ಈ 11 ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ದೆಹಲಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನೈಋತ್ಯ ಮುಂಗಾರು ಚುರುಕಾಗಿ ಮುಂದುವರೆದಿದೆ. ಇದಲ್ಲದೇ ಇನ್ನೂ ಮುಂಗಾರು ಆಗಮಿಸದ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಪ್ರವೇಶವಾಗಲಿದೆ.

Written by - Bhavishya Shetty | Last Updated : Jul 2, 2022, 09:08 AM IST
  • ಬಹುತೇಕ ರಾಜ್ಯಗಳಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ
  • ಭಾರತೀಯ ಹವಾಮಾನ ಇಲಾಖೆ ಮಾಹಿತಿ
  • ಮುಂದಿನ ದಿನಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಈ 11 ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ title=
imd satellite

ದೇಶದ ಹಲವಾರು ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಅಪಾರ ಹಾನಿಯುಂಟು ಮಾಡುತ್ತಿದೆ. ಇನ್ನೊಂದೆಡೆ ಇಷ್ಟು ದಿನ ಬಿಸಿಲ ಬೇಗೆಗೆ ತತ್ತರಿಸುತ್ತಿದ್ದ ಧರೆಗೆ ಮಳೆರಾಯ ತಂಪೆರೆದಿದ್ದಾನೆ ಎನ್ನಬಹುದು. 

ದೆಹಲಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನೈಋತ್ಯ ಮುಂಗಾರು ಚುರುಕಾಗಿ ಮುಂದುವರೆದಿದೆ. ಇದಲ್ಲದೇ ಇನ್ನೂ ಮುಂಗಾರು ಆಗಮಿಸದ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಪ್ರವೇಶವಾಗಲಿದೆ. ಈ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಇದನ್ನೂ ಓದಿ: ದತ್ತ ಪೀಠದಲ್ಲಿ ಮುಸ್ಲಿಂ- ಹಿಂದೂ ಪೂಜೆಗೆ ಸಮಾನ ಅವಕಾಶ : ಸಂಪುಟ ಅನುಮೋದನೆ

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮಧ್ಯಪ್ರದೇಶ, ಮುಂಬೈ, ದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ಮಧ್ಯಪ್ರದೇಶದ ಪಶ್ಚಿಮ ಭಾಗಗಳು, ಪೂರ್ವ ರಾಜಸ್ಥಾನ, ನೈಋತ್ಯ ಉತ್ತರ ಪ್ರದೇಶ, ಸಿಕ್ಕಿಂ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಮೇಘಾಲಯ, ಅಸ್ಸಾಂ, ಗೋವಾ, ಕೊಂಕಣ, ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ಕೆಲವು ಭಾಗಗಳಲ್ಲಿ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ. ಇದಲ್ಲದೆ ಈ ರಾಜ್ಯಗಳ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ. 

ದೇಶದಾದ್ಯಂತ ಜುಲೈ 2022 ರ ಮಾಸಿಕ ಮಳೆಯು ಸಾಮಾನ್ಯವಾಗಿರುತ್ತದೆ. ಅಂದರೆ ದೀರ್ಘಾವಧಿಯ ಸರಾಸರಿ (LPA) 94 ಮತ್ತು 106 ಪ್ರತಿಶತದ ನಡುವೆ ಇರಲಿದೆ. ಪ್ರದೇಶವಾರು ಮಳೆಯಲ್ಲಿ ಭಾರಿ ವ್ಯತ್ಯಾಸವಿದ್ದರೂ, ಜೂನ್ ತಿಂಗಳಿನಲ್ಲಿ ಒಟ್ಟಾರೆಯಾಗಿ 'ಸಾಮಾನ್ಯ' ಮಳೆ ದಾಖಲಾಗಿದೆ. ಈಶಾನ್ಯ ಮತ್ತು ವಾಯುವ್ಯದಲ್ಲಿ ಹೆಚ್ಚು ಮಳೆ ಸುರಿದಿದೆ ಎಂದು ಮಾಹಿತಿ ನೀಡಿದೆ. 

ಜುಲೈನಲ್ಲಿ ತಾಪಮಾನಕ್ಕೆ ಸಂಬಂಧಿಸಿದಂತೆ ಮುನ್ಸೂಚನೆ ನೀಡಿದ ಇಲಾಖೆ,  "ʼಸಾಮಾನ್ಯಕ್ಕಿಂತ ಕಡಿಮೆʼ ಗರಿಷ್ಠ ತಾಪಮಾನವು ದೇಶದ ಹೆಚ್ಚಿನ ಭಾಗಗಳಲ್ಲಿ ಸಂಭವಿಸುವ ಸಾಧ್ಯತೆಯಿದೆ. ಹಿಮಾಲಯದ ತಪ್ಪಲಿನಲ್ಲಿ ಮತ್ತು ಪರ್ಯಾಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ 'ಸಾಮಾನ್ಯಕ್ಕಿಂತ ಕಡಿಮೆ' ಗರಿಷ್ಠ ತಾಪಮಾನವನ್ನು ನಿರೀಕ್ಷಿಸಲಾಗಿದೆ" ಎಂದು ತಿಳಿಸಿದೆ. 

ಅಸ್ಸಾಂನಲ್ಲಿ ಪ್ರವಾಹ: 
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಇದರಿಂದ 29 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರವೂ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗಿತ್ತು. ಕ್ಯಾಚಾರ್ ಜಿಲ್ಲಾ ಕೇಂದ್ರ ಸಿಲ್ಚಾರ್‌ನ ಬಹುತೇಕ ಭಾಗಗಳು ಮುಳುಗಡೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಫಲಾನುಭವಿಗಳ 70 ಲಕ್ಷ ರೂ. ದುರ್ಬಳಕೆ ಪ್ರಕರಣ: ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ 

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ)ದ ಪ್ರಕಾರ, ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 159ಕ್ಕೆ ಏರಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಇಲ್ಲಿವರೆಗೆ ಒಟ್ಟು ನಾಪತ್ತೆಯಾದವರ ಸಂಖ್ಯೆ 36 ಕ್ಕೆ ತಲುಪಿದೆ ಎಂದು ಹೇಳಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News