Elephant Viral Video : ಆನೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಪ್ರಾಣಿ. ಸಾಕು ಆನೆಗಳಿಗೆ ಬಾಳೆಹಣ್ಣು, ತೆಂಗಿನಕಾಯಿ ಕೊಟ್ಟು ಖುಷಿ ಪಡುವವರು ಅನೇಕರಿದ್ದಾರೆ. ಆದರೆ ಕಾಡಾನೆಗಳು ಹಾಗಲ್ಲ. ಅವುಗಳ ಹತ್ತಿರ ಸುಳಿಯುವುದು ಕೂಡಾ ಬಲು ಅಪಾಯಕಾರಿ. ಒಮ್ಮೊಮ್ಮೆ, ವಾಹನಗಳಲ್ಲಿ  ಸಂಚಾರ  ಮಾಡುತ್ತಿರುವಾಗ  ಕಾಡಾನೆಗಳು ಎದುರು ಪ್ರತ್ಯಕ್ಷವಾಗುವುದುಂಟು. ಎಷ್ಟೋ ಬಾರಿ ಹೀಗೆ ಮಾರ್ಗ ಮಧ್ಯೆ ಆನೆಗಳು ಕಾಣಿಸಿಕೊಂಡರೂ ಯಾರಿಗೂ ತೊಂದರೆ ಕೊಡದೆ ಅವುಗಳ ಪಾಡಿಗೆ ಅವು ಸಾಗುತ್ತವೆ. ಆದರೆ ಕೆಲವೊಮ್ಮೆ ಮಾತ್ರ ವಾಹನಗಳನ್ನು ಅಡ್ಡ ಗಟ್ಟಿ ನಿಲ್ಲಿಸಿ ಬಿಡುತ್ತವೆ.  ವಾಹನಗಳ ಎದುರು ಬಂದು ಆನೆಗಳು ನಿಂತರೆ ಕೈ ಕಾಲು ನಡುಗಿಹೊಗುತ್ತವೆ. ಅಂಥದರಲ್ಲಿ ಈ ಆನೆ, ಕಾರಿನ ಬೋನೆಟ್ ಮೇಲೇರಿ ನಿಂತರೆ ಕಾರಿನ ಒಳಗೆ ಇದ್ದವರ ಸ್ಥಿತಿ ಹೇಗಾಗಬೇಡ? ಸೋಷಿಯಲ್ ಮೀಡಿಯಾದಲ್ಲಿ ಇಂಥಹ ವಿಡಿಯೋ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ವೈರಲ್ ಆಗಿರುವ ವಿಡಿಯೋದಲ್ಲಿ ಮೊದಲಿಗೆ ಕಾರನ್ನು ಆನೆ ತಡೆಯುವುದನ್ನು ಕಾಣಬಹುದು. ನಂತರ ಕಾರಿನ ಟಯರ್ ಮೇಲೆ ಆನೆ ಏರುತ್ತದೆ. ಅಲ್ಲಿಗೂ ಆನೆಗೆ ಸಮಾಧಾನವಾಗುವುದಿಲ್ಲ.ನೇರವಾಗಿ ಹೋಗಿ ಬೋನೆಟ್ ಮೇಲೆ ಕುಳಿತುಕೊಳ್ಳುತ್ತದೆ. ಅದ್ಯಾಕೋ ಗಜ ರಾಜ ಅಲ್ಲಿಗೂ  ತೃಪ್ತಿಯಾದಂತೆ ಕಾಣುವುದಿಲ್ಲ. ಸೀದಾ ಬೋನೆಟ್ ಮೇಲೆ ಹತ್ತಿ ಬಿಡುತ್ತದೆ. ಅಲ್ಲಿಯವರೆಗೆ ಆನೆಯ ಆಟ ನೋಡುತ್ತಾ ಕಾರಿನೊಳಗೆ ಕುಳಿತಿದ್ದವರಿಗೆ ಇನ್ನು ಅಲ್ಲೇ ನಿಂತರೆ ಉಳಿಗಾಲ ಇಲ್ಲ ಎನ್ನುವುದು ಅರ್ಥವಾಗಿದೆ.  ಆಗಿದ್ದು ಆಗಲಿ ಎಂದು ಯೋಚಿಸಿದವರು ಕಾರನ್ನು ಹಿಂದಕ್ಕೆ ತೆಗೆದುಕೊಂಡು ಬಿಟ್ಟಿದ್ದಾರೆ. 


ಇದನ್ನೂ ಓದಿ : Funny Video : ಮೊಬೈಲ್‌ಗಾಗಿ ಮಗುವಿನ ಜೊತೆ ಮಂಗನ ಜಗಳ.. ವಿಡಿಯೋ ವೈರಲ್‌.!


ಕಾರು ಚಾಲಕ ಕಾರನ್ನು ರಿವರ್ಸ್ ತೆಗೆದುಕೊಂಡಾಗಲೇ ಆನೆಯ ಕರಾಮತ್ತು ಬೆಳಕಿಗೆ ಬಂದಿದ್ದು. ಕಾರಿನ ಮುಂಭಾಗದ ಬಂಪರ್ ನಷ್ಟವಾಗಿದ್ದು, ಉಳಿದಂತೆ ವಾಹನಕ್ಕೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಆದರೆ ಈ  ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ.  


Teacher Viral Video : ತರಗತಿಯಲ್ಲಿ ಮಕ್ಕಳ ಮುಂದೆಯೇ ಬಿಯರ್ ಕುಡಿಯುವ ಶಿಕ್ಷಕ.!


ಈ ವಿಡಿಯೋವನ್ನು ಡಾ.ಸಾಮ್ರಾಟ್ ಗೌಡ ಐಎಫ್‌ಎಸ್ ತಮ್ಮ twitter ಖಾತೆಯಲ್ಲಿ ಶೇರ್ ಮಾಡಿದ್ದಾರೆ.  ಈ ವೀಡಿಯೊವನ್ನು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡುತ್ತಿದ್ದಾರೆ. ಮಾತ್ರವಲ್ ರಿಟ್ವೀಟ್ ಕೂಡಾ ಮಾಡುತ್ತಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.