ಕನ್ನಡಿ ಮುಂದೆ ಮಂಗನಾಟ ! ಹೊಟ್ಟೆ ಹುಣ್ಣಾಗುವಂತೆ ನಗು ತರಿಸುವ ವಿಡಿಯೋವಿದು
ಸೋಶಿಯಲ್ ಮೀಡಿಯಾದಲ್ಲಿ ನಮ್ಮನ್ನು ಬೆರಗುಗೊಳಿಸುವ, ಹೊಟ್ಟೆ ಹಿಡಿದು ನಗುವಂತೆ ಮಾಡುವ ದೃಶ್ಯಗಳಿಗೆ ಕೊರತೆ ಇರುವುದಿಲ್ಲ. ಇಂಥ ಸಾವಿರಾರು ವಿಡಿಯೋಗಳು ನಿಮಿಷ ನಿಮಿಷಕ್ಕೆ ಅಪ್ಲೋಡ್ ಆಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಲೋಕದಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರು : ಒತ್ತಡದ ಬದುಕಿನಿಂದ ಸ್ವಲ್ಪ ವಿಶ್ರಾಂತಿ ಬೇಕು ಎನ್ನಿಸಿದಾಗ ಮನಸು ಸಾಮಾಜಿಕ ಮಾಧ್ಯಮದತ್ತ ಹೊರಳಿ ಬಿಡುತ್ತದೆ. ಈಗಂತೂ ಬೆರಳ ತುದಿಯಲ್ಲಿ ಎಲ್ಲಾ ಸಾಮಾಜಿಕ ಮಾಧ್ಯಮಗಳೂ ಲಭ್ಯವಿದೆ. ಅದಕ್ಕೆ ತಕ್ಕಂತೆ ಚಿತ್ರ ವಿಚಿತ್ರ ವಿಡಿಯೋಗಳು ಕೂಡಾ ಇಲ್ಲಿ ಕಣ್ಣಿಗೆ ಬೀಳುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ನಮ್ಮನ್ನು ಬೆರಗುಗೊಳಿಸುವ, ಹೊಟ್ಟೆ ಹಿಡಿದು ನಗುವಂತೆ ಮಾಡುವ ದೃಶ್ಯಗಳಿಗೆ ಕೊರತೆ ಇರುವುದಿಲ್ಲ. ಇಂಥ ಸಾವಿರಾರು ವಿಡಿಯೋಗಳು ನಿಮಿಷ ನಿಮಿಷಕ್ಕೆ ಅಪ್ಲೋಡ್ ಆಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಲೋಕದಲ್ಲಿ ಸದ್ದು ಮಾಡುತ್ತಿದೆ. ಅದು ಕೋತಿಯ ವಿಡಿಯೋ.
ಕೋತಿಗಳು ಚೇಷ್ಟೆ ಮಾಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಮಂಗಗಳ ಮನಸ್ಥಿತಿಯನ್ನು ಊಹಿಸುವುದು ಕಷ್ಟ. ಒಂದು ಕ್ಷಣ ಮೌನವಾಗಿ ಕುಳಿತಿದ್ದರೆ ಮರು ಕ್ಷಣವೇ ಸದ್ದು ಗದ್ದಲಕ್ಕೆ ಇಳಿದು ಬಿಡುತ್ತವೆ. ಕಪಿ ಚೇಷ್ಟೆಯ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ನೋಡುಗರಿಗೆ ನಗು ತರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.
ಇದನ್ನೂ ಓದಿ : Video : ಬಳಲಿ ಬಾಯಾರಿ ಬಂದ ವಿಷ ಸರ್ಪಕ್ಕೆ ನೀರುಣಿಸಲು ವ್ಯಕ್ತಿ ಹರ ಸಾಹಸ
ಕೋತಿ ಒಮ್ಮೆ ಕಾಟ ಕೊಡಲು ಆರಂಭಿಸಿದರೆ ಮತ್ತೆ ಅದಕ್ಕೆ ಕೊನೆಯೇ ಇರುವುದಿಲ್ಲ. ಇನ್ನು ತನಗೆ ಹಸಿವಾದಾಗ ದಾರಿ ಹೋಕರನ್ನು ಹೈರಾಣಾಗಿಸಿ ಬಿಡುತ್ತವೆ. ರಸ್ತೆಯಲ್ಲಿ ನಡೆದಾಡುವವರ ಕೈಯ್ಯಲ್ಲಿರುವ ವಸ್ತುಗಳನ್ನು ಕಿತ್ತು ತಿನ್ನಲು ಆರಂಭಿಸುತ್ತದೆ. ಕೂದಲು ಎಳೆಯುವುದು, ಹಿಂದಿನಿಂದ ಬಂದು ಹೊಡೆದು ಓಡುವುದು, ಬಟ್ಟೆ ಎಳೆದಾಡುವುದು ಹೀಗೆ ಹತ್ತು ಹಲವು ರೀತಿಯಲ್ಲಿ ಕಾಟ ಕೊಡಲು ಆರಂಭಿಸುತ್ತದೆ. ಇದೇ ಕಾರಣಕ್ಕೆ ಮಂಗಗಳಿಂದ ಎಚ್ಚರ ವಹಿಸುವಂತೆ ಅನೇಕ ದೇವಸ್ಥಾನಗಳಲ್ಲಿ ಸೂಚನಾ ಫಲಕಗಳನ್ನು ಹಾಕಿರುತ್ತಾರೆ. ಇತ್ತೀಚಿಗೆ ಸಾಮಾಜಿ ಮಾಧ್ಯಮದಲ್ಲಿ ಕೋತಿಯ ತಮಾಷೆಯ ವಿಡಿಯೋವೊಂದು ಹರಿದಾಡುತ್ತಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಕ್ಷರಶಃ ಕಪಿ ಚೇಷ್ಟೆಯನ್ನು ಕಾಣಬಹುದು. ಕೋತಿಯೊಂದು ಜಿಗಿಯುತ್ತಾ ಜಿಗಿಯುತ್ತಾ ಮನೆಯ ಮಹಡಿಯನ್ನು ತಲುಪುತ್ತದೆ. ಇಲ್ಲಿ ಗೋಡೆಯ ಮೇಲೆ ದೊಡ್ಡ ಕನ್ನಡಿಯನ್ನು ಇರಿಸಿರುವುದನ್ನು ಕಾಣಬಹುದು. ಕೋತಿ ಕನ್ನಡಿಯಲ್ಲಿ ತನ್ನದೇ ಬಿಂಬವನ್ನು ಕಂಡು ಬೆಚ್ಚಿ ಬೀಳುತ್ತದೆ. ಒಂದು ನಿಮಿಷ ನೇರವಾಗಿ ನಿಂತು ತನ್ನನ್ನೇ ದಿಟ್ಟಿಸತೊಡಗುತ್ತದೆ. ಮುಂದಿನ ತಮಾಷೆಯ ದೃಶ್ಯಗಳನ್ನು ನೀವೇ ನೋಡಿ.
Funny Video: ಅಮ್ಮನ ಓವರ್ ಮೇಕಪ್‌ನಿಂದ ಕಂಗಾಲಾದ ಮಗು.. ತಾಯಿಯನ್ನೇ ಗುರುತಿಸದೇ ಬಿಕ್ಕಿ ಬಿಕ್ಕಿ ಅತ್ತ ಪುಟಾಣಿ
ಆಶ್ಚರ್ಯದಿಂದ ಕನ್ನಡಿಯತ್ತ ನೋಡುತ್ತಿರುವ ಕೋತಿಯು ತಾನು ಏನು ಮಾಡುತ್ತಿದ್ದರೂ ಎದುರಿನ ಮಂಗ ಕೂಡಾ ಅದನ್ನೇ ಮಾಡುತ್ತಿದೆ. ಆ ಮಂಗ ತನ್ನನ್ನು ನಕಲು ಮಾಡುತ್ತಿದೆ ಎಂದು ಭಾವಿಸುತ್ತದೆ. ಕನ್ನಡಿಯಲ್ಲಿ ತನ್ನ ಬಿಂಬವನ್ನೇ ಕಂಡು ವಿಚಿತ್ರವಾಗಿ ಆಡುವ ಈ ಕಪಿಯ ವಿಡಿಯೋ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ.
ಕೋತಿಯ ಈ ತಮಾಷೆಯ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ದಿ ಖುರಾಪತಿ ಇಂಡಿಯನ್ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೀಕ್ಷಣೆಗಳು ಮತ್ತು ಇಷ್ಟಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ : Viral Video: ವಧು-ವರರ ಮಧ್ಯೆ ಹಿಗ್ಗಾಮುಗ್ಗ ಹೊಡೆದಾಟ.. ಕಬಡ್ಡಿ ಮೈದಾನವಾಯ್ತು ಮದುವೆ ಮಂಟಪ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.