Teacher Viral Video : ತರಗತಿಯಲ್ಲಿ ಮಕ್ಕಳ ಮುಂದೆಯೇ ಬಿಯರ್ ಕುಡಿಯುವ ಶಿಕ್ಷಕ.!

Teacher Viral Video : ಮಕ್ಕಳಿಗೆ ಪಾಠ ಹೇಳುವ ಶಾಲೆ ಪುಣ್ಯ ಮಂದಿರದಂತಿದ್ದು, ಕೆಲ ಶಿಕ್ಷಕರು ತಮ್ಮ ದುರ್ವರ್ತನೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ.  

Written by - Chetana Devarmani | Last Updated : Oct 4, 2022, 08:49 PM IST
  • ತರಗತಿಯಲ್ಲಿ ಮಕ್ಕಳ ಮುಂದೆಯೇ ಬಿಯರ್ ಕುಡಿಯುವ ಶಿಕ್ಷಕ
  • ಖಾಲಿ ಬಿಯರ್ ಕ್ಯಾನ್ ಇಟ್ಟುಕೊಂಡು ಕುಳಿತ ಟೀಚರ್
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ವಿಡಿಯೋ
Teacher Viral Video : ತರಗತಿಯಲ್ಲಿ ಮಕ್ಕಳ ಮುಂದೆಯೇ ಬಿಯರ್ ಕುಡಿಯುವ ಶಿಕ್ಷಕ.! title=
ಬಿಯರ್ ಕುಡಿಯುವ ಶಿಕ್ಷಕ

Teacher Viral Video : ಸಿನಿಮಾಗಳ ಪ್ರಭಾವವೋ ಅಥವಾ ವೇಷ ಹಾಕಿದ್ದೋ ಗೊತ್ತಿಲ್ಲ ಆದರೆ ಕೆಲ ಶಿಕ್ಷಕರು ಶಿಕ್ಷಕರಂತೆ ವರ್ತಿಸುತ್ತಿಲ್ಲ. ತಂದೆ - ತಾಯಿಯ ನಂತರ ಒಬ್ಬ ವ್ಯಕ್ತಿಯ ಜೀವನದಲ್ಲಿ ಗುರು ಅತ್ಯಂತ ಮುಖ್ಯ ಪಾತ್ರವಹಿಸುತ್ತಾರೆ. ಆದರೆ ಇಂತಹ ಗುರು ಜವಾಬ್ದಾರಿಯ ಹುದ್ದೆಯಲ್ಲಿದ್ದರೂ ಕೆಲ ಶಿಕ್ಷಕರು ನಿರ್ಲಕ್ಷ್ಯ ವಹಿಸಿ ಶಿಕ್ಷಕ ವೃತ್ತಿಗೆ ಕಳಂಕ ತರುತ್ತಿದ್ದಾರೆ. ಮಕ್ಕಳಿಗೆ ಪಾಠ ಹೇಳುವ ಶಾಲೆ ಪುಣ್ಯ ಮಂದಿರದಂತಿದ್ದು, ಕೆಲ ಶಿಕ್ಷಕರು ತಮ್ಮ ದುರ್ವರ್ತನೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಕಾಣಸಿಗುವ ಶಾಲಾ ಶಿಕ್ಷಕ ಕೂಡ ಇಂತಹದ್ದೇ ನೀಚ ಕೃತ್ಯ ಮಾಡಿದ್ದಾನೆ. 

ಇದನ್ನೂ ಓದಿ : Lady Finger Benefits : ಬೆಂಡೆಕಾಯಿಯಲ್ಲಿದೆ ಈ ರೋಗಗಳಿಗೆ ಪರಿಹಾರ.!

ಈ ವಿಡಿಯೋದಲ್ಲಿ ಶಾಲಾ ಶಿಕ್ಷಕ ತನ್ನ ಮುಂದೆ ಖಾಲಿ ಬಿಯರ್ ಕ್ಯಾನ್ ಇಟ್ಟುಕೊಂಡು ಕುಳಿತಿರುವುದನ್ನು ಕಾಣಬಹುದು. ಅವರು ಕುಳಿತಿದ್ದ ಕುರ್ಚಿಯಲ್ಲಿ ಮತ್ತೊಂದು ಬಿಯರ್ ಕ್ಯಾನ್ ಬಚ್ಚಿಟ್ಟಿದ್ದಾರೆ. ವಿಡಿಯೋ ತೆಗೆಯುತ್ತಿದ್ದಾಗ ಈ ವಿಷಯ ತಿಳಿದು ಬಿಯರ್ ಕ್ಯಾನ್ ಅನ್ನು ಹಿಂದೆ ಬಚ್ಚಿಡಲು ಯತ್ನಿಸಿದ್ದಾರೆ. ತರಗತಿಯಲ್ಲಿ ಕುಳಿತುಕೊಂಡು ಮಕ್ಕಳಿಗೆ ಓದು ಬರಹ ಕಲಿಸಬೇಕಿದ್ದ ಈ ಶಿಕ್ಷಕ ಬಿಯರ್ ಕುಡಿಯುತ್ತಿರುವುದು ಸಮಾಜವನ್ನು ಆತಂಕಕ್ಕೆ ದೂಡದೆ. ಅವರ ಮುಂದೆ ವಿದ್ಯಾರ್ಥಿಗಳು ಕುಳಿತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. 

 

 

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಕ್ಕಳ ಬಂಗಾರದಂತಹ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕಾದ ಶಾಲಾ ಶಿಕಕ್ಷಕನೆ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸ್ವಾತಿ ಮಳಿವಾಲ್ ಬೇಸರ ವ್ಯಕ್ತಪಡಿಸಿದರು. ಈ ಘಟನೆಯು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವಂತೆ ತೋರುತ್ತಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಶಾಲಾ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ :  ಆ ಸಿನಿಮಾದ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು ಎಲ್ಲ ಶೋಗಳು ಹೌಸ್‌ಫುಲ್‌.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News