Viral Video: ಬಡಪಾಯಿ ಹಸು ತೋರಿದ ಧೈರ್ಯದ ಮುಂದೆ ಶಕ್ತಿಯನ್ನೇ ಕಳೆದುಕೊಂಡ ಕ್ರೂರಿ ಮೊಸಳೆ... ವಿಡಿಯೋ ನೋಡಿ

Crocodile Vs Cow Video: ಕ್ರೂರಿ ಮೊಸಳೆಯೊಂದು ತನ್ನ ಚೂಪಾದ ಹಲ್ಲುಗಳ ನಡುವೆ ಹಸುವನ್ನು ಹಿಡಿದಿದೆ. ಹಸಿವಿನಿಂದ ಕಂಗೆಟ್ಟ ಮೊಸಳೆ ಹಸುವನ್ನು ತನ್ನ ಆಹಾರವಾಗಿಸಲು ತನ್ನೆಲ್ಲಾ ಶಕ್ತಿಯನ್ನು ಪಣಕ್ಕಿಟ್ಟಿದೆ. ಆದರೆ, ಇನ್ನೊಂದೆಡೆ ಹಸುವೂ ಕೂಡ ಭಾರಿ ಧೈರ್ಯವನ್ನು ಮೆರೆದಿದೆ. ಅದೂ ಕೂಡ ಸತತ ಮೊಸಳೆಯಿಂದ ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದೆ.   

Written by - Nitin Tabib | Last Updated : Nov 1, 2022, 08:59 PM IST
  • ತನ್ನ ಸರಹದ್ದಿನೊಳಗೆ ಯಾವುದೇ ಪ್ರಾಣಿ ಬಂದರೂ ಕೂಡ ಅದನ್ನು ತನ್ನ ಬಲೆಗೆ ಬೀಳಿಸಲು ಮೊಸಳೆ ಹಿಂಜರಿಯುವುದಿಲ್ಲ.
  • ಕ್ಷಣಾರ್ಧದಲ್ಲಿ ಅದು ತನ್ನ ಎದುರಾಳಿಯ ಉಸಿರನ್ನೇ ನಿಲ್ಲಿಸುತ್ತದೆ ಮತ್ತು ಅದನ್ನು ತನ್ನ ಆಹಾರವನ್ನಾಗಿಸುತ್ತದೆ.
  • ಒಂದು ವೇಳೆ ಮೊಸಳೆ ತನ್ನ ಫುಲ್ ಮೂಡ್ ನಲ್ಲಿದ್ದರೆ, ಹುಲಿ-ಸಿಂಹಗಳನ್ನೂ ಕೂಡ ಬಿಡುವುದಿಲ್ಲ ಎಂಬುದನ್ನು ನೀವು ಹಲವು ಬಾರಿ ನೋಡಿರಬಹುದು.
Viral Video: ಬಡಪಾಯಿ ಹಸು ತೋರಿದ ಧೈರ್ಯದ ಮುಂದೆ ಶಕ್ತಿಯನ್ನೇ ಕಳೆದುಕೊಂಡ ಕ್ರೂರಿ ಮೊಸಳೆ... ವಿಡಿಯೋ ನೋಡಿ title=
Crocodile Vs Cow Video

Crocodile Vs Cow Video: ತನ್ನ ಸರಹದ್ದಿನೊಳಗೆ ಯಾವುದೇ ಪ್ರಾಣಿ ಬಂದರೂ ಕೂಡ ಅದನ್ನು ತನ್ನ ಬಲೆಗೆ ಬೀಳಿಸಲು ಮೊಸಳೆ ಹಿಂಜರಿಯುವುದಿಲ್ಲ. ಕ್ಷಣಾರ್ಧದಲ್ಲಿ ಅದು ತನ್ನ ಎದುರಾಳಿಯ ಉಸಿರನ್ನೇ ನಿಲ್ಲಿಸುತ್ತದೆ ಮತ್ತು ಅದನ್ನು ತನ್ನ ಆಹಾರವನ್ನಾಗಿಸುತ್ತದೆ. ಒಂದು ವೇಳೆ ಮೊಸಳೆ ತನ್ನ ಫುಲ್ ಮೂಡ್ ನಲ್ಲಿದ್ದರೆ, ಹುಲಿ-ಸಿಂಹಗಳನ್ನೂ ಕೂಡ ಬಿಡುವುದಿಲ್ಲ ಎಂಬುದನ್ನು ನೀವು ಹಲವು ಬಾರಿ ನೋಡಿರಬಹುದು. ಚಿರತೆ-ಜಿಂಕೆಗಳನ್ನು ಕೂಡ ಅದು ತನ್ನ ಬೇಟೆಯನ್ನಾಗಿಸುತ್ತದೆ. ಆದರೂ ಕೂಡ ಕೆಲವೊಮ್ಮೆ ಧೈರ್ಯದ ಮುಂದೆ ಶಕ್ತಿಯೂ ಕೂಡ ತನ್ನ ಕೈಚೆಲ್ಲುತ್ತದೆ. ಅಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಬ್ಬರಿಸುತ್ತಿದ್ದು, ಅದರಲ್ಲಿ ನೀವು ಇದನ್ನು ಸ್ಪಷ್ಟವಾಗಿ ನೋಡಬಹುದು.

ಇದನ್ನೂ ಓದಿ-Viral Video: ಬೆಚ್ಚಿಬೀಳಿಸುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ!

ಭಾರಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಮೊಸಳೆಯು ಬಡಪಾಯಿ ಹಸುವನ್ನು ತನ್ನ ಚೂಪಾದ ದವಡೆಗಳಿಂದ ಕಚ್ಚಿ ಹಿಡಿದಿರುವುದನ್ನು ನೀವು ನೋಡಬಹುದು. ಹಸಿವಿನಿಂದ ಕಂಗೆಟ್ಟ ಅದು, ಹಸುವನ್ನು ತನ್ನ ಆಹಾರವನ್ನಾಗಿಸಲು ಹವಣಿಸುತ್ತಿರುವುದನ್ನು ನೀವು ನೋಡಬಹುದು. ಆದರೆ, ಇಂತಹ ಪರಿಸ್ಥಿತಿಯಲ್ಲಿ ಹಸುವೂ ಕೂಡ ತನ್ನ ಧೃತಿಗೆಟ್ಟಿಲ್ಲ ಮತ್ತು ಅಪಾಯಕಾರಿ ಮೊಸಳೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ನಂತರ ಏನಾಯ್ತು ಎಂಬುದನ್ನು ನೋಡಿ ನೀವೂ ಕೂಡ ನಿಟ್ಟುಸಿರುಬಿಡುವಿರಿ. ಹಸುವಿನ ಮುಂದೆ ಕ್ರೂರಿ ಮೊಸಳೆಯ ಪರಿಸ್ಥಿತಿ ಹೀಗಾಗಲಿದೆ ಎಂಬುದನ್ನು ಯಾರೂ ಊಹಿಸಲು ಕೂಡ ಸಾಧ್ಯವಿಲ್ಲ. ಯಾವುದಕ್ಕೂ ಮೊದಲು ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿ.

ಇದನ್ನೂ ಓದಿ-Bride Groom Video: ವೇದಿಕೆಯ ಮೇಲೆ ನಿಂತಿದ್ದ ವಧು-ವರರ ಮೇಲೆ ಬಿದ್ದ ಸ್ಪೀಕರ್!

ಹಸುವಿನ ಧೈರ್ಯದ ಮುಂದೆ ಭಯಂಕರ ಮೊಸಳೆ ಸೋಲೊಪ್ಪಿಕೊಳ್ಳುವುದನ್ನು ನೀವು ನೋಡಬಹುದು. ಹಸುವನ್ನು ಬೆತೆಯಾಗಿಸಲು ಅದು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ಮತ್ತು ವಿಫಲವಾಗುತ್ತಿರುವುದನ್ನು ನೀವು ನೋಡಬಹುದು. ಅದು ಹಸುವನ್ನು ಎಳೆದು ನೀರಿನಲ್ಲಿ ಮುಳುಗಿಸಲು ಯತ್ನಿಸುತ್ತಿದೆ. ಆದರೆ, ಹಸುವಿನ ಧೈರ್ಯದ ಮುಂದೆ ಅದು ಸುಸ್ತಾಗಿದೆ ಮತ್ತು ಹಸುವನ್ನು ತನ್ನ ದವಡೆಯಿಂದ ಬಿಡುಗಡೆ ಮಾಡಿದೆ. ಅವಕಾಶ ಸಿಕ್ಕ ಹಸು ಎಳ್ಳಿನ ಪಾರಾಗಿದೆ. twfeq ಹೆಸರಿನ Instagram ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಹಲವರ ಕಾಲ್ಕೆಳಗಿನ ನೆಲವೇ ಜಾರಿಗೆ ಎಂಬಂತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News