ಬೆಂಗಳೂರು: ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ 'X' ನಲ್ಲಿ ಹಲವು ತಮಾಷೆಯಿಂದ ಕೂಡಿದ ವಿಡಿಯೋಗಳು ಬಿತ್ತರಗೊಳ್ಳುತ್ತವೆ. ಆದರೆ, ಕೆಲ ವಿಡಿಯೋಗಳು ಮಾತ್ರ ಜನರ ಭಾರಿ ಮನ್ನಣೆಯನ್ನು ಪಡೆದುಕೊಳ್ಳುತ್ತವೆ. ಅವುಗಳಲ್ಲಿ ಕೆಲ ವಿಡಿಯೋಗಳು ಭಾರಿ ಚರ್ಚೆಗೆ ಕೂಡ ಗ್ರಾಸವಾಗುತ್ತವೆ. ಅಂತಹುದೇ ಒಂದು ವೀಡಿಯೋ ಇದೀಗ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಜನರಿಗೆ ತಮ್ಮ ನಗುವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಇಬ್ಬರು ಹುಡುಗಿಯರ ಜೊತೆಗೆ ಅವರು ಊಹಿಸಲೂ ಸಾಧ್ಯವಾಗದಂತಹ ಒಂದು ಘಟನೆ ನಡೆದಿದೆ. ಜನರು ಈ ವಿಡಿಯೋಗೆ ಸಾಕಷ್ಟು ತಮಾಷೆಯಿಂದ ಕೂಡಿದ ರಿಯಾಕ್ಷನ್ ನೀಡುತ್ತಿದ್ದಾರೆ. ಇದೇ ವೇಳೆ ಕೆಲವರು ಈ ವಿಡಿಯೋ ಬಗ್ಗೆ ತಮ್ಮ ಅನಿಸಿಕೆಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ (Viral News In Kannada).


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಡಬಲ್ ಡೆಕ್ಕರ್ ಸೈಕಲ್ ಮೇಲೆ ದೊಡಪ್ಪನ ಸವಾರಿ, 'ಮೇಲೆ ಕುಂತೆ, ಕೆಳಗ್ ಹ್ಯಾಂಗ್ ಇಳಿತೀಯಾ ಚಾಚಾ?' ಪ್ರಶ್ನಿಸಿದ ನೆಟ್ಟಿಗರು
.
ನಡುರಸ್ತೆಯಲ್ಲಿ ಇಬ್ಬರು ಹುಡುಗಿಯರು ಫೋಟೋಶೂಟ್ ಮಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅಷ್ಟೊತ್ತಿಗೆ  ಅಲ್ಲೊಂದು ತುಂಟ ನಾಯಿಯ ಎಂಟ್ರಿ ಆಗುತ್ತದೆ. ನಾಯಿಯು ಹುಡುಗಿಯ ಬಟ್ಟೆಗಳನ್ನು ತನ್ನ ಬಾಯಿಯಿಂದ ಎಳೆಯುತ್ತದೆ ಮತ್ತು ಹುಡುಗಿಯ ಸಂಪೂರ್ಣ ಬಟ್ಟೆ ಬಿಚ್ಚಿಹೋಗುತ್ತದೆ. ಇದಾದ ಬಳಿಕ ತುಂಟ ನಾಯಿ ತನ್ನ ಬಾಯಿಯಲ್ಲಿ ಹುಡುಗಿಯ ಬಟ್ಟೆ ಹಿಡಿದುಕೊಂಡು ಓಡುತ್ತದೆ ಮತ್ತು ಹುಡುಗೆ ಅರೆಬರೆ ಅವಸ್ಥೆಯಲ್ಲಿ ನಾಯಿಯ ಹಿಂದೆ ಓಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಜನರು ಅದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವೀಡಿಯೋಗೆ ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇಂತಹ ವೀಡಿಯೊಗಳು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಗಮನಾರ್ಹ


ಇದನ್ನೂ ಓದಿ-ರೈಲಿನಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದ ವ್ಯಕ್ತಿಗೆ ಚಪ್ಪಲಿಯಿಂದ ಮಂಗಳಾರತಿ ಎತ್ತಿದ ಅಕ್ಕ!


ವೈರಲ್ ಆಗಿರುವ ವಿಡಿಯೋಗೆ ಜನ ಏನು ಪ್ರತಿಕ್ರಿಯೆ ನೀಡುತ್ತಿದ್ದಾರೆ?
ವೈರಲ್ ಆಗುತ್ತಿರುವ ವಿಡಿಯೋವನ್ನು ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವಿಡಿಯೋಗೇ ಕಾಮೆಂಟ್ ಮಾಡಿದ ಓರ್ವ ಬಳಕೆದಾರ, 'ರಸ್ತೆಯ ಮಧ್ಯದಲ್ಲಿ ಫೋಟೋ ಕ್ಲಿಕ್ಕಿಸಿದ ಫಲಿತಾಂಶ' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರ, 'ನಾಯಿಯು ತುಂಬಾ ಬುದ್ಧಿವಂತ ನಾಯಿಯಾಗಿದೆ' ಎಂದು ಬರೆದಿದ್ದಾರೆ. ಇದೇ ವೇಳೆ, ಮೂರನೇ ಬಳಕೆದಾರರು ಬರೆದಿದ್ದಾರೆ, 'ತುಂಬಾ ತಮಾಷೆಯ ವೀಡಿಯೊ.' ಎಂದು ಹೇಳಿದ್ದಾರೆ.


ಇಲ್ಲಿದೆ ಆ ವೈರಲ್ ವೀಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ