ರೈಲಿನಲ್ಲಿ ಸೀಟಿಗಾಗಿ ಮಹಿಳೆಯರ ನಡುವೆ ಭಾರಿ ಮಾರಾಮಾರಿ : Video ವೈರಲ್
ಮುಂಬೈ ಲೋಕಲ್ ಥಾಣೆ-ಪನ್ವೇಲ್ ನ ಮಹಿಳಾ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಂಬೈ : ಮುಂಬೈನ ಲೋಕಲ್ ರೈಲಿನಲ್ಲಿ ಸೀಟಿನ ವಿಚಾರವಾಗಿ ಕೆಲ ಮಹಿಳೆಯರ ನಡುವೆ ನಡೆದ ಭಾರಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈ ಲೋಕಲ್ ಥಾಣೆ-ಪನ್ವೇಲ್ ನ ಮಹಿಳಾ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ರೈಲಿನೊಳಗೆ ಪರಸ್ಪರ ಕೂದಲು ಎಳೆದಾಡಿಕೊಂಡು ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳಾ ಪೇದೆಯೊಬ್ಬರು ಪ್ರಯಾಣಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಮಹಿಳೆಯರ ಜಗಳ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಎಷ್ಟರಮಟ್ಟಿಗೆ ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ ಎಂದರೆ ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : Kejriwal Vs Delhi LG: ನನ್ನ ಹೆಂಡತಿ ಕೂಡ ಗವರ್ನರ್ ಅಷ್ಟು ಸಿಟ್ಟು ಮಾಡಿಕೊಂಡಿಲ್ಲವೆಂದ ಕೇಜ್ರಿವಾಲ್
ಈ ಬಗ್ಗೆ ವಾಶಿ ರೈಲ್ವೆ ನಿಲ್ದಾಣದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಕಟಾರೆ ಮಾತನಾಡಿ, ಥಾಣೆಯಿಂದ ಪನ್ವೇಲ್ ಸ್ಥಳೀಯ ರೈಲಿನಿಂದ ವಾಶಿ ರೈಲು ನಿಲ್ದಾಣದಲ್ಲಿ 3 ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ. ಸೀಟಿನ ವಿವಾದದಕ್ಕೆ ಕೆಲವು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳಾ ಉದ್ಯೋಗಿಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬೈನ ಜೀವನಾಡಿ ಎಂದು ಕರೆಯಲ್ಪಡುವ ಸ್ಥಳೀಯ ರೈಲುಗಳು ತಮ್ಮ ದಟ್ಟಣೆಗೆ ಹೆಸರುವಾಸಿಯಾಗಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅದರ ವ್ಯಾಪಕ ವ್ಯಾಪ್ತಿಯ ಕಾರಣ ಮತ್ತು ಸ್ಥಳೀಯ ನಗರ ಜನಸಂಖ್ಯೆಯ ಹೆಚ್ಚಿನ ಜನ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ, ಮುಂಬೈ ಲೋಕಲ್ ರೈಲುಗಳು ವಿಶ್ವದ ಕೆಲವು ತೀವ್ರ ದಟ್ಟಣೆಯಿಂದ ಬಳಲುತ್ತಿವೆ.
ಇದನ್ನೂ ಓದಿ : 120 ಕೋಟಿ ಮೌಲ್ಯದ ಡ್ರಗ್ ಸಾಗಾಟ; ಏರ್ ಇಂಡಿಯಾದ ಮಾಜಿ ಪೈಲಟ್ ಸೇರಿ 6 ಮಂದಿ ಬಂಧನ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.