದ ಪ್ರಧಾನಿ ಮೋದಿ
 
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್  :
ಆನೆ ಯುವತಿಯ ಮುಖಕ್ಕೆ ಬಲವಾಗಿ ಬಡಿದಿದೆ.  ಆನೆ ಹೊಡೆತದ ರಭಸಕ್ಕೆ ಯುವತಿ ಮಾರು ದೂರ ಹೋಗಿ ಬಿದ್ದಿದ್ದಾಳೆ. ಯುವತಿ ನೆಲಕ್ಕೆ ಬೀಳುತ್ತಿದ್ದಂತೆ ಆಕೆಯ ಕೈಯಲ್ಲಿದ್ದ ಮೊಬೈಲ್ ಕೂಡಾ ನೆಲಕ್ಕೆ ಅಪ್ಪಳಿಸುತ್ತದೆ. ಸಿಟ್ಟಿಗೆದ್ದ ಆನೆ ಆ ಮೊಬೈಲ್ ಅನ್ನು ಕೂಡಾ ತನ್ನ ಸೊಂಡಿಲಿನ ಮೂಲಕ ಎಳೆಯಲು ಪ್ರಯತ್ನಿಸುವುದನ್ನು ಇಲ್ಲಿ ಕಾಣಬಹುದು. 


ವೈರಲ್ ಆಗುತ್ತಿದೆ. ಈ ವೀಡಿಯೊವನ್ನು @cctv_idiots ಎಂಬ ಹ್ಯಾಂಡ್ಲರ್ ಮೂಲಕ Twitter ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಏಳು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.


ಇದನ್ನೂ ಓದಿ : OMG! Watch Video: ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.