Funny Video: ಹಾಯಾಗಿ ಮಲಗಿ ಮೊಬೈಲ್‌ ನೋಡುವ ಕೋತಿ.. ಇದರ ಮಂಗನಾಟಕ್ಕೆ ನಗು ತಡೆಯಲಾಗದು

Funny Monkey Viral Video: ಈ ವಿಡಿಯೋದಲ್ಲಿ ಕೋತಿ ಮಾಡಿದ ಮಂಗನಾಟಗಳನ್ನು ನೋಡಿದ್ರೆ ನಗು ತಡೆಯಲಾಗುವುದಿಲ್ಲ. ಈ ವಿಡಿಯೋ ನೋಡಿದರೆ ಮನ ಬಿಚ್ಚಿ ನಗುವಿರಿ.   

Written by - Chetana Devarmani | Last Updated : Aug 13, 2023, 08:53 PM IST
  • ಕೋತಿ ಮಾಡಿದ ಮಂಗನಾಟ ವೈರಲ್‌
  • ಮೊಬೈಲ್‌ ನೋಡುತ್ತ ಮಲಗಿರುವ ಮಂಗ
  • ಹಾಯಾಗಿ ಮಲಗಿ ಮೊಬೈಲ್‌ ನೋಡುವ ಕೋತಿ
Funny Video: ಹಾಯಾಗಿ ಮಲಗಿ ಮೊಬೈಲ್‌ ನೋಡುವ ಕೋತಿ.. ಇದರ ಮಂಗನಾಟಕ್ಕೆ ನಗು ತಡೆಯಲಾಗದು   title=

Monkey Funny Video: ಇಂಟರ್ನೆಟ್ ಒಂದು ವಿಭಿನ್ನ ಜಗತ್ತು. ಅದರಲ್ಲಿ ಹಲವಾರು ರೀತಿಯ ಅದ್ಭುತಗಳನ್ನು ಹೊಂದಿದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಉದ್ವೇಗದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇವುಗಳಲ್ಲಿ, ಪ್ರಾಣಿಗಳ ವಿಡಿಯೋಗಳು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿವೆ.  
 
ನೆಟಿಜನ್‌ಗಳು ಮಂಗಗಳ ಚೇಷ್ಟೆ ಇಷ್ಟಪಡುತ್ತಾರೆ. ಕೋತಿಗಳ ಅನೇಕ ವಿಡಿಯೋಗಳು ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲ್ಪಡುತ್ತವೆ. ಕೋತಿಗಳು ಮಾಡುವ ಹಲವು ರೀತಿಯ ಚೇಷ್ಟೆಗಳನ್ನು ನಾವು ಹಲವು ವಿಡಿಯೋಗಳಲ್ಲಿ ನೋಡಿದ್ದೇವೆ.

ಇದನ್ನೂ ಓದಿ : ರಶ್ಮಿಕಾಗೆ ಡಿಸೆಂಬರ್ ತಿಂಗಳು ತುಂಬಾ ಸ್ಪೆಷಲ್ ಅಂತೆ, ಕಾರಣ ಕೂಡ ಅವರೇ ಹೇಳಿದ್ದಾರೆ ಕೇಳಿ

ರಸ್ತೆಗಳಲ್ಲಿ ಮಂಗಗಳ ಕಾಟಕ್ಕೆ ಮಿತಿಯೇ ಇಲ್ಲ. ರಸ್ತೆಯಲ್ಲಿ ನಡೆಯುವವರಿಂದ ವಸ್ತುಗಳನ್ನು ಕಸಿದುಕೊಳ್ಳುವುದು, ದಾರಿಹೋಕರ ಹೆಗಲ ಮೇಲೆ ಕೂರುವುದು, ಕೂದಲು ಎಳೆಯುವುದು ಹೀಗೆ ಹಲವು ರೀತಿಯಲ್ಲಿ ಜನರಿಗೆ ತೊಂದರೆ ನೀಡುತ್ತವೆ.

ಇತ್ತೀಚೆಗಷ್ಟೇ ವೈರಲ್‌ ಆದ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ನೆಟ್ಟಿಗರನ್ನು ಬೆಚ್ಚಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಮನುಷ್ಯರಂತೆ ಮೊಬೈಲ್ ಚಟಕ್ಕೆ ಬಿದ್ದಿರುವ ಮಂಗನ ವಿಡಿಯೋ ಒಂದೆಡೆ ತಮಾಷೆಯಾಗಿದ್ದರೆ, ಮತ್ತೊಂದೆಡೆ ಈ ಮೊಬೈಲ್ ವ್ಯಾಮೋಹಕ್ಕೆ ಪ್ರಾಣಿಗಳೂ ಬಲಿಯಾಗಬೇಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

 

 
 
 
 

 
 
 
 
 
 
 
 
 
 
 

A post shared by Mb Sidhu (@i__con_01)

 

ವಿಡಿಯೋದಲ್ಲಿ ವರ್ಣರಂಜಿತ ಬಟ್ಟೆ ತೊಟ್ಟ ಮಂಗವೊಂದು ಹಾಸಿಗೆಯ ಮೇಲೆ ಮಲಗಿ ಮೊಬೈಲ್ ಫೋನ್‌ನಲ್ಲಿ ಏನನ್ನೋ ನೋಡುತ್ತಿರುವುದನ್ನು ಕಾಣಬಹುದು. ತನ್ನನ್ನು ಯಾರೋ ವಿಡಿಯೋ ಮಾಡುತ್ತಿದ್ದಾರೆ ಎಂದು ತಿಳಿದು ತಲೆ ಎತ್ತಿ ನೋಡುತ್ತದೆ. ಆದರೆ, ಆ ನಂತರವೂ ಅದರತ್ತ ಗಮನ ಹರಿಸದೆ ಮತ್ತೆ ಮೊಬೈಲ್ ನೋಡುವುದರಲ್ಲಿ ನಿರತವಾಗುತ್ತದೆ.

i__con_01 ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದು ಸಾಕಷ್ಟು ವೀಕ್ಷಣೆಗಳು ಮತ್ತು ಲೈಕ್ಸ್‌ ಪಡೆಯುತ್ತಿದೆ. ಈ ಬಗ್ಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಮಂಗ ಮನುಷ್ಯನಂತೆ ವೇಷ ಧರಿಸಿ ಮನುಷ್ಯನಂತೆಯೇ ಹಾಸಿಗೆಯ ಮೇಲೆ ಮಲಗಿ ಮೊಬೈಲ್ ನೋಡುತ್ತಿರುವುದು ತಮಾಷೆಯಾಗಿದೆ. ಪ್ರಾಣಿಗಳು ಮೊಬೈಲ್ ಗೆ ಅಡಿಕ್ಟ್ ಆಗಿವೆ ಎಂದು ಕೆಲವರು ವಿಷಾದನೀಯವಾಗಿದೆ. 

ಇದನ್ನೂ ಓದಿ: 'ರೂಮ್‌ಗೆ ಬಾ ಎಂದ, ಕೈ ಹಿಡಿದು ಎಳೆದ...' ಖ್ಯಾತ ನಿರೂಪಕಿಯ ಕರಾಳ ಅನುಭವ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News