Snake video : ಬಟಾಬಯಲಿನಲ್ಲಿ ಇದ್ದರೂ ಯಾರ ಕಣ್ಣಿಗೂ ಕಾಣಿಸದ ರೀತಿಯಲ್ಲಿ ಇರುವ ಈ ಹಾವಿನ  ವೀಡಿಯೊ ಲಕ್ಷಾಂತರ ವೀಕ್ಷಕರನ್ನು ಬೆರಗುಗೊಳಿಸಿದೆ.ವನ್ಯಜೀವಿ ಛಾಯಾಗ್ರಾಹಕ ಇಶಾನ್ ಶಾನವಾಸ್  ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇರುವ ಹಾವನ್ನು ಹುಡುಕುವುದೇ ಸದ್ಯಕ್ಕೆ ಎಲ್ಲರ ಮುಂದೆ ಇರುವ ಚಾಲೆಂಜ್. 


COMMERCIAL BREAK
SCROLL TO CONTINUE READING

ಹಚ್ಚ ಹಸಿರಿನ ಎಲೆಗೊಂಚಲುಗಳಲ್ಲಿ ಮಧ್ಯೆ ಬಹಳ ಆರಾಮಾಗಿ ಕುಳಿತಿರುವ ಹಾವು ಈ ವಿಡಿಯೋದಲ್ಲಿ ಇದೆ. ಸುಮ್ಮನೆ ಹಾಗೆಯೇ ನೋಡಿದರೆ ಇಲ್ಲಿ ಒಂದು ಹಾವು ಇದೆ ಎನ್ನುವುದನ್ನು ಯಾರೂ ಅಂದಾಜಿಸಲು ಸಾಧ್ಯವೇ ಇಲ್ಲ.


ಇದನ್ನೂ ಓದಿ : Viral video: ಸರ್ಪದೊಂದಿಗೆ ಸ್ನೇಹ ಸಾಧ್ಯವೇ?.. ಹಾದಿಯಲ್ಲಿ ಎದುರಾದ ಹಾವಿಗೆ ಮುತ್ತಿಟ್ಟ ಗೋಮಾತೆ! ಮುಂದೆನಾಯ್ತು ಅಂತ ನೀವೇ ನೋಡಿ!! ವಿಡಿಯೋ ವೈರಲ್‌


ಈ ವಿಡಿಯೋದಲ್ಲಿರುವ ಹಾವನ್ನು ವೈನ್ ಸ್ನೇಕ್ ಎಂದು ಕರೆಯುತ್ತಾರೆ.ಈ ಹಾವುಗಳು ತೆಳ್ಳಗಿನ ದೇಹ ಮತ್ತು ತಮ್ಮ ಗಾಢವಾದ ಬಣ್ಣಕ್ಕೆ ಹೆಸರುವಾಸಿಯಾಗಿದೆ. ಈ ಹಾವಿನ ಬಣ್ಣವೇ ಹಸಿರು.ಹಾಗಾಗಿಯೇ ಇದು ಗಿಡ ಬಳ್ಳಿಗಳ ಮಧ್ಯೆ ಕುಳಿತು ಜನರನ್ನು ಬಹಳ ಸುಲಭವಾಗಿ ಮೋಸ ಮಾಡುತ್ತದೆ. 


ಈ ವಿಡಿಯೋವನ್ನು ಸಮ್ಮನೆ ಹಾಗೆಯೇ ನೋಡಿದರೆ ಏನು ಕೂಡಾ ಕಾಣಿಸದು.ಆದರೆ   ಸ್ವಲ್ಪ ದಿಟ್ಟಿಸಿ ನೋಡಿದರೆ ಸುಂದರವಾದ ಹಸಿರು ವೈನ್ ಸ್ನೇಕ್ ಕಾಣಿಸುತ್ತದೆ. 


 



ಇದನ್ನೂ ಓದಿ : ಕೇಬಲ್ ಟಿವಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ..! ಬೆಚ್ಚಿಬಿದ್ದ ಸಿರೀಯಲ್‌ ನೋಡುತ್ತಿದ್ದ ಜನ.. ವಿಡಿಯೋ ಇಲ್ಲಿದೆ


ಈ ವಿಡಿಯೋ ಹಂಚಿಕೊಂಡಾಗಿನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಮಿಲಿಯನ್ ಗಟ್ಟಲೆ ಜನ ವೀಕ್ಷಿಸಿದ್ದಾರೆ.ಈ ವಿಡಿಯೋ ನೋಡಿ ವಿಧ ವಿಧದ ಕಾಮೆಂಟ್ ಗಳನ್ನೂ ಮಾಡಿದ್ದಾರೆ. ಇನ್ನು ಕೆಲವರಿಗೆ ಈ ಹಾವು ವಿಷಕಾರಿಯೇ ಎಂದು ತಿಳಿದುಕೊಳ್ಳುವ ಕುತೂಹಲ. 


ಅಂದ ಹಾಗೆ ಈ ಹಾವು ವಿಷಕಾರಿಯೇ. ಆದರೆ ಇದು ಮಧ್ಯಮ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.ಈ ಹಾವು ಕಚ್ಚಿ ಸಾಯುವ ಮಟ್ಟಿಗೆ ವಿಷ ಏರುವುದಿಲ್ಲ ಎನ್ನಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ