ಬೆಂಗಳೂರು : ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ, ಪ್ರಾಣಿಗಳ ನಡುವಿನ ಕಾದಾಟದ ವೀಡಿಯೊಗಳನ್ನು ಹೆಚ್ಚು ವೀಕ್ಷಿಸಲಾಗುತ್ತದೆ.  ಅವುಗಳಲ್ಲಿ ಕೆಲವು ತುಂಬಾ ಅಪಾಯಕಾರಿ ಎಂದೆನಿಸುತ್ತದೆ. ಆ ವಿಡಿಯೋಗಳನ್ನು ನೋಡುವಾಗ ಎಂಥವರ ಕೈ ಕಾಲು ಕೂಡಾ ನಡುಗಿ ಬಿಡುತ್ತದೆ. ಇನ್ನು ಕೆಲವು ಎಷ್ಟು ತಮಾಷೆಯದ್ದಾಗಿರುತ್ತದೆ ಎಂದರೆ ನಗು ತಡೆಯುವುದೇ ಇಲ್ಲ. ಅಂತಹದ್ದೇ ಒಂದು ವಿಡಿಯೋ ಇದೀಗ ಹೊರಬಿದ್ದಿದೆ. ವೀಡಿಯೊದಲ್ಲಿ ನಾವು ಅಪಾಯಕಾರಿ ನಾಗರಹಾವನ್ನು ಕಾಣಬಹುದು. ಮಾರ್ಗ ಮಧ್ಯೆ ತನ್ನ ಪಾಡಿಗೆ ಹೋಗುತ್ತಿದ್ದ ಹಾವಿಗೆ ಎದುರಾದದ್ದು ಕಪಿರಾಯ. ನಾಗರ ಹಾವನ್ನು ಕಂಡು ಕೋತಿ ಇಲ್ಲಿ ಹೆದರಲಿಲ್ಲ. ಬದಲಾಗಿ ತನ್ನ ಚೇಷ್ಟೆಗೆ ಇಳಿದು ಬಿಟ್ಟಿದೆ. 


COMMERCIAL BREAK
SCROLL TO CONTINUE READING

ತನ್ನೆದುರು ಹೆಡೆಯೆತ್ತಿ ನಿಂತಿರುವ ಹಾವನ್ನು ಕಂಡ ಕೋತಿ ಒಂದು ಚೂರೂ ಭಯ ಬೀಳಲಿಲ್ಲ. ಬದಲಾಗಿ ಬುಸುಗುಡುತಿದ್ದ ಹಾವನ್ನು ಕಂಡು ತನ್ನ ಕೋತಿ ಬುದ್ದಿ ತೋರಿಸಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾಂತರ  ಮಂದಿ ವೀಕ್ಷಿಸಿದ್ದಾರೆ.  


ಇದನ್ನೂ ಓದಿ : Shocking Video: ಅಪಾಯಕಾರಿ ಹಾವನ್ನು ಕಚ್ಚಿ ತಿನ್ನುವ ಜಿಂಕೆ, ವಿಡಿಯೋ ನೋಡಿ ಶಾಕ್‌ ಆಗ್ತೀರಾ!


ಈ ವಿಡಿಯೋದಲ್ಲಿ ಸರಸರನೆ ಹರಿದಾಡುವ ನಾಗರಹಾವನ್ನು ಕಾಣಬಹುದು. ಹಾವು ಹೋಗುತ್ತಿರುವ ವೇಳೆ ಎದುರಿಗೆ ಕೋತಿ ಬಂದು ನಿಲ್ಲುತ್ತದೆ. ಕೋತಿ ಯನ್ನು ಕಂಡೊಡನೆ ಹಾವು ಹೆಡೆಯೆತ್ತಿ ಬುಸುಗುಟ್ಟಲು ಆರಂಭಿಸುತ್ತದೆ.  
 ಹಾವಿನ ಈ ರೂಪವನ್ನು ಕಂಡ ಕೋತಿಗೆ ಅದೇನನಿಸಿತೋ ಗೊತ್ತಿಲ್ಲ. ಕಪಿ ಚೇಷ್ಟೆಗೆ ಮುಂದಾಗುತ್ತದೆ. ಸ್ವಲ್ಪ ಸಮಯದವರೆಗೆ ಹಾವನ್ನೇ ದಿಟ್ಟಿಸಿ ನೋಡಿದ ಕೋತಿ ಒಮ್ಮೆಲೇ ಹಾವಿನ ಬಾಲ ಹಿಡಿದು ಎಳೆದಾಡುತ್ತದೆ. ಒಂದೆರಡು ಬಾರಿ ಹಾವು ಕೂಡಾ ಕೋಟಿಗೆ ಕುಟುಕಲು ಪ್ರಯತ್ನಿಸುತ್ತದೆ.  ಆದರೂ ಕೋತಿ ಒಂದು ಚೂರೂ ಹೆದರುವುದಿಲ್ಲ. ಮತ್ತೆ ಮತ್ತೆ ಹಾವಿನ ಬಾಲ ಹಿಡಿದು ಎಳೆದಾಡುತ್ತದೆ.  


 



 
ಇದನ್ನೂ ಓದಿ Viral Story: ಕರೆಂಟ್ ಶಾಕ್‌ನಿಂದ ಮರಿ ಮಂಗ ಸಾವು; ಮುಗಿಲು ಮುಟ್ಟಿದ ತಾಯಿ ಮಂಗನ ರೋಧನೆ


ಕೋತಿಯ ಕೃತ್ಯದಿಂದ ಬೇಸತ್ತ ಹಾವು ಕೂಡಾ ನಂತರ ಆಕ್ರಮಣಕಾರಿ ದಾಳಿಗೆ ಮುಂದಾಗುತ್ತದೆ. ಹಾವಿನ ಆಕ್ರಮಣಕಾರಿ ವರ್ತನೆಯನ್ನು ಕಂಡು ಕೋತಿಯೂ ತನ್ನ ಹೆಜ್ಜೆ ಹಿಂದಿಡುತ್ತದೆ. ಇದಾದ ನಂತರ ಮತ್ತೆ ಹಾವನ್ನು ಚುಡಾಯಿಸುವ ತಪ್ಪನ್ನು ಕೋತಿ ಮಾಡುವುದಿಲ್ಲ. ಕಳೆದ ಕೆಲವು ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 


shnoyakam ಹೆಸರಿನ ಹ್ಯಾಂಡಲ್‌ನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಸಹ ಹಂಚಿಕೊಳ್ಳಲಾಗಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.