ನವದೆಹಲಿ: ಅಪರೂಪದ ಮತ್ತು ದೈತ್ಯ ಮೀನುಗಳು ಬಲೆಗೆ ಬಿದ್ದರೆ ಮೀನುಗಾರರಿಗೆ ಕೈತುಂಬಾ ಹಣ ಸಿಗುತ್ತದೆ. ಅದೇ ರೀತಿ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಪ್ರದೇಶದಲ್ಲಿ ಮೀನುಗಾರರ ಬಲೆಗೆ ಬಿದ್ದ ಮೀನೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.


COMMERCIAL BREAK
SCROLL TO CONTINUE READING

ಹೌದು, ಬಲೆಗೆ ಬಿದ್ದ ‘ತೆಲಿಯಾ ಭೋಲಾ’ ಮೀನು ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿಬಿಟ್ಟಿದೆ. ಈ ಮೀನಿನಿಂದ ಆ ಮೀನುಗಾರ ರಾತ್ರೋ ರಾತ್ರಿ ಲಕ್ಷಾಧಿಪತಿಯಾಗಿದ್ದಾನೆ. ಸುಮಾರು 55 ಕೆಜಿ ತೂಕದ ಈ ಮೀನು ದಿಘಾ ಮೋಹನ ಹರಾಜು ಕೇಂದ್ರದಲ್ಲಿ ಬರೋಬ್ಬರಿ 13 ಲಕ್ಷ ರೂ.ಗೆ ಹರಾಜಾಗಿದೆ. ದಿಘಾ ಪೂರ್ವ ಭಾರತದ ಅತಿದೊಡ್ಡ ಸಮುದ್ರ ಮೀನು ಹರಾಜು ಕೇಂದ್ರವಾಗಿದೆ.


ಬಲೆಗೆ ಬಿದ್ದ ಈ ಮೀನಿನಿಂದ ಮೀನುಗಾರನ ಕಷ್ಟಗಳೆಲ್ಲವೂ ಒಂದೇ ಏಟಿಗೆ ಮಾಯವಾಗಿವೆ. ಎಂದಿನಂತೆ ಮೀನು ಹಿಡಿಯಲು ಹೋದ ಮೀನುಗಾರನ ಬಲೆಗೆ ತೇಲಿಯಾ ಭೋಲಾ ಮೀನು ಜಾತಿಗೆ ಸೇರಿದ ಬೃಹತ್ ಮೀನು ಸಿಕ್ಕಿದೆ. ದೊಡ್ಡ ಮೀನು ಸಿಕ್ಕಿದ್ದರಿಂದ ಮೀನುಗಾರನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ‘ತೆಲಿಯಾ ಭೋಲಾ’ ಜಾತಿ ಮೀನು ಸಿಕ್ಕಿದ್ದು ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿಬಿಟ್ಟಿದೆ.   


ಇದನ್ನೂ ಓದಿ: ಈ 11 ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ


ದಿಘಾ ಮೋಹನ ಮೀನು ಹರಾಜು ಕೇಂದ್ರದಲ್ಲಿ ಈ ಬೃಹತ್ ಮೀನನ್ನು ಹರಾಜು ಹಾಕಲಾಯಿತು. ಈ ಹರಾಜಿನಲ್ಲಿ ಮೀನು ಪಡೆಯಲು ಅನೇಕ ವ್ಯಾಪಾರಿಗಳು ಪೈಪೋಟಿ ನಡೆಸಿದರು. ಸುಮಾರು 3 ಗಂಟೆಗಳ ಕಾಲ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಮೀನು ಅಂತಿಮವಾಗಿ ದಕ್ಷಿಣ 24 ಪರಗಣ ಜಿಲ್ಲೆಯ ನೈನಾನ್ ಪ್ರದೇಶದ ಶಿವಾಜಿ ಕಬೀರ್ ಪಾಲಾಯಿತು. ಕೆಜಿಗೆ 26 ಸಾವಿರ ರೂ.ನಂತೆ 13 ಲಕ್ಷ ರೂ.ಗೆ ಮೀನು ಖರೀದಿ ಮಾಡಲಾಗಿದೆ.


ಒಂದೇ ಒಂದು ಮೀನಿಗೆ 13 ಲಕ್ಷ ರೂ. ಬಂದಿದ್ದು ಮೀನುಗಾರರ ಮೊಗದಲ್ಲಿ ಸಂತಸನ್ನು ಮೂಡಿಸಿತ್ತು. ಬೃಹತ್ ಮೀನು ನೋಡಲು ಅಪಾರ ಜನರು ಹರಾಜು ಕಟ್ಟೆಯ ಬಳಿ ಜಮಾಯಿಸಿದ್ದರು. ‘ತೆಲಿಯಾ ಭೋಲಾ’ ಮೀನುಗಳನ್ನು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸೇವನೆಯ ಜೊತೆಗೆ ಹಲವಾರು ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಹೀಗಾಗಿಯೇ ಈ ಮೀನಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದ್ದು, ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತದೆ.


ಇದನ್ನೂ ಓದಿ: ಕನ್ಹಯ್ಯ ಲಾಲ್‌ ಹತ್ಯೆಗೆ ಪಾಕ್‌ನಿಂದ ಬಂದಿತ್ತು ಆದೇಶ!


ಈ ಮೀನು ಬಲೆಗೆ ಬೀಳುವುದು ತೀರಾ ಅಪರೂಪ. ಒಂದು ವೇಳೆ ಅದು ಸಿಕ್ಕರೆ ಆ ಮೀನುಗಾರರ ಅದೃಷ್ಟವೇ ಒಂದೇ ದಿನದಲ್ಲಿ ಬದಲಾಗಿಬಿಡುತ್ತದೆ. ಲಕ್ಷ ಲಕ್ಷ ರೂ. ನೀಡಿ ಈ ಮೀನು ಖರೀದಿಸಲು ಮರುಕಟ್ಟೆಯಲ್ಲಿ ಪೈಪೋಟಿ ಇರುತ್ತದೆ. ದೇಶ-ವಿದೇಶದಲ್ಲಿಯೂ ಈ ಮೀನುಗಳಿಗೆ ದೊಡ್ಡಮಟ್ಟದ ಬೇಡಿಕೆ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ