Elephant watching mobile video : ಸ್ಮಾರ್ಟ್‌ಫೋನ್ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಅಂಗೈಯಲ್ಲಿ ಜಗತ್ತನ್ನು ತೋರಿಸುವ ಸ್ಮಾರ್ಟ್ ಫೋನ್ ಇಲ್ಲದವರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅಕ್ಕಪಕ್ಕದವರೊಂದಿಗೆ ಮಾತನಾಡುವ ಬದಲು ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಈ ಕ್ರಮದಲ್ಲಿ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಸ್ಮಾರ್ಟ್‌ಫೋನ್‌ ಚಟಕ್ಕೆ ಬಿದ್ದಿದ್ದಾರೆ. ಮನುಷ್ಯರಷ್ಟೇ ಅಲ್ಲ.. ಪ್ರಾಣಿಗಳೂ ಸ್ಮಾರ್ಟ್ ಫೋನ್ ಗೆ ಅಡಿಕ್ಟ್ ಆಗಿವೆ. ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಆನೆಗೆ ಸಂಬಂಧಿಸಿದ ಇತ್ತೀಚಿನ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video: ಬೆಂಕಿಯ ಜೊತೆ ಸರಸ! ಗಡ್ಡ ಸುಟ್ಟಿಕೊಂಡ ಸ್ಟಂಟ್‌ ಮ್ಯಾನ್‌.. ವಿಡಿಯೋ ನೋಡಿ


ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕೇರಳದ ಕುಂಭಕೋಣಂನಲ್ಲಿರುವ ಶ್ರೀ ಕುಂಭೀಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾವುತ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಏನನ್ನೋ ನೋಡುತ್ತಿದ್ದಾನೆ. ಮಾವುತ ಕುಳಿತು ಫೋನ್ ನೋಡುತ್ತಿದ್ದಾಗ ಅವನ ಪಕ್ಕದಲ್ಲೇ ಆನೆ ನಿಂತಿತ್ತು. ಮಾವುತ ಫೋನ್ ನೋಡುತ್ತಿರುವುದನ್ನು ಗಮನಿಸಿದ ಆನೆ ಅವನ ಬಳಿಗೆ ಬರುತ್ತದೆ. ಆನೆ ಕೂಡ ಫೋನ್ ನೋಡಲು ಪ್ರಯತ್ನಿ. ಆದರೆ ಆನೆ ನಿಂತಿರುವುದರಿಂದ ಫೋನ್ ಕಾಣುತ್ತಿಲ್ಲ. ಅದಕ್ಕೆ ಕೆಳಗೆ ಬಾಗಿ ಮೊಬೈಲ್‌  ನೋಡಲು ಪ್ರಯತ್ನಿಸುತ್ತೆ.


 



 


ಆನೆಯೊಂದು ಸ್ಮಾರ್ಟ್‌ಫೋನ್ ಅನ್ನು ನೋಡುತ್ತಿರುವ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ 'kerala_elephants' ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. "ಆನೆ ಮತ್ತು ಮಾವುತನ ನಡುವಿನ ಬಾಂಧವ್ಯ ಅನನ್ಯ ಮಾತ್ರವಲ್ಲ, ಬಹಳ ಮೌಲ್ಯಯುತವಾಗಿದೆ" ಎಂದು ಅವರು ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಫೋನ್ ನೋಡಲು ಆನೆ ಪಡುವ ಕಷ್ಟ ಕಂಡು ನೆಟಿಜನ್ ಗಳು ನಗುತ್ತಿದ್ದಾರೆ. ‘ಗಜರಾಜನಿಗೆ ಎಷ್ಟು ಕಷ್ಟ’, ‘ಪಾಪಿ ಆನೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಇದುವರೆಗೆ 36 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಲಕ್ಷಗಟ್ಟಲೆ ವೀಕ್ಷಣೆಗಳು ಬಂದಿವೆ.


ಇದನ್ನೂ ಓದಿ : Viral Video: ಬಡಪಾಯಿ ಹಸು ತೋರಿದ ಧೈರ್ಯದ ಮುಂದೆ ಶಕ್ತಿಯನ್ನೇ ಕಳೆದುಕೊಂಡ ಕ್ರೂರಿ ಮೊಸಳೆ... ವಿಡಿಯೋ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.