ಬೆಂಗಳೂರು : ಯಾವುದೇ ಪ್ರಾಣಿ ಇರಲಿ ಪಕ್ಷಿ ಇರಲಿ ಮನೆಯಲ್ಲಿ ಅವುಗಳನ್ನು ಸಾಕಿದ ಮೇಲೆ ಅವುಗಳ ಮೇಲೆ ಅತಿಯಾದ ಮೋಹ ಬೆಳೆದು ಬಿಡುತ್ತದೆ. ಈ ಪ್ರಾಣಿ- ಪಕ್ಷಿಗಳು ಎಷ್ಟೋ ಸಲ ಮನಸ್ಸಿನ ಭಾರವನ್ನು ಹಗುರ ಮಾಡುತ್ತದೆ. ತುಂಬಾ ಬೇಜಾರಾಗಿದ್ದಾಗ ಅಥವಾ ಮನದಲ್ಲಿ ನೋವು ತುಂಬಿ ಕೊಂಡಿದ್ದಾಗ ಇವುಗಳ ಬಳಿ ಸ್ವಲ್ಪ ಹೊತ್ತು ಕುಳಿತರೂ ಸಾಕು. ಏನೂ ಮಾತನಾಡದೇ ನಮ್ಮ ಮನದ ಭಾವನೆಯನ್ನು ಅರ್ಥೈಸಿಕೊಂಡು, ಜೊತೆಯಾಗಿ ನಾನಿದ್ದೇನೆ ಎಂದು ಮೂಕ ಭಾಷೆಯಲ್ಲಿಯೇ ಹೇಳಿ ಬಿಡುತ್ತವೆ.  ಇನ್ನು ಕೆಲವೊಮ್ಮೆ ಈ ಪ್ರಾಣಿ ಪಕ್ಷಿಗಳು ನಡೆದುಕೊಳ್ಳುವ ರೀತಿ ಬಹಳ ತಮಾಷೆಯಾಗಿರುತ್ತವೆ.


COMMERCIAL BREAK
SCROLL TO CONTINUE READING

ಇಲ್ಲಿ ಮನೆಯಲ್ಲಿ ಸಾಕಿರುವ ಬೆಕ್ಕು ಮತ್ತು ಕೋಳಿಯ ವಿಡಿಯೋ ವೈರಲ್  ಆಗುತ್ತಿದೆ. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಈ ವಿಡಿಯೋ ವೀಕ್ಷಿಸಿದ ಅನೇಕರು ಇದನ್ನು ಶೇರ್ ಮಾಡುತ್ತಿದ್ದಾರೆ. 


ಇದನ್ನೂ ಓದಿ : Viral News: 11.81 ಇಂಚು ಉದ್ದದ ಗಡ್ಡ ಬಿಟ್ಟ ಮಹಿಳೆ..!


ಕೋಳಿಯಾಗಲಿ, ಬೆಕ್ಕಾಗಲಿ ತನ್ನ ಮರಿಗಳ ಬಗ್ಗೆ ಅಪಾರ ಪ್ರೇಮವನ್ನು ಹೊಂದಿರುತ್ತದೆ. ತನ್ನ ಮರಿಗಳತ್ತ ಯಾರು ಬಂದರೂ ಸುಮ್ಮನಿರುವುದಿಲ್ಲ.  ಕೋಳಿಯಂತೂ ತನ್ನ ಮರಿಗಳ ತಂಟೆಗೆ ಯಾರಾದರೂ ಬಂದರೆ ಕುಕ್ಕಿ ಬಿಡುತ್ತದೆ. ಆದ್ರೆ ತನ್ನ ಮರಿಗಳೇ ತಾಯಿಯಿಂದ ದೂರವಾಗಿ ಬೇರೆಯವರ ಮಡಿಲು ಸೇರಿಕೊಂಡರೆ?  ತಾಯಿ ಕೋಳಿ ಮಾಡುವುದಾದರೂ ಏನು ? 


ಈ ವಿಡಿಯೋದಲ್ಲಿ ತಾಯಿ ಕೋಳಿ ಬೆಕ್ಕು ಮತ್ತು ಕೋಳಿ ಮರಿಗಳನ್ನು ಕಾಣಬಹುದು. ಸಾಮಾನ್ಯವಾಗಿ ಕೋಳಿ ಮರಿಗಳು ತಾಯಿ ಕೋಳಿಯ ಕೆಳಗೆ ಸೇರಿ ಕುಳಿತು ಕೊಂಡಿರುತ್ತದೆ. ಅಲ್ಲಿ ಮರಿಗಳು ಸುರಕ್ಷಿತವಾಗಿರುತ್ತವೆ. ಆದರೆ ಇಲ್ಲಿ ಕೋಳಿ ಮರಿಗಳು ತಾಯಿ ಕೋಳಿಯನ್ನು ಬಿಟ್ಟು ಬೆಕ್ಕಿನ ಮಡಿಲು ಸೇರಿಕೊಂಡಿವೆ. ಕೋಳಿ ತನ್ನ ಮರಿಗಳನ್ನು ತನ್ನತ್ತ ಕರೆಯಲು ಪ್ರಯತ್ನಿಸುತ್ತದೆ. ಆದರೆ ಕೋಳಿ ಮರಿಗಳು ಬೆಕ್ಕನ್ನು ಬಿಟ್ಟು ಬರುವುದಿಲ್ಲ.  ಬೆಕ್ಕು ಕೂಡಾ ಇವೆಲ್ಲವೂ ತನ್ನದೇ ಮರಿಗಳು ಎನ್ನುವಂತೆ ಆ ಮರಿಗಳನ್ನು ಭದ್ರವಾಗಿ ಹಿಡಿದು ಕುಳಿತುಕೊಂಡಿದೆ. 


ಇದನ್ನೂ ಓದಿ : Viral News: ಮಹಿಳೆಯ ಹೊಟ್ಟೆಯಲ್ಲಿ ಹೆಬ್ಬಾವಿನ ಆಕಾರದ 20 ಕೆಜಿ ಮಲ ಪತ್ತೆ..!


ಕೋಳಿ ಪದೇ ಪದೇ ತ್ತು ತನ್ನ ಮರಿಗಳತ್ತ ನೋಡುತ್ತದೆ. ಬೆಕ್ಕು ಯಾವಾಗ ಅಲ್ಲಿಂದ ಎದ್ದು ಹೋಗುತ್ತದೆಯೋ ಎಂದು ಕಾಯುತ್ತಿರುತ್ತದೆ.  ಆದರೆ ಮೊಂಡುತನದ ಬೆಕ್ಕು ಈ ಮರಿಗಳು  ತನ್ನದೇ ಎಂದು ಹೇಳಿಕೊಳ್ಳುವಂತೆ ಅವುಗಳೊಂದಿಗೆಯೇ ಕುಳಿತುಕೊಂಡಿರುವುದನ್ನು ಗಮನಿಸಬಹುದು.  ಕೋಳಿ ಮರಿಗಳು ಕೂಡಾ ಇಲ್ಲಿ ತಮ್ಮ ನಿಜವಾದ ತಾಯಿಯನ್ನು ಗುರುತಿಸುತ್ತಿಲ್ಲ. ಪಾಪ ತಾಯಿ ಕೋಳಿ ಫುಲ್ ಶಾಕ್ ಮೋಡ್ ನಲ್ಲಿ ಬೆಕ್ಕು ಮತ್ತು ತನ್ನ ಮರಿಗಳನ್ನೇ ನೋಡುತ್ತಿದೆ.  


ವೀಡಿಯೊವನ್ನು ಇಲ್ಲಿ ವೀಕ್ಷಿಸಿ : 


 



ಕ್ಲಿಪ್ ಅನ್ನು Instagram ನಲ್ಲಿ @ cats_of_day ಹೆಸರಿನ  ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಕ್ಲಿಪ್ ಅನ್ನು ಹಂಚಿಕೊಂಡಾಗಿನಿಂದ ಸಾವಿರಾರು ಮಣಿದ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹೆಚ್ಚಿನವರು ತಾಯಿ ಕೋಳಿಯ ಸ್ಥಿತಿ ಕಂಡು ಮರಗುತ್ತಿದ್ದಾರೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.